ಹೂ ಮಾರ್ತಿದ್ದ ಬಾಲಕನಿಗೆ ಸರ್ಪ್ರೈಸ್ ಕೊಟ್ಟ ಅಪರಿಚಿತ; ಮುಗಳ್ನಕ್ಕು ಭಾವುಕರಾದ ನೆಟ್ಟಿಗರು, ವಿಡಿಯೋ ನೋಡಿ
ಮಾರುಕಟ್ಟೆಯಲ್ಲಿ ಹೂ ಮಾರುತ್ತಿದ್ದ ಬಾಲಕನಿಗೆ ಅಪರಿಚಿತ ವ್ಯಕ್ತಿಯೊಬ್ಬರು ಹಣ ಮತ್ತು ದಿನಸಿ ಸಾಮಗ್ರಿಗಳನ್ನು ನೀಡಿ ಸಹಾಯ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಭಾವುಕರಾಗಿದ್ದಾರೆ.
ಮನುಷ್ಯ ಬಡವ ಅಥವಾ ಶ್ರೀಮಂತನಾಗಿರಲಿ ಜೀವನದಲ್ಲಿನ ಸಣ್ಣ ಸಣ್ಣ ಘಟನೆಗಳು ಅತ್ಯಂತ ಖುಷಿಯನ್ನು ನೀಡುತ್ತವೆ. ಕೆಲವೊಮ್ಮೆ ನಾವು ಊಹೆಯೂ ಮಾಡದ ವಿಷಯಗಳಿಂದ ಅಗಾಧ ಸಂತೋಷ ಸಿಗುತ್ತದೆ. ಅಂತಹ ದಿನವನ್ನು ಎಂದಿಗೂ ಮರೆಯಲು ಸಾಧ್ಯವಾಗಲ್ಲ. ಇಂತಹ ಖುಷಿಗಳಿಗಾಗಿ ಎಷ್ಟೋ ಜನರು ಕಾಯುತ್ತಿರುತ್ತಾರೆ. ಕೆಲವರ ಬಳಿ ಹಣ, ಮನೆ ಎಲ್ಲಾ ಇರುತ್ತೆ, ಆದ್ರೆ ಸಂತೋಷವೇ ಇರಲ್ಲ. ಇಂದು ನಾವು ನಿಮಗಾಗಿ ಸಂತೋಷದ ವಿಡಿಯೋವನ್ನು ತಂದಿದ್ದೇವೆ.
ಈ ವಿಡಿಯೋದಲ್ಲಿ ಅಪರಿಚಿತ ವ್ಯಕ್ತಿಯೋರ್ವ, ಮಾರುಕಟ್ಟೆಯಲ್ಲಿ ಹೂವಿನ ಮಾಲೆ ಮಾರುತ್ತಿದ್ದ ಪುಟ್ಟ ಬಾಲಕನ ಮೊಗದಲ್ಲಿ ಸಂತೋಷ ತರಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಒಂದು ಕ್ಷಣ ಮುಗಳ್ನಕ್ಕು, ಭಾವುಕರಾಗಿದ್ದಾರೆ. ನಂತರ ಹಂಚಿಕೊಂಡು ತಿನ್ನೋದರಲ್ಲಿಯ ಸಂತೋಷ ಮತ್ತು ತೃಪ್ತಿ ಎಲ್ಲಿಯೂ ಸಿಗಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಮಾರುಕಟ್ಟೆಯಲ್ಲಿ ಬಾಲಕನೋರ್ವ ಮಲ್ಲಿಗೆ ಮಾಲೆ ಮಾರಾಟ ಮಾಡುತ್ತಾ ಕುಳಿತಿರುತ್ತಾನೆ. ಈ ವೇಳೆ ಅಲ್ಲಿಗೆ ಬರುವ ವ್ಯಕ್ತಿ, ಒಂದು ಮಾಲೆಯನ್ನು ಖರೀದಿಸಿ 500 ರೂ.ಯ ನೋಟು ನೀಡುತ್ತಾರೆ. 500 ರೂಪಾಯಿಗೆ ಚಿಲ್ಲರೆ ಇಲ್ಲ ಎಂದು ಬಾಲಕ ಹೇಳುತ್ತಾನೆ. ಅದಕ್ಕೆ ಅಪರಿಚಿತ, ತನಗೆ ಚಿಲ್ಲರೆ ಬೇಡ. ಎಲ್ಲಾ ಹಣವನ್ನು ನಿನ್ನ ಬಳಿಯಲ್ಲಿಯೇ ಇರಿಸಿಕೊಳ್ಳುವಂತೆ ಹೇಳಿದಾಗ ಬಾಲಕ ಒಂದು ಕ್ಷಣ ಶಾಕ್ ಆಗುತ್ತಾನೆ. ನಂತರ ಲವ್ ತೋರಿಸುವ ಸನ್ನೆ ಮಾಡುತ್ತಾನೆ. ಹೆಚ್ಚು ಹಣ ಸಿಕ್ಕಿದ್ದಕ್ಕೆ ಖುಷಿಯಾದ ಬಾಲಕನಿಗೆ ಮತ್ತೊಂದು ಸರ್ಪ್ರೈಸ್ ಸಿಗುತ್ತೆ ಎಂದು ಊಹೆ ಮಾಡಿರಲ್ಲ.
