ತಿರುವನಂತಪುರ[ಜ.11]: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂಬ ನಿಲುವು ಪ್ರದರ್ಶಿಸದ್ದ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ), ಇದೀಗ ತನ್ನ ಹಿಂದಿನ ನಿಲುವಿನಿಂದ ಉಲ್ಟಾಹೊಡೆದಿದೆ.

ದೇವಾಲಯದ ಸಂಪ್ರದಾಯ ಮತ್ತು ನಂಬಿಕೆಗಳನ್ನು ರಕ್ಷಣೆ ಮಾಡಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ಗೆ ಹೊಸದಾಗಿ ಅರ್ಜಿ ಸಲ್ಲಿಸಲು ಟಿಡಿಬಿ ನಿರ್ಧರಿಸಿದೆ.

ದೇಗುಲ ಪ್ರವೇಶಕ್ಕೆ ಮಹಿಳೆಯರಿಗೆ ನೀಡಿರುವ ಅನುಮತಿ ಮರುಪರಿಶೀಲಿಸುವಂತೆ ಸಲ್ಲಿಸಲಾದ ಅರ್ಜಿ ಸುಪ್ರೀಂಕೋರ್ಟ್‌ನ 9 ಸದಸ್ಯರ ಪೀಠದ ಮುಂದೆ ಜ.13ರಂದು ವಿಚಾರಣೆಗೆ ಬರಲಿದೆ. ಅದರ ಬೆನ್ನಲ್ಲೇ ಟಿಡಿಬಿಯಿಂದ ಈ ನಿರ್ಧಾರ ಹೊರಬಿದ್ದಿದೆ.

ಅಯ್ಯಪ್ಪ ಮಾಲಾಧಾರಿಗಳಿಗೆ ಅನ್ನಸಂತರ್ಪಣೆ ಮಾಡಿಸಿದ ಶಿವಣ್ಣ!

ಈ ಬಾರಿ ಶಬರಿಮಲೆ ಯಾತ್ರೆ ಶಾಂತಿಯುತ: 156 ಕೋಟಿ ಆದಾಯ!

ಶಬರಿಮಲೆ ಅಯ್ಯಪ್ಪಸ್ವಾಮಿ ವಾರ್ಷಿಕ ಯಾತ್ರೆಯ 41 ದಿನಗಳ ಮೊದಲ ಚರಣ ಶುಕ್ರವಾರ ಮಂಡಲ ಪೂಜೆಯೊಂದಿಗೆ ಅಂತ್ಯಗೊಳ್ಳಲಿದೆ.

ನ.16ರಿಂದ ಶಬರಿಮಲೆ ಯಾತ್ರೆ ಆರಂಭವಾಗಿತ್ತು. ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್‌ ಅವಕಾಶ ಕಲ್ಪಿಸಿದ್ದರಿಂದ ಕಳೆದ ವರ್ಷ ಸಂಪ್ರದಾಯ ವಾದಿಗಳಿಂದ ಭಾರೀ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಶಬರಿಮಲೆಯಲ್ಲಿ ಈ ವರ್ಷ ಯಾವುದೇ ಪ್ರತಿಭಟನೆಗಳು ನಡೆಯದೇ ಯಾತ್ರೆ ಶಾಂತಿಯುತವಾಗಿತ್ತು.

ಶಾಂತಿಯು ವಾತಾವರಣ ನೆಲೆಸಿದ್ದರಿಂದ ಈ ಬಾರಿ ಶಬರಿಮಲೆಗೆ ಭೇಟಿ ನೀಡಿದ ಭಕ್ತರ ಸಂಖ್ಯೆಯೂ ಹೆಚ್ಚಳವಾಗಿದ್ದು, ದೇವಾಲಯಕ್ಕೆ 156 ಕೋಟಿ ರು. ಆದಾಯ ಸಂಗ್ರಹವಾಗಿದೆ.