Asianet Suvarna News Asianet Suvarna News

ಶುಭ ಸುದ್ದಿ,  ಕೇಂದ್ರದಿಂದಲೇ ಅತಿ ಅಗ್ಗದ ಕೊರೋನಾ ಟೆಸ್ಟಿಂಗ್ ಕಿಟ್ , ದರ ಎಷ್ಟು?

ಕೊರೋನಾ ಆತಂಕದ ನಡುವೆ ಶುಭ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ/ ಅತಿ ಕಡಿಮೆ ದರದಲ್ಲಿ ಟೆಸ್ಟಿಂಗ್ ಕಿಟ್ ಲಭ್ಯ/ ದೆಹಲಿ ಐಐಟಿಯಿಂದ ಮಾನ್ಯತೆ ಪಡೆದ ಕಿಟ್

Union Govt Laundhes IIT Delhi s Covid 19 test kit for commercial use at 399 rs
Author
Bengaluru, First Published Jul 15, 2020, 7:53 PM IST
  • Facebook
  • Twitter
  • Whatsapp

ಮುಂಬೈ(ಜು.15) ಕೊರೋನಾ ಆತಂಕದ ನಡುವೆ ಕೇಂದ್ರ ಸರ್ಕಾರ ಶುಭ ಸುದ್ದಿಯೊಂದನ್ನು ನೀಡಿದೆ. ಐಐಟಿ ದೆಹಲಿ ಸಿದ್ಧಮಾಡಿರುವ ಕೋವಿಡ್ 19 ಟೆಸ್ಟ್ ಕಿಟ್ ನ್ನು 399  ರೂ. ಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಇಡೀ ದೇಶಾದ್ಯಂತ ತ್ವರಿತವಾಗಿ ಕೊರೋನಾ ಪರೀಕ್ಷೆ ಫಲಿತಾಂಶಕ್ಕೆ ಇದು ಕಾರಣವಾಗುವುದರಲ್ಲಿ ಅನುಮಾನ ಇಲ್ಲ.

ಭಾರತೀಯ ಮೆಡಿಕಲ್ ಕೌನ್ಸಿಲ್ ಮತ್ತು ಡ್ರಗ್ ಕಂಟ್ರೋಲ್ ಜನರಲ್ ಈ ಕಿಟ್ ಗೆ ಪರವಾನಗಿಯನ್ನು ನೀಡಿತ್ತು. ಈ ಕಿಟ್ ನ ಹೆಸರು 'ಕೋರೋಸುರ್ '. ಐಐಟಿಯಿಂದ ಲೈಸನ್ಸ್ ಪಡೆದುಕೊಂಡ ನ್ಯೂ ಟೆಕ್ ಮೆಡಿಕಲ್ ಡಿವೈಸಸ್ ಕಂಪನಿ ಕಿಟ್ ತಯಾರು ಮಾಡಿದೆ.  ಮುಂದಿನ ತಿಂಗಳು ಎರಡು ಮಿಲಿಯನ್ ಕಿಟ್ ತಯಾರು ಮಾಡಲಾಗುತ್ತಿದೆ.

ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರದ ಹೊಸ ಸೂತ್ರ

ಕಿಟ್ ಮೂಲ ಬೆಲೆ 399 ರೂ. ಆಗಿರಲಿದೆ. ಇದಕ್ಕೆ ಆರ್ ಎನ್ ಎ ಐಸೋಲೆಶನ್ ಮತ್ತು ಲ್ಯಾಬೋರೇಟರಿ ಚಾರ್ಜ್ ಸೇರಿಕೊಳ್ಳಲಿದೆ. ಸದ್ಯ ಲಭ್ಯವಿರುವ ಟೆಸ್ಟ್ ವಗಳಲ್ಲಿ ಇದು ಅತಿ ಕಡಿಮೆ ಖರ್ಚಿನದ್ದಾಗಿರಲಿದೆ.

ಇದು ಮೇಕ್ ಇನ್ ಇಂಡಿಯಾ ಮಾದರಿ ಕಿಟ್ ಆಗಿದ್ದು ಕೊರೋನಾ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಕಂಪನಿಯ ಸಂಸ್ಥಾಪಕ ಜಟೀನ್ ಗೋಯಲ್ ತಿಳಿಸಿದ್ದಾರೆ.

ಕಿಟ್ ಲಾಂಚ್ ಮಾಡಿದ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್,  ಅಧಿಕೃತ ಲ್ಯಾಬ್ ಗಳಲ್ಲಿ ಕಿಟ್ ಲಭ್ಯವಿರುತ್ತದೆ. ಐಐಟಿ ದೆಹಲಿ ಒಟ್ಟು ಹತ್ತು ಕಂಪನಿಗಳಿಗೆ ಈ ಮಾದರಿಯ ಕಿಟ್ ತಯಾರು ಮಾಡಲು ಲೈಸನ್ಸ್ ನೀಡಿದೆ ಎಂದು ತಿಳಿಸಿದ್ದಾರೆ. 

ಕೊರೋನಾ ಬಗ್ಗೆ ನಾವು ನಿರಂತರ ಸಂಶೋಧನೆಯಲ್ಲಿ ತೊಡಗಿದ್ದೇವೆ. ದೇಶವನ್ನು ಕೊರೋನಾ ವಿರುದ್ಧ ಹೋರಾಟ ಮಾಡಲು ಒಂದೊಂದೆ ಹೆಜ್ಜೆ ಇಡುತ್ತಿದ್ದೇವೆ ಎಂದು ಐಐಟಿ ದೆಹಲಿ ನಿರ್ದೇಶಕ ವಿ. ವೇಣುಗೋಪಾಲ್ ರಾವ್ ತಿಳಿಸಿದ್ದಾರೆ.

Follow Us:
Download App:
  • android
  • ios