ರಷ್ಯಾ ಕ್ಷಿಪಣಿ ದಾಳಿಯಲ್ಲಿ ಕರ್ನಾಟಕದ ವಿದ್ಯಾರ್ಥಿ ಬಲಿ ಉಕ್ರೇನ್ ಪರಿಸ್ಥಿತಿ ಗಂಭೀರ, ಭಾರತೀಯ ನಾಗರೀಕರ ರಕ್ಷಣೆ ಚುರುಕು ಉಕ್ರೇನ್ ಜನರನ್ನು ಶಿವ ಕಾಪಾಡಬೇಕು, ಶಿವನಲ್ಲಿ ಪ್ರಾರ್ಥಿಸಿ  

ನವದೆಹಲಿ(ಮಾ.01): ರಷ್ಯಾ ಸತತ ದಾಳಿಯಿಂದ ಉಕ್ರೇನ್ ಪರಿಸ್ಥಿತಿ ಘನಘೋರವಾಗಿದೆ. ರಷ್ಯಾದ ಕ್ಷಿಪಣಿ ದಾಳಿಯಲ್ಲಿ ಕರ್ನಾಟಕದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಈ ಘಟನೆ ಭಾರತೀಯರ ಆತಂಕ ಹೆಚ್ಚಿಸಿದೆ. ಈ ಘಟನೆಯನ್ನು ಭಾರತದಲ್ಲಿರುವ ಉಕ್ರೇನ್ ರಾಯಭಾರಿ ಖಂಡಿಸಿದ್ದಾರೆ. ಇದೇ ವೇಳೆ ಇಂದು ಮಹಾಶಿವರಾತ್ರಿ. ಉಕ್ರೇನ್ ಮೇಲಿನ ಯುದ್ಧ ಅಂತ್ಯಕ್ಕೆ, ಉಕ್ರೇನ್ ಜನರನ್ನು ಕಾಪಾಡಲು ಎಲ್ಲರೂ ಶಿವನಲ್ಲಿ ಪ್ರಾರ್ಥಿಸಿ ಎಂದು ಉಕ್ರೇನ್ ರಾಯಬಾರಿ ಇಗೋರ್ ಪೊಲಿಖಾ ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿರುವ ಉಕ್ರೇನ್ ರಾಯಭಾರ ಕಚೇರಿ ಬಳಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಇಗೋರ್ ಪೊಲಿಖಾ, ರಷ್ಯಾ ದಾಳಿ ಅಂತ್ಯಗೊಳಿಸಿ ಶಾಂತಿ ಸ್ಥಾಪಿಸುವಂತೆ ಮನವಿ ಮಾಡಿದ್ದಾರೆ. ನನಗೆ ಅರಿವಿರುವಂತೆ ಇಂದು ಮಹಾಶಿವರಾತ್ರಿ. ಸಂಕಷ್ಟದಲ್ಲಿರುವ ಜನತೆಯನ್ನು ಶಿವ ಸದಾ ಕಾಪಾಡುತ್ತಾನೆ. ನೀವೆಲ್ಲರು ಶಿವನಲ್ಲಿ ಪ್ರಾರ್ಥಿಸಿ, ಶೀಘ್ರದಲ್ಲೇ ಉಕ್ರೇನ್ ಮೇಲಿನ ಯುದ್ಧ ಅಂತ್ಯಗೊಳಿಸುವಂತಾಗಲಿ ಎಂದು ಇಗೋರ್ ಪೊಲಿಖಾ ಮನವಿ ಮಾಡಿದ್ದಾರೆ.

Ukraine-Russia War: ಕ್ಷಿಪಣಿ ದಾಳಿಗೆ ಬಲಿಯಾದ ನವೀನ್ ಮೃತದೇಹ ಭಾರತಕ್ಕೆ ತರೋದು ಅನುಮಾನ!

ಕೀವ್‌, ಖಾರ್ಕೀವ್‌ ಮೇಲೆ ರಷ್ಯಾ ಕ್ಲಸ್ಟರ್‌ ಬಾಂಬ್‌: 11 ಬಲಿ
ಉಕ್ರೇನ್‌-ರಷ್ಯಾ ಸಂಧಾನ ಮಾತುಕತೆ ಅಷ್ಟುಫಲ ನೀಡದೇ ಇರುವ ಬೆನ್ನಲ್ಲೇ ಉಕ್ರೇನ್‌ ರಾಜಧಾನಿ ಕೀವ್‌ ಹಾಗೂ ದೇಶದ 2ನೇ ಅತಿ ದೊಡ್ಡ ನಗರ ಖಾರ್ಕೀವ್‌ ಮೇಲೆ ರಷ್ಯಾ ಭಾರೀ ಬಾಂಬ್‌ ದಾಳಿ ನಡೆಸಿದೆ. ಖಾರ್ಕೀವ್‌ನಲ್ಲಿ 11 ಜನರು ಸಾವನ್ನಪ್ಪಿ, ಅನೇಕರು ಗಾಯಗೊಂಡಿದ್ದಾರೆ.

