ನವದೆಹಲಿ( ನ.  10)  ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಂಗಳವಾರ ಕೇಂದ್ರ ಹಣಕಾಸು ಮಂತ್ರಿ  ನಿರ್ಮಲಾ ಸೀತಾರಾಮನ್ ರನ್ನು ಭೇಟಿ  ಮಾಡಿದರು  .‌ ಉಡುಪಿಯ ನೇಕಾರ ಸಮಾಜದವರು ದೀಪಾವಳಿಯ ಉಡುಗೊರೆಯಾಗಿ ಕೊಡಮಾಡಿದ ಎರಡು ಕೈಮಗ್ಗದ ಸೀರೆಗಳನ್ನು ನಿರ್ಮಲಾ ಅವರಿಗೆ  ನೀಡಿದರು.

ಬೆಳ್ಳಿ ಬಟ್ಟಲಲ್ಲಿ ಕುಂಕುಮ  ಉಡುಪಿ ಕೃಷ್ಣನ ಪ್ರಸಾದ ಫಲ ಮಂತ್ರಾಕ್ಷತೆ ನೀಡಿ ರಾಷ್ಟ್ರದ ಒಳಿತಿಗಾಗಿ ಅತ್ಯಂತ ಸಮರ್ಥವಾಗಿ  ಕಾರ್ಯನಿರ್ವಹಿಸಿ ಎಂದು ಹಾರೈಸಿದರು.    ಕೇಂದ್ರ ಹಣಕಾಸು ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿರುವ  ನಿರ್ಮಲಾ ಕೊರೋನಾ ಸಂಕಷ್ಟದಿಂದ  ಸಮಸ್ಯೆಗೆ ಒಳಗಾಗಿರುವ ದೇಶದ ಅರ್ಥ ವ್ಯವಸ್ಥೆ ಸುಧಾರಣೆಗೆ ಅನೇಕ ಕ್ರಮ ತೆಗೆದುಕೊಂಡಿದ್ದಾರೆ.

'ಬಿಹಾರದಲ್ಲಿಯೂ ನಮ್ಮದೆ ಸರ್ಕಾರ' ಗುಟ್ಟು ಹೇಳಿದ ಕೇಂದ್ರ ಸಚಿವ

ಕೊರೋನಾ ಕಾರಣಕ್ಕೆ ವಿಶೇಷ ಪ್ಯಾಕೇಜ್ ಸಹ ಬಿಡುಗಡೆ ಮಾಡಲಾಗಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿರುವ ಆತ್ಮ ನಿರ್ಭರ್ ಭಾರತ್ ಗೆ ತಕ್ಕುದಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ.