Asianet Suvarna News

ಮೋದಿ ಸಂಪುಟ ವಿಸ್ತರಣೆ: ಮಂತ್ರಿ ಸ್ಥಾನಕ್ಕೆ 27 ಸಂಭಾವ್ಯ ನಾಯಕರ ಪಟ್ಟಿ ರೆಡಿ!

  • ಕೇಂದ್ರ ಸಂಪುಟ ವಿಸ್ತರಣೆ ಅಂತಿಮ ಮುದ್ರೆ ಬೀಳುವ ಕಾಲ ಸನಿಹವಾಗಿದೆ
  • ಸಿಂಧಿಯಾ ಸೇರಿದಂತೆ 27 ನಾಯಕರ ಪಟ್ಟಿ ರೆಡಿಯಾಗಿದ್ದು, ಶೀಘ್ರವೇ ಸಂಪುಟ ಸೇರ್ಪಡೆ
  • ಮೋದಿ ಸಂಪುಟ ಸೇರಲು ಸಜ್ಜಾಗಿರುವ 27 ನಾಯಕರ ಸಂಭಾವ್ಯ ಪಟ್ಟಿ ಇಲ್ಲಿದೆ
     
Union Cabinet expansion 27 probable minister list who are likely to join PM modi team ckm
Author
Bengaluru, First Published Jun 26, 2021, 6:20 PM IST
  • Facebook
  • Twitter
  • Whatsapp

ನವದೆಹಲಿ(ಜೂ.26):  ಕೇಂದ್ರ ಸಂಪುಟ ವಿಸ್ತರಣೆ ಕುರಿತು ಅಧೀಕೃತ ಹೇಳಿಕೆ ಇನ್ನೂ ಹೊರಬಿದ್ದಿಲ್ಲ. ಆದರೆ ತೆರೆ ಮರೆಯಲ್ಲಿ ಕಸರತ್ತು ನಡೆಯುತ್ತಿರುವುದು ಸುಳ್ಳಲ್ಲ. ಬಿಜೆಪಿ ಮೂಲಗಳ ಮಾಹಿತಿ ಪ್ರಕಾರ 27 ನಾಯಕರು ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ. ಈ ಪಟ್ಟಿಯಲ್ಲಿ ಘಟಾನುಘಟಿ ನಾಯಕರು ಕಾಣಿಸಿಕೊಂಡಿದ್ದಾರೆ.

ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿ ಕೇಂದ್ರ ಸಚಿವರ ಜೊತೆ ಮೋದಿ ಮಹತ್ವ ಸಭೆ!

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡ ಜ್ಯೋತಿರಾದಿತ್ಯ ಸಿಂಧಿಯಾ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ, ರಾಜಸ್ಥಾನ ಹಾಗೂ ಮಧ್ಯಪ್ರದೇಶದ ಬಿಜೆಪಿ ಜನರಲ್ ಸೆಕ್ರೆಟರಿ ಭೂಪೇಂದ್ರ ಯಾದವ್ ಹಾಗೂ ಕೈಲಾಶ್ ವಿಜಯವರ್ಗಿಯಾ, ಬಿಜೆಪಿ ವಕ್ತಾರ ಹಾಗೂ ಅಲ್ಪ ಸಂಖ್ಯಾತ ಮುಖಂಡ ಝಪರ್ ಇಸ್ಲಾಂ ಮೋದಿ ಸಂಪುಟ ಸೇರಿಕೊಳ್ಳೋ ಸಂಭಾವ್ಯ ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರಮುಖರಾಗಿದ್ದಾರೆ.

ಅಸ್ಸಾಂ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನ್ವಾಲ್, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಸೇರಿದಂತೆ ಮಾಜಿ ಮುಖ್ಯಮಂತ್ರಿಗಳು ಮೋದಿ ಸಂಪುಟ ಸೇರಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನು ಉತ್ತರ ಪ್ರದೇಶದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸ್ಥಾನ ನೀಡಲು ನಿರ್ಧರಿಸಲಾಗಿದೆ.

