ರಾಜಸ್ತಾನದ ರತ್ನಂಬೊರೆ ಪಾರ್ಕ್‌ನಲ್ಲಿ ಘಟನೆ ಅಲೆದಾಡುತ್ತಿದ್ದ ಬೀದಿ ನಾಯಿ ಮೇಲೆರಗಿದ ಹುಲಿ ಪ್ರವಾಸಿಗರೆದುರೇ ಭಯಾನಕ ದೃಶ್ಯ  

ಜೈಪುರ: ಪ್ರವಾಸಿಗರ ಎದುರೇ ಹುಲಿಯೊಂದು ನಾಯಿಯನ್ನು ಭೇಟೆಯಾಡಿದ ಘಟನೆ ರಾಜಸ್ತಾನದ ರತ್ನಂಬೊರೆ ಪಾರ್ಕ್‌ (Ranthambore National Park) ನಲ್ಲಿ ನಡೆದಿದೆ. ಇದನ್ನು ರತ್ನಂಬೊರೆ ಪಾರ್ಕ್‌ಗೆ ಸಂಬಂಧಿಸಿದ ಯೂಟ್ಯೂಬ್‌ ಚಾನೆಲ್‌ನಲ್ಲಿ ಹಾಕಲಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಫಾರಿ ವಾಹನಗಳಲ್ಲಿ ಪ್ರವಾಸಿಗರ ಗುಂಪಿನ ಬಳಿ ಬೀದಿ ನಾಯಿಯೊಂದು ಅಡ್ಡಾಡುತ್ತಿರುತ್ತದೆ. ಅದೇ ವೇಳೆ ಎಲ್ಲಿಂದಲೋ ಹಾರಿ ಬಂದ ಹುಲಿಯೊಂದು ನಾಯಿಯ ಮೇಲೆ ಹಾರಿ, ಅದನ್ನು ಹತ್ತಿರದ ಪೊದೆಗೆ ಎಳೆದೊಯ್ಯುತ್ತದೆ. ಇದು ವನ್ಯಜೀವಿ ಪ್ರಿಯರಲ್ಲಿ ಒಮ್ಮೆಲೆ ಗಾಬರಿ ಹುಟ್ಟಿಸಿತ್ತು. 

ವನ್ಯಜೀವಿ ಸಂರಕ್ಷಣಾ ಟ್ರಸ್ಟ್‌ನ ( Wildlife Conservation Trust) ಅಧ್ಯಕ್ಷ ಅನೀಶ್ ಅಂಧೇರಿಯಾ(Anish Andheria) ಅವರು ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಹುಲಿಯು ರತ್ನಂಬೊರೆ ರಾಷ್ಟ್ರೀಯ ಉದ್ಯಾನವನದಲ್ಲಿ ನಾಯಿಯನ್ನು ಕೊಂದಿದೆ. ಹಾಗೆ ಮಾಡುವುದರಿಂದ, ಅದು ತನ್ನ ಸಂತತಿಯನ್ನೇ ನಾಶಮಾಡುವ ಕೋರೆಹಲ್ಲುಗಳಂತಹ ಮಾರಣಾಂತಿಕ ಕಾಯಿಲೆ (canine distemper)ಗೆ ತನ್ನನ್ನು ಒಡ್ಡಿಕೊಳ್ಳುತ್ತಿದೆ ಎಂದು ಅವರು ಈ ಟ್ವಿಟ್ಟರ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ. 

Scroll to load tweet…

ನಾಯಿಗಳು ವನ್ಯಜೀವಿಗಳಿಗೆ ಅಪಾಯಕಾರಿಯಾಗಿದ್ದು, ರಾಷ್ಟ್ರೀಯ ಉದ್ಯಾನವನದಲ್ಲಿ ಅವುಗಳ ಉಪಸ್ಥಿತಿಯನ್ನು ನಿಯಂತ್ರಿಸಬೇಕಾಗುವುದು ಎಂದು ಅಂಧೇರಿ ಹೇಳಿದ್ದಾರೆ. ಈ ಹುಲಿ ಈ ರಾಷ್ಟ್ರೀಯ ಉದ್ಯಾನವನದ ಪ್ರಸಿದ್ಧ ಹುಲಿಯಾಗಿದ್ದು, ಇದು ಸುಲ್ತಾನ್‌ ಎಂದು ಖ್ಯಾತಿ ಗಳಿಸಿದೆ. ಡಿಸೆಂಬರ್‌ 27ರ ಮುಂಜಾನೆ ಈ ರಾಷ್ಟ್ರೀಯ ಉದ್ಯಾನವನದ ಹಂತ ಒಂದರಲ್ಲಿ ಪ್ರವಾಸಿಗರು ಸಫಾರಿ ವಾಹನದಲ್ಲಿ ಇದ್ದಂತಹ ಸಂದರ್ಭದಲ್ಲೇ ಈ ಘಟನೆ ಸಂಭವಿಸಿದೆ. 

