Asianet Suvarna News Asianet Suvarna News

UIDAI: ಆಧಾರ್‌ ಕಾಯ್ದೆ ಉಲ್ಲಂಘನೆಗೆ ಇನ್ನು 1 ಕೋಟಿವೆರೆಗೂ ದಂಡ!

*ಮೊದಲ ಬಾರಿಗೆ ಆಧಾರ್‌ ಪ್ರಾಧಿಕಾರಕ್ಕೆ ಶಿಕ್ಷೆ ಅಧಿಕಾರ
*ಉಲ್ಲಂಘನೆಯ ದೂರು ಇತ್ಯರ್ಥಕ್ಕೆ ಪ್ರತ್ಯೇಕ ಅಧಿಕಾರಿ ನೇಮಕ
*ಸುಳ್ಳು ಮಾಹಿತಿ ನೀಡುವುದು, ಆಧಾರ್‌ ವಿವರಗಳನ್ನು ದುರ್ಬಳಕೆ ಮಾಡಿದರೆ ದಂಡ

UIDAI can Impose Fines Up To Rs 1 Crore Against Aadhaar Violations
Author
Bengaluru, First Published Nov 4, 2021, 8:50 AM IST

ನವದೆಹಲಿ (ನ.4): ಆಧಾರ್‌ (Aadhaar) ಕಾಯ್ದೆಯಡಿಗಿನ ಯಾವುದೇ ನಿಯಮಗಳನ್ನು ಉಲ್ಲಂಘಿಸುವ ಸಂಸ್ಥೆಗಳಿಗೆ 1 ಕೋಟಿ ರು.ವರೆಗೂ ದಂಡ ವಿಧಿಸುವ ಅವಕಾಶವನ್ನು ವಿಶಿಷ್ಟಗುರುತಿನ ಚೀಟಿ ಪ್ರಾಧಿಕಾರಕ್ಕೆ ನೀಡಲಾಗಿದೆ. ಆಧಾರ್‌ ಪ್ರಾಧಿಕಾರಕ್ಕೆ ಇಂಥದ್ದೊಂದು ಅಧಿಕಾರ ನೀಡುವ ಸಲುವಾಗಿ 2019ರಲ್ಲೇ ಕೇಂದ್ರ ಸರ್ಕಾರ (central government) ಆಧಾರ್‌ ಮತ್ತು ಇತರೆ ಕಾನೂನು (ತಿದ್ದುಪಡಿ) ಕಾಯ್ದೆಯನ್ನು ಅಂಗೀಕರಿಸಿತ್ತು. ಅದಾದ 2 ವರ್ಷಗಳ ಬಳಿಕ ಅಂದರೆ 2021ರ ನ.2ರಂದು ಕೇಂದ್ರ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ಆಧಾರ್‌ ಪಡೆಯಲು ಸುಳ್ಳು ಮಾಹಿತಿ ನೀಡುವುದು, ಆಧಾರ್‌ ವಿವರಗಳನ್ನು ದುರ್ಬಳಕೆ ಮಾಡಿಕೊಳ್ಳುವುದು- ಇತ್ಯಾದಿ ಅಪರಾಧಗಳು ಇದರಡಿ ಬರುತ್ತವೆ.

ಈ ಕಾಯ್ದೆಯ ಅನ್ವಯ, ವಿಶಿಷ್ಟಗುರುತಿನ ಚೀಟಿ ಪ್ರಾಧಿಕಾರವು, ಇಂಥ ಕಾನೂನು ಜಾರಿಗೆ ‘ನಿರ್ಣಯ ಅಧಿಕಾರಿ’(Adjudicating officer) ಯೊಬ್ಬರನ್ನು ನೇಮಿಸಬಹುದು. ಇಂಥ ಅಧಿಕಾರಿಯು, ಭಾರತ ಸರ್ಕಾರದ ಜಂಟಿ ನಿರ್ದೇಶಕರ ಹುದ್ದೆಗಿಂತ ಕೆಳಗಿರಬಾರದು. ಕನಿಷ್ಠ 10 ವರ್ಷ ಅಧಿಕಾರ ನಡೆಸಿದ ಅನುಭವ ಇರಬೇಕು, ಮಾಹಿತಿ ತಂತ್ರಜ್ಞಾನ, ವಾಣಿಜ್ಯ ವಿಷಯಗಳ ನಿರ್ವಹಣೆ, ಕಾನೂನು ಕುರಿತು ಮಾಹಿತಿ ಹೊಂದಿರಬೇಕು ಎಂದು ಸರ್ಕಾರ ಹೇಳಿದೆ.

