Asianet Suvarna News Asianet Suvarna News

ಅಪಘಾತಕ್ಕೊಳಗಾದರೂ ರಿಪೋರ್ಟಿಂಗ್‌ ನಿಲ್ಲಿಸದ ವರದಿಗಾರ್ತಿ

 

  • ಅಪಘಾತಕ್ಕೊಳಗಾದ ವರದಿಗಾರ್ತಿ
  • ರಿಪೋರ್ಟಿಂಗ್‌ ಮಾಡುತ್ತಿದ್ದಾಗ ಅಪಘಾತ
  • ಸವರಿಸಿಕೊಂಡು ವರದಿಗಾರಿಕೆ ಮುಂದುವರಿಸಿದ  ಟೋರಿ 
US Reporter hit by car gets back up to continue reporting akb
Author
Bangalore, First Published Jan 22, 2022, 11:18 AM IST

ನ್ಯೂಯಾರ್ಕ್‌(ಜ.22): ಲೈವ್‌ ರಿಪೋರ್ಟಿಂಗ್‌ಗೆ ಇರುವ ಸವಾಲುಗಳು ಅಷ್ಟಿಷ್ಟಲ್ಲ. ಪತ್ರಕರ್ತರು ಯಾವುದೇ ಸಂದರ್ಭವನ್ನು ಎದುರಿಸಲು ಸಿದ್ಧರಾಗಿರಬೇಕು ಹಾಗೂ ಸಿದ್ಧರಾಗಿರುತ್ತಾರೆ. ಅದಕ್ಕೆ ಈಗ ನಾವು ಹೇಳಲು ಹೊರಟಿರುವ ಘಟನೆಯೇ ಉದಾಹರಣೆ. ಲೈವ್‌ ರಿಪೋರ್ಟಿಂಗ್‌ ಮಾಡುತ್ತಾ ನಿಂತಿದ್ದ ವರದಿಗಾರ್ತಿಯೊಬ್ಬರಿಗೆ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ಅವರು ಕೆಳಗೆ ಬಿದ್ದಿದ್ದಾರೆ. ಕೂಡಲೇ ಚೇತರಿಸಿಕೊಂಡ ಆಕೆ ವರದಿಗಾರಿಕೆಯನ್ನು ಮುಂದುವರಿಸಿದ್ದಾಳೆ. ಟಿವಿ ಲೈವ್‌ನಲ್ಲೇ ಈ ಘಟನೆ ನಡೆದಿದ್ದು, ನೋಡುಗರು ಹಾಗೂ ಪ್ಯಾನೆಲ್‌ನಲ್ಲಿದ್ದ ನಿರೂಪಕ ಕೂಡ ಗಾಬರಿಯಾಗಿದ್ದಾನೆ. 

ಅಮೆರಿಕಾದ ವರ್ಜಿನಿಯಾದಲ್ಲಿ ಈ ಘಟನೆ ನಡೆದಿದೆ. WSAZ-TVಯ ಟೋರಿ ಯೊರ್ಗೆ (Tori Yorgey)  ಅವರು ಪಶ್ಚಿಮ ವರ್ಜೀನಿಯಾದ (West Virginia) ಡನ್‌ಬಾರ್‌ ( Dunbar)ನಲ್ಲಿ ನೀರು ಒಡೆದು ಪೋಲಾಗುತ್ತಿರುವ ಬಗ್ಗೆ ವರದಿ ಮಾಡುತ್ತಿದ್ದಾಗ ಕಾರೊಂದು ಅವರನ್ನು ಬದಿಯಿಂದ ಗುದ್ದಿಕೊಂಡು ಹೋಗಿದೆ. ಅವರು ನ್ಯೂಸ್‌ಗೆ ನೀರಿನ ಸಮಸ್ಯೆ ಬಗ್ಗೆ ವರದಿ ನೀಡುತ್ತಿರುವಾಗಲೇ ಈ ಅನಾಹುತ ಸಂಭವಿಸಿದೆ. ಬೂದು ಬಣ್ಣದ ಪಿಕಪ್ ಟ್ರಕ್ ಅವಳನ್ನು ಹಿಂದಿನಿಂದ ಗುದ್ದಿ ರಸ್ತೆಗೆ ಬೀಳಿಸಿತ್ತು.

