ತ್ರಿಪುರಾ[ಅ. 31]  ಈ ಲಾರಿ ಚಾಲಕ ಬಹಳ ಚಾಲಾಕಿ. ಮಹಿಳೆಯೊಂದಿಗೆ ಸಂಬಂಧ ಬೆಳೆಸಿ ಲೈಂಗಿಕ ಕ್ರಿಯೆ ನಡೆಸಿ ಹಣ ಕೊಡದೆ ಪರಾರಿಯಾಗಲು ಪ್ರಯತ್ನ ಮಾಡುತ್ತಿದ್ದ. ಇದರಿಂದ ಕೋಪಗೊಂಡ ಮಹಿಳೆ ಆತನ ಜನನನೇಂದ್ರಿಯವನ್ನೆ ಕತ್ತರಿಸಿ ಬಿಸಾಡಿದ್ದಾಳೆ.

ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದು ಅಕ್ಟೋಬರ್ 24 ರಂದೇ ಘಟನೆ ನಡೆದಿದೆ. ರಾಜ್ ಬಾರಿ ಏರಿಯಾದ ಧರ್ಮಾನಗರ್ ಟೌನ್ ನಿಂದ 171ಕಿಮೀ ಈ ಘಟನೆ ನಡೆದಿದೆ. ಲಾರಿಗೆ ಮಹಿಳೆ ಹತ್ತಿಸಿಕೊಂಡ ಚಾಲಕ ರಸ್ತೆ ಪಕ್ಕದಲ್ಲಿಯೇ ಲಾರಿ ಪಾರ್ಕ್ ಮಾಡಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾನೆ. 

’ಸೆಕ್ಸ್ ಬೇಕು ಅನ್ನಿಸಿದರೆ ತಡೆಯಬೇಡಿ’

ತ್ರಿಪುರಾದ ಈ ಪ್ರಕರಣ ಇದೀಗ ದೇಶದ ತುಂಬೆಲ್ಲ ದೊಡ್ಡ ಸುದ್ದಿಯಾಗುತ್ತಿದೆ. ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಲಾರಿ ಚಾಲಕನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಆರಂಭದಲ್ಲಿ ಇದನ್ನು ರೇಪ್ ಗೆ ಪ್ರಯತ್ನ ಪಟ್ಟಿದ್ದ ಎಂದು ಭಾವಿಸಲಾಗಿತ್ತು. 

ಮಹಿಳೆಯನ್ನು ಪುಸಲಾಯಿಸಿ ಸೆಕ್ಸ್ ಗೆ ಒಪ್ಪಿಸಿದವ ತನ್ನ ತೃಷೆ ತೀರಿಸಿಕೊಂಡಿದ್ದಾನೆ. ನಂತರ ಹಣ ಕೊಡದೆ ಸತಾಯಿಸಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಆತನ ಜನನೇಂದ್ರೀಯವನ್ನೆ ಕತ್ತರಿಸಿ ಎಸೆದಿದ್ದಾಳೆ.