ಹೀಗೆ UIDAI (Unique Identification Authority of India) ನೇಮಿಸಲ್ಪಟ್ಟ ಅಧಿಕಾರಿಯು, ಆಧಾರ್‌ ಕಾಯ್ದೆ ಅಥವಾ ನಿರ್ದೇಶನ ಪಾಲಿಸಲು ವಿಫಲವಾದ ಅಥವಾ ವಿಶಿಷ್ಟಗುರುತಿನ ಚೀಟಿ ಪ್ರಾಧಿಕಾರ ಬಯಸಿದ ಮಾಹಿತಿ ನೀಡಲು ವಿಫಲವಾದ, ಆಧಾರ್‌ ಕಾಯ್ದೆ ವ್ಯವಸ್ಥೆಯಡಿ ಬರುವ ಯಾವುದೇ ಸಂಸ್ಥೆಯ ವಿರುದ್ಧ ಬರುವ ದೂರಿನ ವಿರುದ್ಧ ಕ್ರಮ ಕೈಗೊಳ್ಳಬಹುದು. ಅರ್ಹ ಪ್ರಕರಣಗಳಲ್ಲಿ 1 ಕೋಟಿ ರುವರೆಗೂ ದಂಡ ವಿಧಿಸಬಹುದಾಗಿದೆ.

ದೀಪಾವಳಿ ಗಿಫ್ಟ್ : 8 ಬಿಜೆಪಿ ರಾಜ್ಯಗಳಲ್ಲಿ ತೈಲ ದರ ಇಳಿಕೆ

ನಿರ್ಣಯ ಅಧಿಕಾರಿ, ದಂಡವನ್ನು ನಿರ್ಣಯಿಸುವ ಮೊದಲು, ನಿಯಮ ಉಲ್ಲಂಘನೆಯನ್ನು ಮಾಡಿದ್ದಾರೆ ಎಂದು ಆರೋಪಿಸಲಾದ ವ್ಯಕ್ತಿ ಅಥವಾ ಘಟಕಕ್ಕೆ ನೋಟಿಸ್ ನೀಡುಬೇಕು. ಅವರ ಮೇಲೆ ದಂಡವನ್ನು ಏಕೆ ವಿಧಿಸಬಾರದು ಎಂಬುದನ್ನು ತೋರಿಸಲು ಮತ್ತು ಉಲ್ಲಂಘನೆಯ ಸ್ವರೂಪವನ್ನು ಸ್ಪಷ್ಟವಾಗಿ ಸೂಚಿಸಲು ಅವಕಾಶವಿರುತ್ತದೆ. ನಿರ್ಣಯ ಅಧಿಕಾರಿಯು ವಿಧಿಸುವ ಯಾವುದೇ ದಂಡದ ಮೊತ್ತವನ್ನು ಯುಐಡಿಎಐ ನಿಧಿಯ ಠೇವಣಿಗೆ ಸೇರಿಸಲಾಗುತ್ತದೆ. ಒಂದು ವೇಳೆ ವ್ಯಕ್ತಿ ಅಥವಾ ಸಂಸ್ಥೆ ಅದನ್ನು ಪಾವತಿಸದಿದ್ದರೆ ಭೂಕಂದಾಯದ ಬಾಕಿ ಪಡೆಯುವ ರೀತಿ, ದಂಡವನ್ನು ಕೂಡ ಮರುಪಡೆಯಬಹುದು ಎಂದು ನಿಯಮಗಳು ಹೇಳುತ್ತವೆ.

