ಪ್ರವಾಹಕ್ಕೆ ಸಿಲುಕಿದ ಶಿವಾಜಿ ಕೋಟೆಗೆ ತೆರಳುತ್ತಿದ್ದ ಪ್ರವಾಸಿಗರ ದೃಶ್ಯ ಸೆರೆ, ಪ್ರಾಣ ಉಳಿಸಲು ಹೋರಾಟ!

ಛತ್ರಪತಿ ಶಿವಾಜಿ ಕೋಟೆ ವೀಕ್ಷಣೆಗೆ ಟ್ರೆಕ್ಕಿಂಗ್ ಮೂಲಕ ತೆರಳುತ್ತಿದ್ದ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಏಕಾಏಕಿ ಸುರಿದ ಭಾರಿ ಮಳೆಯಿಂದ ಪ್ರವಾಹ ಸೃಷ್ಟಿಯಾಗಿದೆ. ಕೋಟೆಯ ಮೆಟ್ಟಿಲುಗಳು ಪ್ರವಾಹದ ನದಿಯಂತಾಗಿ ಪ್ರವಾಸಿಗರು ಜೀವ ಉಳಿಸಿಕೊಳ್ಳಲು ಹರಹಾಸ ಮಾಡುವ ವಿಡಿಯೋ ಸೆರೆಯಾಗಿದೆ. 
 

Tourist stranded at raighad fort after heavy rainfall and flood ckm

ಮುಂಬೈ(ಜು.08) ಎಲ್ಲೆಡೆ ಭಾರಿ ಮಳೆಯಾಗುತ್ತಿದೆ. ಹೀಗಾಗಿ ಭಾರತದ ಹಲವು ಭಾಗಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೆಲ ಪ್ರವಾಸಿ ತಾಣಗಳ ಭೇಟಿಗೆ ನಿರ್ಬಂಧ ವಿಧಿಸಲಾಗಿದೆ. ಆದರೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಅಪಾಯಕಾರಿ ತಾಣಗಳಿಗೆ ತೆರಳುತ್ತಿದ್ದಾರೆ. ಹೀಗೆ ಛತ್ರಪತಿ ಶಿವಾಜಿ ಕೋಟೆಗೆ ಟ್ರಕ್ಕಿಂಗ್ ಮೂಲಕ ತೆರಳುತ್ತಿದ್ದ ಪ್ರವಾಸಿಗರು ಪ್ರವಾಹ ಸಿಲುಕಿದ ಘಟನೆ ಮಹಾರಾಷ್ಟ್ರದ ರಾಯ್‌ಘಡದಲ್ಲಿ ನಡೆದಿದೆ. 

ರಾಯ್‌ಘಡ ಕೋಟೆ ಶಿವಾಜಿ ಮಹಾರಾಜ ಆಳಿದ ಕೋಟೆ. ಬೆಟ್ಟದ ತುದಿಯಲ್ಲಿರುವ ಈ ಕೋಟೆಗೆ ಟ್ರೆಕ್ಕಿಂಗ್ ಮೂಲಕವೇ ತೆರಳಬೇಕು. ಬೇಸಿಗೆ ಕಾಲದಲ್ಲೂ ಇದು ಅಪಾಯಕಾರಿ ಟ್ರಕ್ಕಿಂಗ್. ಆಯ ತಪ್ಪಿದರೆ ಪ್ರಪಾತಕ್ಕುರುಳುವ ಸಾಧ್ಯತೆ ಇದೆ. ಆದರೆ ಮಳೆಗಾಲದಲ್ಲಿ ಈ ಕೋಟೆ ಟ್ರಕ್ಕಿಂಗ್, ಜಲಪಾತ, ಸುಂದರ ಪ್ರಕೃತಿ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ತೆರಳುತ್ತಾರೆ. ಆದರೆ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಪ್ರವಾಸಿಗರು ಕೋಟೆಯ ಅರ್ಧ ಭಾಗ ತಲುಪುತ್ತಿದ್ದಂತೆ ಪ್ರವಾಹ ಸೃಷ್ಟಿಯಾಗಿದೆ.

