ಅಕ್ರಮಗಳ ತನಿಖೆ ನಡೆಸುತ್ತಿದ್ದ ಇಡಿ ಅಧಿಕಾರಿಗಳು ಏಕಾಏಕಿ ಶಾಸಕನ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇಡಿ ದಾಳಿಯಾಗುತ್ತಿದ್ದಂತೆ ಶಾಸಕ ಮನೆಯ ಗೋಡೆ ಹತ್ತಿ ಕೆಳಕ್ಕೆ ಜಿಗಿದು ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಓಡಿ ಹೋಗಲು ಪ್ರಯತ್ನಿಸಿದ ಶಾಸಕನನ್ನು ಅರೆಸ್ಟ್ ಮಾಡಲಾಗಿದೆ.
ಮುರ್ಶಿದಾಬಾದ್ (ಆ.25) ಪಶ್ಚಿಮ ಬಂಗಾಳ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ನಡೆದ ಅಕ್ರಮಗಳ ತನಿಖೆಯಲ್ಲಿ ಸ್ಫೋಟಕ ಮಾಹಿತಿಗಳು ಬಯಲಾಗುತ್ತಿದೆ. ನೇಮಕಾತಿ ಹಗರದಲ್ಲಿ ನಡೆದಿರುವ ಅಕ್ರಮ ಹಣದ ವ್ಯವಹಾರಗಳ ಕುರಿತು ಇಡಿ ತನಿಖೆ ನಡೆಸುತ್ತಿದೆ. ತನಿಖೆಯ ಭಾಗವವಾಗಿ ಇಡಿ ಅಧಿಕಾರಿಗಳು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಶಾಸಕ ಜಿಬಾನ್ ಕೃಷ್ಣ ಶಾ ಮನೆ ಮೇಲೆ ದಾಳಿ ನಡೆಸಿದ್ದಾರೆ. ಹಲವು ತನಿಖಾ ಸಂಸ್ಥೆಗಳ ಕಣ್ತಪ್ಪಿಸಿ ಓಡಾಡುತ್ತಿದ್ದ ಶಾಸಕ ಜಿಬಾನ್ ಕೃಷ್ಣ ಶಾ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಡಿ ಅಧಿಕಾರಿಗಳು ಮನೆ ಒಳಗೆ ಪ್ರವೇಶಿಸುತ್ತಿದ್ದಂತೆ ಹಿಂಬಾಗಿಲಿನಿಂದ ಓಡಿದ ಶಾಸಕ, ಮನೆ ಗೋಡೆ ಹಾರಿ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಆದರೆ ಇಡಿ ಅಧಿಕಾರಿಗಳು ಹಾಗೂ ಜೊತೆಗಿದ್ದ ಪೊಲೀಸರು ಶಾಸಕನ ಚೇಸ್ ಮಾಡಿ ಅರೆಸ್ಟ್ ಮಾಡಿದ್ದಾರೆ.
ಕೌಂಪೌಂಡ್ ಹಾರಿ ಎಸ್ಕೇಪ್ ಆಗಲು ಯತ್ನಿಸಿದ ಶಾಸಕ
ಇಡಿ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಶಾಸಕನ ಮನೆ ಮೇಲೆ ದಾಳಿ ಮಾಡಿದ್ದಾರೆ. ಗೇಟ್ ತೆರೆದು ಮನೆ ಒಳ ಪ್ರವೇಶಿಸಿದ ಇಡಿ ಅಧಿಕಾರಿಗಳು ಎಲ್ಲಾ ಕಡೆ ಹುಡುಕಾಟ ಆರಂಭಿಸಿದ್ದರು. ಈ ವೇಳೆ ಕೋಣೆಯೊಳಗಿದ್ದ ಶಾಸಕ ಮೆಲ್ಲನೆ ಹಿಂಬಾಗಿಲಿನತ್ತ ಓಡಿದ್ದಾರೆ. ಬಳಿಕ ಹಿಂಬಾಗಿಲಿ ಮೂಲಕ ಹೊರಬಂದ ಶಾಸಕ, ಅತೀ ಎತ್ತರಡ ಕೌಂಪೌಂಡ್ ಹತ್ತಿದ್ದಾರೆ. ಕೌಂಪೌಂಡ್ ಹತ್ತಿ ಹೊರಕ್ಕೆ ಜಿಗಿದ ಶಾಸಕ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಆದರೆ ಶಾಸಕನ ಮನೆ ಮೇಲೆ ದಾಳಿ ಮಾಡುವ ಮೊದಲು ಪೊಲೀಸರು ಶಾಸಕನ ಮನೆ ಸುತ್ತುವರಿದಿದ್ದರು. ಹೀಗಾಗಿ ಕೌಂಪೌಂಡ್ ಹಾರಿ ಕೆಳಕ್ಕೆ ಜಿಗಿದು ಓಡಲು ಯತ್ನಿಸಿದ ಶಾಸಕನನ್ನು ಪೊಲೀಸರು ಚೇಸ್ ಮಾಡಿ ಹಿಡಿದ್ದಾರೆ.
ಅಕ್ರಮ ಹಣದ ವ್ಯವಹಾರ
ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಬೀರ್ಬುಮ್‌ನಲ್ಲಿ ನಡೆದ ಅವ್ಯವಹಾರದಲ್ಲಿ ಶಾಸಕ ಜಿಬಾನ್ ಕೃಷ್ಣ ಶಾ ಪ್ರಮುಖ ಆರೋಪ ಎದುರಿಸುತ್ತಿದ್ದಾರೆ. ನೇಮಕಾತಿಯಲ್ಲಿ ಭಾರಿ ಹಣ ಪಡೆದು ನೇಮಕ ಮಾಡಲಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ. ಅಕ್ರಮವಾಗಿ ಹಣ ಪಡೆದ ಆರೋಪ, ಹಣ ಅಕ್ರಮ ವ್ಯವಹಾರಗಳ ತನಿಖೆ ನಡೆಸುತ್ತಿದ್ದ ಇಡಿ ಅಧಿಕಾರಿಗಳು ಜಿಬಾನ್ ಕೃಷ್ಣ ಶಾ ನಡೆಸಿದ್ದಾರೆ ಎನ್ನಲಾದ ಅವ್ಯವಹಾರದ ಬಗ್ಗೆ ತನಿಖೆ ನಡೆಸಿತ್ತು. ಈ ವೇಳೆ ಹಲವು ಅಕ್ರಮಗಳು ಬಯಲಾಗಿತ್ತು. ಹೀಗಾಗಿ ಶಾಸಕನ ಮನೆ ಮೇಲೆ ದಾಳಿ ಮಾಡಲಾಗಿತ್ತು.
2023ರಲ್ಲಿ ಅರೆಸ್ಟ್ ಆಗಿದ್ದ ಶಾಸಕ
2023ರಲ್ಲಿ ಇದೇ ಪ್ರಕರಣದಡಿ ಬಿಜಾನ್ ಕೃಷ್ಣ ಶಾ ಅರೆಸ್ಟ್ ಆಗಿದ್ದರು. ಆದರೆ ಜಾಮೀನು ಪಡೆದು ಹೊರಬಂದಿದ್ದರು. ಬಳಿಕ ಇದೇ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ಶಾಸಕನ ಪತ್ನಿ ಅರೆಸ್ಟ್ ಮಾಡಿದ್ದರು. ಒಂದೆಡೆ ಸಿಬಿಐ ತನಿಖೆ ನಡೆಸುತ್ತಿದ್ದರೆ, ಮತ್ತೊಂಡೆಡೆ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