ದೇಶಾದ್ಯಂತ ಮತ್ತೆ 55 ನೂತನ ಆಧಾರ್‌ ಸೆಂಟರ್‌!

ದೇಶದ 55 ನಗರಗಳಲ್ಲಿ ಹೊಸ ಆಧಾರ್ ಸೇವಾ ಕೇಂದ್ರಗಳನ್ನು ತೆರೆಯುವದಾಗಿ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರತಿಳಿಸಿದೆ. ಈ ಕೇಂದ್ರಗಳಲ್ಲಿ ಜನರು ಆಧಾರ್‌ ನೋಂದಾವಣೆ  ಮತ್ತು ಆಧಾರ್‌ ನವೀಕರಣ ಯಾವುದೇ ಸಮಸ್ಯೆಗಳಿಲ್ಲದೆ ಮಾಡಬಹುದು. UIDAI ದೇಶದ 122 ನಗರಗಳಲ್ಲಿ 166 ಅದ್ವಿತೀಯ ಆಧಾರ್ ನೋಂದಣಿ ಮತ್ತು ನವೀಕರಣ ಕೇಂದ್ರಗಳನ್ನು(stand-alone Aadhaar Enrolment & Update Centres) ತೆರೆಯಲು ಯೋಜನೆ ರೂಪಿಸಿದೆ. ಈ 55 ಆಧಾರ್ ಸೇವಾ ಕೇಂದ್ರಗಳು ಈ ಯೋಜನೆಯ ಭಾಗವಾಗಿದೆ. ಇವುಗಳು ಬ್ಯಾಂಕ್, ಅಂಚೆ ಕಚೇರಿ ಮತ್ತು ರಾಜ್ಯ ಸರ್ಕಾರಗಳು ನಡೆಸುತ್ತಿರುವ ಸುಮಾರು 52,000 ಆಧಾರ್ ದಾಖಲಾತಿ ಕೇಂದ್ರಗಳಿಗೆ ಹೆಚ್ಚುವರಿಯಾಗಿವೆ.

ಗುಡ್‌ನ್ಯೂಸ್‌ ಕೊಟ್ಟ UIDAI, ದೇಶಾದ್ಯಂತ ಮತ್ತೆ 55 ನೂತನ ಆಧಾರ್‌ ಸೆಂಟರ್‌!

ವಾರದ ಏಳೂ ದಿನ ಸೇವೆ

ಈ ಹೊಸ ಕೇಂದ್ರಗಳು ವಾರದ ಏಳೂ ದಿನಗಳಲ್ಲಿ ಕಾರ್ಯ ನಿರ್ವಹಿಸಲಿವೆ. ಯುಐಡಿಎಐ ಇದುವರೆಗೆ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು ಸೇರಿದಂತೆ 70 ಲಕ್ಷಕ್ಕೂ ಹೆಚ್ಚು ನಿವಾಸಿಗಳಿಗೆ ಸೇವೆ ಸಲ್ಲಿಸಿದೆ ಎಂಬುವುದು ಉಲ್ಲೇಖನೀಯ. 1,000 ನೋಂದಾವಣೆ ಮತ್ತು ನವೀಕರಣಗಳನ್ನು ಮಾಡೆಲ್-ಎ ASK ಮೂಲಕ ಪ್ರತಿದಿನ ಮಾಡಬಹುದು. ಮಾದರಿ ಬಿ ಎಎಸ್‌ಕೆ ದಿನಕ್ಕೆ 500 ನೋಂದಾವಣೆ ಮತ್ತು ನವೀಕರಣ ವಿನಂತಿಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಎಸ್‌ಕೆಗಳು ಬೆಳಿಗ್ಗೆ 9 ರಿಂದ ಸಂಜೆ 5:30 ರವರೆಗೆ ಕಾರ್ಯನಿರ್ವಹಿಸುತ್ತವೆ. ಇವುಗಳು ಸಾರ್ವಜನಿಕ ರಜಾದಿನಗಳಂದು ಮುಚ್ಚಿರಲಿವೆ.

Follow Us:
Download App:
  • android
  • ios