Asianet Suvarna News Asianet Suvarna News

ಸಂಸದೆ ನವನೀತ್ ಸುಳ್ಳು ಬಟಾಬಯಲು ಮಾಡಿದ ಮುಂಬೈ ಪೊಲೀಸ್ ಆಯುಕ್ತ, ವಿಡಿಯೋ ವೈರಲ್!

* ಹನುಮಾನ್ ಚಾಲೀಸಾ ವಿವಾದದಲ್ಲಿ 14 ದಿನ ಬಂಧನದಲ್ಲಿರಿವ ಸಂಸದೆ ನವನೀತ್

* ಜೈಲಿನಲ್ಲಿದ್ದು ಪೊಲೀಸರ ವಿರುದ್ಧ ಅನೇಕ ಆರೋಪ ಮಾಡಿದ್ದ ಸಂಸದೆ

* ಸಂಸದೆ ನವನೀತ್ ಸುಳ್ಳು ಬಟಾಬಯಲು ಮಾಡಿದ ಮುಂಬೈ ಪೊಲೀಸ್ ಆಯುಕ್ತ

Top Cop's Video Home Ministry Letter After Arrested Maharashtra MP SOS pod
Author
Bangalore, First Published Apr 26, 2022, 4:24 PM IST

ನವದೆಹಲಿ(ಏ.26): ಹನುಮಾನ್ ಚಾಲೀಸಾ ವಿವಾದದಲ್ಲಿ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ರವಿ ರಾಣಾ ಅವರ ತೊಂದರೆಗಳು ಕಡಿಮೆಯಾಗುತ್ತಿಲ್ಲ. ಒಂದೆಡೆ ನ್ಯಾಯಾಲಯದಿಂದ ಜಾಮೀನು ಸಿಗುತ್ತಿಲ್ಲ ಎಂದಾದರೆ ಮತ್ತೊಂದೆಡೆ ಅವರ ಶಾಕಿಂಗ್ ವಿಡಿಯೋ ವೈರಲ್ ಆಗಿದ್ದು, ಅವರು ಇದರಲ್ಲಿ ನವನೀತ್ ಪೋಲೀಸ್-ಆಡಳಿತದ ವಿರುದ್ಧ ಮಾಡಿದ ಆರೋಪದ ಸತ್ಯ ಬಟಾಬಯಲಾಗಿದೆ. ಒಂದು ದಿನ ಮುಂಚಿತವಾಗಿ ಸೋಮವಾರ, ನವನೀತ್ ರಾಣಾ ಅವರು ದಲಿತ ಎಂಬ ಕಾರಣಕ್ಕೆ ಚಹಾ ನೀಡುತ್ತಿಲ್ಲ ಅಥವಾ ಶೌಚಾಲಯಕ್ಕೆ ಹೋಗಲು ಬಿಡುತ್ತಿಲ್ಲ ಎಂದು ಹೇಳಿದ್ದರು. ಆದರೆ ಇದೀಗ ಮುಂಬೈ ಪೊಲೀಸ್ ಆಯುಕ್ತ ಸಂಜಯ್ ಪಾಂಡೆ ಸಿಸಿಟಿವಿ ವಿಡಿಯೋ ಶೇರ್ ಮಾಡುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.

ವಿಡಿಯೋ ಮೂಲಕ ಎಲ್ಲ ಸತ್ಯ ಬಟಾ ಬಯಲು

ವಾಸ್ತವವಾಗಿ, ನವನೀತ್ ರಾಣಾ ಮತ್ತು ಅವರ ಪತಿ ರವಿ ರಾಣಾ ಚಹಾ ಮತ್ತು ಕಾಫಿ ಕುಡಿಯುವ ವೀಡಿಯೊವನ್ನು ಮುಂಬೈ ಪೊಲೀಸ್ ಕಮಿಷನರ್ ಸಂಜಯ್ ಪಾಂಡೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ, ಈ ಸಿಸಿಟಿವಿ ಪ್ರಕಾರ, ರಾಣಾ ದಂಪತಿ ಖಾರ್ ಪೊಲೀಸ್ ಠಾಣೆಯಲ್ಲಿ ಕುಳಿತು ಚಹಾ ಮತ್ತು ಕಾಫಿ ಕುಡಿಯುತ್ತಿರುವುದು ಕಂಡುಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ ನೆಟ್ಟಿಗರು ಕೂಡಾ ಇದೇ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅದೇ ಸಮಯದಲ್ಲಿ, ಪೊಲೀಸ್ ಕಮಿಷನರ್  ಸತ್ಯ ಏನೆಂದು ನೀವೇ ನೋಡಬಹುದೆಂದು ನರೆದಿದ್ದಾರೆ.