 

ಗೃಹಿಸದೇ ಸಂಭವಿಸಿದ ಈ ಅಪಘಾತವನ್ನು ಸುದ್ದಿ ನಿರೂಪಕ ಟಿಮ್ ಇರ್ ( Tim Irr) ಅವರು ತಕ್ಷಣವೇ ಗೃಹಿಸಲು ವಿಫಲರಾದರು. ಆದರೆ ಟೋರಿ ಯೊರ್ಗೆ ಅಪಘಾತವಾದ ಕೂಡಲೇ ಸವರಿಸಿಕೊಂಡು ವರದಿಗಾರಿಕೆ ಮುಂದುವರಿಸಿದ್ದಲ್ಲದೇ ತನಗೆ ಏನು ಆಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಆದರೂ ಅವರ ಧ್ವನಿಯಲ್ಲಿ ವ್ಯತ್ಯಾಸವಾಗಿದ್ದು ಗಮನಕ್ಕೆ ಬರುತ್ತಿತ್ತು. 

ರೋಚಕ ಸುದ್ದಿ ವರದಿ ಮಾಡುತ್ತಿದ್ದ ಖ್ಯಾತ ಪತ್ರಕರ್ತೆ ಅಪಘಾತದಲ್ಲಿ ಸಾವು!

ಓ ದೇವರೇ ಎಂದು ಉದ್ಘರಿಸಿದ ಆಕೆ ನನಗೆ ಕಾರು ಡಿಕ್ಕಿ ಹೊಡೆದಿದೆ ಆದರೆ ನಾನು ಚೆನ್ನಾಗಿದ್ದೇನೆ ಎಂದು ನಂತರದಲ್ಲಿ ಆಕೆ ಹೇಳಿದಳು. ಅದಕ್ಕೆ ನಿರೂಪಕ ಟೋರಿ ಇದು ನಿಮಗೆ ಮೊದಲ ಅನುಭವವಾಗಿರಬೇಕು ಎಂದು ಹೇಳಿದರು. ಇದೇ ವೇಳೆ ಬಹುಶಃ ಗುದ್ದಿದ ವಾಹನದ ಚಾಲಕನಿರಬೇಕು  ನೀವು ಚೆನ್ನಾಗಿದ್ದೀರಾ ಎಂದು ಕೇಳುತ್ತಾನೆ. ಅದಕ್ಕೆ ಆಕೆ ಸರಿ ಇದ್ದೇನೆ ಎಂದು ಪ್ರತಿಕ್ರಿಯಿಸುತ್ತಾರೆ. ಅಲ್ಲದೇ ತನಗೆ ಕಾಲೇಜಿನಲ್ಲಿದ್ದಾಗಲು ಹೀಗೊಮ್ಮೆ ಅಪಘಾತವಾಗಿತ್ತು. ಆದರೆ ಆಗಲೂ ನನಗೆ ಏನೂ ಆಗಿರಲಿಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ. 

ಮಹಿಳೆಯರ ರಕ್ಷಣೆ ಹೇಗೆ ಮಾಡ್ತೀರಿ?: ತಾಲಿಬಾನ್‌ ಉಗ್ರನಿಗೆ ವರದಿಗಾರ್ತಿಯ ನೇರ ಪ್ರಶ್ನೆ!

ಆದರೆ ನಿಮಗೆ ಅಪಘಾತವಾಗಿದ್ದು ನನಗೆ ತಕ್ಷಣಕ್ಕೆ ಗೊತ್ತೇ ಆಗಲಿಲ್ಲ. ನನಗೆ ನೀವು ಸ್ಕ್ರೀನ್‌ನಿಂದ ತಕ್ಷಣಕ್ಕೆ  ಮರೆಯಾಗಿದ್ದು ಗೊತ್ತಾಯಿತು. ಈ ವೇಳೆ ಸ್ಟಡಿಯೋ ಹೋಸ್ಟ್‌ ಕೇಳಿದರು ಎಂದು ನಿರೂಪಕ ಹೇಳಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ವರದಿಗಾರ್ತಿ ನನ್ನ ಇಡೀ ಜೀವನವೇ ಒಮ್ಮೆ ನನ್ನ ಕಣ್ಣ ಮುಂದೆ ಬಂದಂತಾಯ್ತು ಎಂದು ಪ್ರತಿಕ್ರಿಯಿಸಿದ್ದಾಳೆ.

ಇನ್ನು ಅಪಘಾತಕ್ಕೀಡಾದರು ವರದಿಗಾರಿಕೆ ಮುಂದುವರೆಸಿದ ವರದಿಗಾರ್ತಿ ಬಗ್ಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

Follow Us:
Download App:
  • android
  • ios