ಗೇಟ್ ಹಾರಿ ಬಂದು ಸಾಕು ನಾಯಿ ಹೊತ್ತೊಯ್ದ ಚಿರತೆ..

ಇತ್ತೀಚೆಗೆ ಚಿರತೆಯೊಂದು ಗೇಟ್‌ ಹಾರಿ ಬಂದು ಗೇಟ್‌ ಒಳಗಿದ್ದ ಸಾಕುನಾಯಿಯನ್ನು ಹೊತ್ತೊಯ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದು ಸಿಸಿಟಿವಿ ದೃಶ್ಯಾವಳಿಯಾಗಿದ್ದು, ವಿಡಿಯೋದಲ್ಲಿ ಮನೆಯ ಗೇಟ್‌ನ ಒಳಭಾಗದಲ್ಲಿ ನಾಯಿಯೊಂದು ನಿಂತುಕೊಂಡು ಗೇಟ್‌ನತ್ತ ನೋಡಿ ಬೊಗಳುವುದು ಕಾಣಿಸುತ್ತಿದೆ. ಕೂಡಲೇ ಯಾವುದೋ ಪ್ರಾಣಿ ಇರುವುದನ್ನು ಗಮನಿಸಿದ ನಾಯಿ ಭಯದಿಂದ ಸೀದಾ ಮನೆಯತ್ತ ಓಡಿ ಬರುತ್ತದೆ. ಅಷ್ಟರಲ್ಲೇ ಗೇಟ್‌ ಹಾರಿ ಮನೆಯ ಆವರಣಕ್ಕೆ ಬಂದ ಚಿರತೆ ಕ್ಷಣದಲ್ಲೇ ನಾಯಿಯನ್ನು ಹೊತ್ತೊಯ್ದು ಗೇಟ್‌ ಹಾರಿ ಹೊರ ಹೋಗುತ್ತದೆ. 

Chinese Tiger year: ಚೈನೀಸ್ ಹುಲಿ ವರ್ಷದ ಭವಿಷ್ಯ, 2022 ನಿಮಗೇನು ತರಲಿದೆ?

ಚಿರತೆಗಳು ಕಾಡು ಪ್ರಾಣಿಗಳಾಗಿದ್ದರೂ ಇತ್ತೀಚೆಗೆ ಮಾನವರಿರುವ ಪ್ರದೇಶಗಳಿಗೆ ಅವುಗಳ ಅಲೆದಾಟ ಹೆಚ್ಚಾಗಿದೆ. ಕಾಡಂಚಿನ ಗ್ರಾಮಗಳಲ್ಲಂತೂ ಚಿರತೆ ದಾಳಿ ಸಾಮಾನ್ಯ ಎನಿಸಿ ಬಿಟ್ಟಿದೆ. ಚಿರತೆಗಳು ಸಾಮಾನ್ಯವಾಗಿ ನಾಯಿ, ಕುರಿಗಳನ್ನು ಬೇಟೆಯಾಡುತ್ತವೆ. 2015 ರ ಸಂಶೋಧನೆಯ ಪ್ರಕಾರ, ಮಹಾರಾಷ್ಟ್ರವು ಮೂರನೇ ಅತಿ ಹೆಚ್ಚು ಚಿರತೆಗಳನ್ನು ಹೊಂದಿದ ರಾಜ್ಯವಾಗಿದೆ. ನಂತರ ಮಧ್ಯಪ್ರದೇಶವಿದೆ. ಚಿರತೆಯೊಂದು ಮನೆಗೆ ನುಗ್ಗಿ ಸಾಕಿದ ನಾಯಿಯ ಮೇಲೆ ದಾಳಿ ಮಾಡಿರುವ ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಪ್ರವೀಣ್‌ ಕಾಸ್ವಾನ್‌ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ಆದರೆ ಇದು ಎಲ್ಲಿ ನಡೆದ ಘಟನೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