ಮೋದಿ ಭೇಟಿಯಾಗ್ತಾರೆ ನಿತೀಶ್: ಕೇಂದ್ರ ಮಂತ್ರಿಮಂಡಲಕ್ಕೆ ಜೆಡಿಯು?.

ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್, ಮಹಾರಾಜ ಗಂಜ್ ಸಂಸದ ಪಂಕಜ್ ಚೌಧರಿ, ವರುಣ್ ಗಾಂಧಿ ಹಾಗೂ NDA ಮೈತ್ರಿ ಪಕ್ಷದ ಅನುಪ್ರಿಯಾ ಪಟೇಲ್ ಕೂಡ ಬಿಜೆಪಿ ಸಂಪುಟ ವಿಸ್ತರಣೆಯಲ್ಲಿ ಕೇಳಿಬರುತ್ತಿರುವ ಪ್ರಮುಖ ಹೆಸರುಗಳಾಗಿವೆ.

ಒಡಿಶಾ ಸಂಸದ ಅಶ್ವಿನ್ ವೈಷ್ಣವ್, ಬಂಗಾಳದ ಮಾಜಿ ರೈಲ್ವೇ ಸಚಿವ ದಿನೇಶ್ ತ್ರಿವೇದಿ, ರಾಜ್ಯ ಸಭಾ ಸದಸ್ಯ ಅನಿಲ್ ಜೈನ್ ಕೂಡ ಪಟ್ಟಿಯಲ್ಲಿದ್ದಾರೆ.  ರಾಜಸ್ಥಾನದಿಂದ ಕಿರಿಯ ಸಂಸದ ಚೌಧರಿ, ರಾಹುಲ್ ಕಸ್ವಾನ್ ಮತ್ತು ಸಿಕಾರ್ ಸಂಸದ ಸುಮೇಧಾನಂದ ಸರಸ್ವತಿ ಕೂಡ ಕೇಂದ್ರ ಸಂಪುಟ ಸೇರಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೆಹಲಿಯಿಂದ ಒಬ್ಬರಿಗೆ ಮಾತ್ರ ಅವಕಾಶ ನೀಡುವ ಸಾಧ್ಯತೆ ಇದೆ. ದೆಹಲಿಯಿಂದ ಸಂಸದೆ ಮೀನಾಕ್ಷಿ ಲೇಖಿ ಮೋದಿ ಸಂಪುಟ ಸೇರುವ ಸಾಧ್ಯತೆ ಇದೆ.   ಬಿಹಾರದಲ್ಲಿ ಚಿರಾಗ್ ಪಾಸ್ವಾನ್ ವಿರುದ್ಧ ದಂಗೆ ಎದ್ದ ಪಶುಪತಿ ಪರಾಸ್ ಅವರು LJPಯಿಂದ ಕೇಂದ್ರ ಸ್ಥಾನವನ್ನು ಪಡೆಯುತ್ತಿದ್ದರೆ,  ಜೆಡಿಯು ನಾಮನಿರ್ದೇಶನಗಳಾದ ಆರ್.ಸಿ.ಪಿ. ಸಿಂಗ್ ಮತ್ತು ಸಂತೋಷ್ ಕುಮಾರ್ ಕೂಡ ಸಂಭಾವ್ಯ ಪಟ್ಟಿಯಲ್ಲಿದ್ದಾರೆ. ಇನ್ನು ಕರ್ನಾಟಕ, ಹರ್ಯಾಣ ಸೇರಿದಂತೆ ಪ್ರಮುಖ ನಾಯಕರು ಮೋದಿ ಸಂಪುಟ ಸೇರಿಕೊಳ್ಳುವ ಸಾಧ್ಯತೆ ಇದೆ 
 

Follow Us:
Download App:
  • android
  • ios