ಒಂದು ದಿನದ ಹಿಂದೆ ಈ ವಿಚಾರದ ಬಗ್ಗೆ ಬರೆದಿದ್ದ ನವನೀತ್

ಸೋಮವಾರ, ನವನೀತ್ ರಾಣಾ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ, ಅದರಲ್ಲಿ ಅವರು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ ಮತ್ತು 'ನನ್ನನ್ನು 23 ಏಪ್ರಿಲ್ 2022 ರಂದು ಖಾರ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಎಂದು ಬರೆದಿದ್ದಾರೆ. ಅಲ್ಲಿ ದಲಿತ ಎಂಬ ಕಾರಣಕ್ಕೆ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ನಾನು ಇಡೀ ರಾತ್ರಿ ನೀರಿಲ್ಲದೆ ಇದ್ದೆ. ನನಗೆ ಕುಡಿಯಲು ಚಹಾ ನೀಡಿಲ್ಲ ಅಥವಾ ಸ್ನಾನಗೃಹಕ್ಕೆ ಹೋಗಲು ಬಿಡಲಿಲ್ಲ ಎಂದು ಅವರು ಬರೆದಿದ್ದಾರೆ. ರಾತ್ರಿಯಿಡೀ ಪೊಲೀಸರ ಬಳಿ ನೀರು ಕೇಳಿದರೂ ಕೊಡಲಿಲ್ಲ. ನಾನು ಪರಿಶಿಷ್ಟ ಜಾತಿಗೆ ಸೇರಿದವನು, ಹಾಗಾಗಿ ಲೋಟದಲ್ಲಿ ನೀರು ಕೊಡುವುದಿಲ್ಲ ಎಂದು ಪೋಲೀಸರೊಬ್ಬರು ಹೇಳಿದಾಗ ನನಗೆ ತುಂಬಾ ಆಶ್ಚರ್ಯವಾಯಿತು ಎಂದಿದ್ದಾರೆ.

ನವನೀತ್ ರಾಣಾ ಜೈಲು ಪಾಲಾಗಿದ್ದೇಕೆ?

ಐದು ದಿನಗಳ ಹಿಂದೆ, ಶುಕ್ರವಾರ ಲೌಡ್ ಸ್ಪೀಕರ್ ವಿವಾದದ ನಂತರ, ನವನೀತ್ ರಾಣಾ ಅವರು ಶನಿವಾರ ಬೆಳಿಗ್ಗೆ 9 ಗಂಟೆಗೆ ಮಾತೋಶ್ರೀ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಘೋಷಿಸಿದ್ದರು. ಸಂಸದರ ಘೋಷಣೆ ಬಳಿಕ ಅವರ ಮನೆಯ ಹೊರಗೆ ಅಪಾರ ಸಂಖ್ಯೆಯಲ್ಲಿ ಶಿವಸೈನಿಕರು ಜಮಾಯಿಸಿದ್ದರು. ಗಲಾಟೆಯೂ ಆರಂಭಿಸಿದ್ದಾರೆ, ಮನೆಯಿಂದ ಹೊರಗೆ ಬರಲು ಬಿಡಲಿಲ್ಲ. ನಂತರ ಪೊಲೀಸ್ ಪಡೆಯನ್ನೂ ನಿಯೋಜಿಸಲಾಗಿತ್ತು. ನಂತರ ಸಂಜೆಯ ವೇಳೆಗೆ ರಾಣಾ ದಂಪತಿಯನ್ನು ಬಂಧಿಸಿ ಖಾರ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ರಾತ್ರಿಯಿಡೀ ಆಕೆ ಪೊಲೀಸ್ ಠಾಣೆಯಲ್ಲಿ ತಂಗಿದ್ದಳು. ಮರುದಿನ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಲ್ಲಿ ನ್ಯಾಯಾಲಯ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

Follow Us:
Download App:
  • android
  • ios