ಇದನ್ನೂ ಓದಿ: ಭಾರತದ ಈ ಗ್ರಾಮದ ಪುರುಷರಿಂದ ಗರ್ಭಿಣಿಯಾಗಲು ವಿದೇಶದಿಂದ ಬರ್ತಾರೆ ಮಹಿಳೆಯರು!
ಅಪರಿಚಿವ ವ್ಯಕ್ತಿ ತನ್ನೊಂದಿಗೆ ತಂದಿದ್ದ ದಿನಸಿ ಸಾಮಾಗ್ರಿಯ ಚೀಲವನ್ನು ಬಾಲಕನ ಪಕ್ಕದಲ್ಲಿರಿಸಿ ಆತನೊಂದಿಗೆ ಹ್ಯಾಂಡ್ ಶೇಕ್ ಮಾಡಿ ಅಲ್ಲಿಂದ ತೆರಳುತ್ತಾರೆ. ನಂತರ ಬಾಲಕ ಮತ್ತೋರ್ವನ ಸಹಾಯದಿಂದ ದಿನಸಿ ಸಾಮಗ್ರಿಯನ್ನು ತಲೆ ಮೇಲೆ ಹೊತ್ತುಕೊಂಡು ತಾಯಿ ಬಳಿ ತೆರಳಿ, ನಡೆದ ಘಟನೆಯನ್ನು ವಿವರಿಸುತ್ತಾನೆ. ನಂತರ ತಾಯಿ ದಿನಸಿಯನ್ನು ತೆಗೆದುಕೊಂಡು ಮಕ್ಕಳ ಜೊತೆ ಸಂತೋಷದಿಂದ ಹೊರಡುತ್ತಾರೆ. ಈ ಸಮಯದಲ್ಲಿ ಕ್ಯಾಮೆರಾ ನೋಡುವ ಬಾಲಕ ಕೈ ಬೀಸಿ ನಗುತ್ತಾನೆ.
ವೈರಲ್ ಆಗುತ್ತಿರುವ ವಿಡಿಯೋವನ್ನು @iamhussainmansuri (Hussain Mansuri) ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಆಗಿದೆ. ಈ ವಿಡಿಯೋಗೆ 49 ಲಕ್ಷಕ್ಕೂ ಅಧಿಕ ವ್ಯೂವ್, ಸಾವಿರಾರು ಕಮೆಂಟ್‌ಗಳು, 40 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ. ವಿಡಿಯೋ ನೋಡಿದ ನೆಟ್ಟಿಗರು, ನನಗೂ ಈ ರೀತಿಯ ಸಹಾಯ ಮಾಡಬೇಕೆಂದು ಅನ್ನಿಸುತ್ತದೆ. ಈ ವಿಡಿಯೋ ನನ್ನ ದಿನವನ್ನು ಸಂತೋಷವನ್ನಾಗಿ ಮಾಡಿದೆ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ತನ್ನನ್ನು ಬೈಯ್ಯುವಂತೆ ಹೇಳಿದ ಪುಟಾಣಿಗೆ Alexa ಕೊಟ್ಟ ಉತ್ತರದ ವಿಡಿಯೋಗೆ 1 ಕೋಟಿ ವ್ಯೂವ್