* LGBTQ+ ಸಮುದಾಯದ ಹಕ್ಕು ರಕ್ಷಣೆಗೆ ಮದ್ರಾಸ್ ಹೈ ಕೋರ್ಟ್ ಮಹತ್ವದ ಆದೇಶ* ಹಕ್ಕು ರಕ್ಷಣೆ ಹೆಜ್ಜೆ ಇಲ್ಲಿಂದಲೇ ಶುರುವಾಗಲಿದೆ* ತೀರ್ಪನ್ನು ಸ್ವಾಗತಿಸಿದ ಸೋಶಿಯಲ್ ಮೀಡಿಯಾ

ಚೆನ್ನೈ(ಜೂ. 07) ಸಲಿಂಗ ಕಾಮದ ಬಗ್ಗೆ, ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಮದ್ರಾಸ್ ಹೈಕೋರ್ಟ್ LGBTQ+ ಸಮುದಾಯದ ಹಕ್ಕುಗಳ ರಕ್ಷಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ನ್ಯಾಯಮೂರ್ತಿ ವೆಂಕಟೇಶ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಸಲಿಂಗ ಸಂಬಂಧಗಳ ಒಳ-ಹೊರಗು ಅರ್ಥ ಮಾಡಿಕೊಳ್ಳಲು, ಲೈಂಗಿಕ ಅಪ್ಪಸ್ಂಖ್ಯಾತರ ಸಮಸ್ಯೆ ಆಲಿಸಲು ಸ್ವತಃ ನ್ಯಾಯಮೂರ್ತಿಗಳೇ ಈ ಸಮುದಾಯದ ಜತೆ ಸಂವಾದ ನಡೆಸಿದ್ದರು. ಮಾತುಕತೆ ಮೂಲಕ ಅನೇಕ ವಿಚಾರ ಅರ್ಥ ಮಾಡಿಕೊಂಡಿದ್ದರು.

'ನಾನು ಉಭಯಲಿಂಗಿಯಾ, ಹೀಗೆ ಮಾಡಿದ್ರೆ ತಪ್ಪಾ?'

ಲೈಂಗಿಕ ಅಲ್ಪಸಂಖ್ಯಾತರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿದೆ. ಪೊಲೀಸರು ಇವರಿಗೆ ರಕ್ಷಣೆ ನೀಡುವ ಕೆಲಸ ಆಗಬೇಕಿದೆ ಎಂದು ಆದೇಶ ಹೇಳಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಆದೇಶವನ್ನು ಕೊಂಡಾಡಲಾಗಿದೆ. ಇಂಥ ನ್ಯಾಯಾಧೀಶರಿಂದ ಮಾತ್ರ ಬದಲಾವಣೆ ಸಾಧ್ಯ ಎಂಬ ಅಭಿಪ್ರಾಯ ಹೊರಹಾಕಲಾಗಿದೆ. 

Scroll to load tweet…
Scroll to load tweet…
Scroll to load tweet…