36 ದೇಶದ ವಿಮಾನಕ್ಕೆ ರಷ್ಯಾದಿಂದ ನಿಷೇಧ

ತನ್ನ ವಿಮಾನಗಳಿಗೆ ನ್ಯಾಟೋ ಸೇರಿದಂತೆ ಹಲವು ದೇಶಗಳು ನಿಷೇಧ ಹೇರಿದ್ದಕ್ಕೆ ತಿರುಗೇಟು ನೀಡಿರುವ ರಷ್ಯಾ ಸರ್ಕಾರ, ಬ್ರಿಟನ್‌, ಜರ್ಮನಿ ಸೇರಿದಂತೆ ನ್ಯಾಟೋ, ಯುರೋಪಿಯನ್‌ ಒಕ್ಕೂಟದ 36 ದೇಶಗಳ ವಿಮಾನಗಳಿಗೆ ತನ್ನ ವಾಯುಸೀಮೆ ಬಳಸಲು ನಿಷೇಧ ಹೇರಿದೆ. ಪಾಶ್ಚಾತ್ಯ ದೇಶಗಳ ಕ್ರಮಕ್ಕೆ ಪ್ರತೀಕಾರವಾಗಿ ಈ ಕ್ರಮ ಕೈಗೊಂಡಿದ್ದಾಗಿ ರಷ್ಯಾ ನೇರವಾಗಿ ಹೇಳಿದೆ.

ಕೀವ್‌ ನಗರ ಬೇಗ ತೊರೆಯಿರಿ ಎಂದು ಜನರಿಗೆ ರಷ್ಯಾ ಸೋಮವಾರ ಬೆಳಗ್ಗೆ ಎಚ್ಚರಿಕೆ ನೀಡಿತ್ತು. ಇದಾದ ಕೆಲವೇ ಹೊತ್ತಿನಲ್ಲಿ ನಿಷೇಧಕ್ಕೆ ಒಳಗಾಗಿರುವ ಕ್ಲಸ್ಟರ್‌ ಬಾಂಬನ್ನು ರಷ್ಯಾ ಹಾಕಿದೆ. ಈ ದಾಳಿಗೆ ಉಕ್ರೇನ್‌ನ ಮಿಲಿಟರಿ ರಾಡಾರ್‌ ಸಂಪರ್ಕ ಕೇಂದ್ರ ಧ್ವಂಸಗೊಂಡಿದೆ ಎಂದು ವರದಿಗಳು ಹೇಳಿವೆ.

ಈ ನಡುವೆ, ಇದೇ ಕ್ಲಸ್ಟರ್‌ ಬಾಂಬ್‌ ಬಳಸಿ ಖಾರ್ಕೀವ್‌ ನಗರದ ಜನವಸತಿ ಪ್ರದೇಶದ ಮೇಲೆ ರಷ್ಯಾ ದಾಳಿ ಮಾಡಿದೆ. 11 ಜನರು ಸಾವನ್ನಪ್ಪಿ, 12ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ತುರ್ತು ಕರೆ ಮಾಡಿ ರಕ್ಷಣೆಗೆ ವಾಹನಗಳನ್ನೂ ಕರೆತರಲು ಸಾಧ್ಯವಾಗುತ್ತಿಲ್ಲ. ಅಷ್ಟೊಂದು ದಾಳಿ ನಡೆದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ಹೇಳಿದೆ.ಇದಕ್ಕೂ ಮುನ್ನ ಉಭಯ ದೇಶಗಳ ಮಧ್ಯೆ ಮಾತುಕತೆ ನಡೆಯುವ ವೇಳೆ ಕೀವ್‌ ಹಾಗೂ ಖಾರ್ಕೀವ್‌ನಲ್ಲಿ ಶಾಂತ ಸ್ಥಿತಿ ನೆಲೆಸಿತ್ತು. ಮಾತುಕತೆ ಮುಗಿದ ಬಳಿಕ ಮತ್ತೆ ಬಾಂಬ್‌ ಮೊರೆತ ಆರಂಭವಾಗಿದೆ.

ರಷ್ಯಾ ಅಣ್ವಸ್ತ್ರ ಸನ್ನದ್ಧತೆ ಆತಂಕಕಾರಿ ಬೆಳವಣಿಗೆ: ವಿಶ್ವಸಂಸ್ಥೆ
ರಷ್ಯಾ ಅಣ್ವಸ್ತ್ರವನ್ನು ಬಳಕೆಗೆ ಸನ್ನದ್ಧ ಸ್ಥಿತಿಯಲ್ಲಿ ಇಟ್ಟಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್‌ ಸೋಮವಾರ ಹೇಳಿದ್ದಾರೆ.ಉಕ್ರೇನ್‌ ಬಿಕ್ಕಟ್ಟಿನಿಂದಾಗಿ ವಿಶ್ವಸಂಸ್ಥೆಯ ಸಾಮಾನ್ಯಸಭೆ ನಡೆದ ತುರ್ತು ಅಧಿವೇಶನದಲ್ಲಿ ಮಾತನಾಡಿದ ಗುಟೆರಸ್‌ ‘ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅಣ್ವಸ್ತ್ರಗಳನ್ನು ಬಳಕೆಗೆ ಸಿದ್ಧವಾಗಿಡಲು ಸೇನೆ ಸೂಚನೆ ನೀಡಿದ್ದಾರೆ. ಈ ಬೆಳವಣಿಗೆಯು ವಿಶ್ವ ಮತ್ತೊಮ್ಮೆ ಪರಮಾಣು ಯುದ್ಧದ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು ಎಂಬ ಭೀತಿ ಸೃಷ್ಟಿಸಿದೆ. ಅಣ್ವಸ್ತ್ರದ ಬಳಕೆಯನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಉಕ್ರೇನ್‌ನಲ್ಲಿ ಯುದ್ಧ ತಕ್ಷಣ ನಿಲ್ಲಬೇಕು. ಉಕ್ರೇನ್‌ ಹಾಗೂ ರಷ್ಯಾದ ನಡುವಿನ ನೇರ ಮಾತುಕತೆ ನಡೆದಾಗಲೇ ಯುದ್ಧವು ನಿಲ್ಲಬಹುದು’ ಎಂದು ಅಭಿಪ್ರಾಯಪಟ್ಟರು.