 

 

ಬೆಟ್ಟದ ಮೇಲಿನಿಂದ ನೀರು ಏಕಾಏಕಿ ಹರಿದು ಬಂದಿದೆ. ಕೋಟೆಯ ಮೆಟ್ಟಿಲು, ಬೆಟ್ಟದ ಬದಿಗಳಿಂದ ನೀರು ಪ್ರವಾಹದ ರೀತಿಯಲ್ಲಿ ಧುಮ್ಕುಕ್ಕಿದೆ. ಇದರ ಪರಿಣಾಮ ಪ್ರವಾಸಿಗರು ಜೀವ ಉಳಿಸಿಕೊಳ್ಳಲು ಪರದಾಡಬೇಕಾಯಿತು. ಸತತ ಮಳೆಯಿಂದ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಮೆಟ್ಟಿಲು ಹತ್ತುವಾಗ ನೆರವಾಗಲು ಹಾಕಿದ ಕಬ್ಬಿಣ ರಾಡ್‌ಗಳನ್ನು ಹಿಡಿದು ಪ್ರವಾಸಿಗರು ಜೀವ ಉಳಿಸಿಕೊಳ್ಳಬೇಕಾಯಿತು. ಈ ಕುರಿತ ವಿಡಿಯೋ ಆತಂಕ ಸೃಷ್ಟಿಸುತ್ತಿದೆ.

ಕೊನೆಯ ಕ್ಷಣದ ಭೀಕರ ದೃಶ್ಯ, ಏಕಾಏಕಿ ಹೆಚ್ಚಾದ ನೀರಿನಲ್ಲಿ ಕೊಚ್ಚಿ ಹೋದ 4 ಮಕ್ಕಳು, ಮಹಿಳೆ!

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಜಿಲ್ಲಾಡಳಿತ ರಕ್ಷಣಾ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರವಾಸಿಗರ ರಕ್ಷಣೆ ಮಾಡಿದ್ದಾರೆ. ಸುದೀರ್ಘ ಗಂಟೆಗಳ ರಕ್ಷಣಾ ಕಾರ್ಯದ ಮೂಲಕ ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ಇದೀಗ ಜುಲೈ 31ರ ವರೆಗೆ ರಾಯ್‌ಘಡ ಸೇರಿದಂತೆ ಹಲವು ಪರ್ವತಾರೋಹಿ ಕೋಟೆಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಕೋಟೆಯ ಪ್ರವೇಶ ದ್ವಾರದ ಬಳಿ ಪೊಲೀಸರು ನಿಂತಿದ್ದು, ಪ್ರವಾಸಿಗರಿಗೆ ನಿರ್ಬಂಧ ಹಾಕಿದ್ದಾರೆ.

ಚಿತ್ತ ದರ್ವಾಜಾ ಹಾಗೂ ನಾನೆ ದರ್ವಾಜ ದ್ವಾರದ ಮೂಲಕ ಪ್ರವಾಸಿಗರು ರಾಯ್‌ಘಡ ಕೋಟೆ ಹತ್ತಲು ಆರಂಭಿಸುತ್ತಿದ್ದರು. ಇದೀಗ ಇಲ್ಲಿಗೆ ಪೊಲೀಸರ ನಿಯೋಜನೆ ಮಾಡಲಾಗಿದೆ. ರಾಯ್‌ಘಡ, ಲೋಹಘಡ, ಮಾತೆರಾನ್ ಸೇರಿದಂತೆ ಮಹಾರಾಷ್ಟ್ರದ ಅಪಾಯಾಕಾರಿ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗುತ್ತಿದೆ.

ಛತ್ರಪತಿ ಶಿವಾಜಿ ಮಹಾರಾಜರು ಆಳಿದ ಈ ಅದ್ಭುತ ಕೋಟೆಯ ಬಗ್ಗೆ ನೀವು ತಿಳಿಯಲೇಬೇಕು!
 

Latest Videos
Follow Us:
Download App:
  • android
  • ios