ನವದೆಹಲಿ[ಫೆ.07]: ಕಾಂಗ್ರೆಸ್ ನಾಯಕಿ ವಿಪ್ಲವ್ ಠಾಕೂರ್ ಗುರುವಾರದಂದು ರಾಜ್ಯಸಭೆಯಲ್ಲಿ ಮಾತನಾಡಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದ ಬಿಜೆಪಿಗರಿಗೆ ಖಾರವಾಗಿಯೇ ಉತ್ತರಿಸಿರುವ ನಾಯಕಿ, ಏನೇನು ಸಾಧನೆ ಮಾಡಿದ್ದೇವೆಂಬುವುದನ್ನು ವಿವರಿಸಿದ್ದಾರೆ. ವಿಪ್ಲವ್ ಈ ಮಾತಿಗೆ ಬಿಜೆಪಿ ನಾಯಕರು ಫುಲ್ ಸೈಲೆಂಟ್ ಆಗಿದ್ದಾರೆ.

ಹೌದು ರಾಜ್ಯಸಭೆಯಲ್ಲಿ ಬಿಜೆಪಿ ವಿರುದ್ಧ ಗುಡುಗಿದ ಹಿಮಾಚಲ ಪ್ರದೇಶದ ಕೈ ನಾಯಕಿ ವಿಪ್ಲವ್ 'ಅಟಲ್ ಬಿಹಾರಿ ವಾಜಪೇಯಿ ಮಾಜಿ ಪಿಎಂ ಜವಾಹರ ಲಾಲ್ ನೆಹರೂ ವಿರುದ್ಧ ಮಾತನಾಡಿದಾಗ ಯಾರೂ ಅವರನ್ನು ದೇಶದ್ರೋಹಿ ಅನ್ನಲಿಲ್ಲ. ಆದರೆ ಇಂದು ಸರ್ಕಾರದ ವಿರುದ್ಧ ಧ್ವನಿ ಎತ್ತುವವರನ್ನು ಹತ್ತಿಕ್ಕಲಾಗುತ್ತಿದೆ. ಅವರಿಗೆ ದೆಶದ್ರೋಹಿ ಎಂಬ ಪಟ್ಟ ಕಟ್ಟಲಾಗುತ್ತಿದೆ. ಇಂದು ಬಿಜೆಪಿ ಮಾತು ಮಾತಿಗೂ ಪಾಕಿಸ್ತಾನದ ಹೆಸರೆತ್ತುತ್ತಿದೆ. ಕಳೆದ 70 ವರ್ಷಗಳಲ್ಲಿ ಬಹುಶಃ ನಾವೇ ಅಷ್ಟು ಬಾರಿ ಪಾಕಿಸ್ತಾನದ ಹೆಸರು ಬಳಸಿರಲಿಲ್ಲವೇನೋ' ಎಂದಿದ್ದಾರೆ.

ಇದೇ ವೇಳೆ ಬಿಜೆಪಿ ದೇಶವನ್ನು ಧರ್ಮದ ಆಧಾರದಲ್ಲಿ ಹೋಳು ಮಾಡುತ್ತಿದೆ ಎಂದು ಆರೋಪಿಸಿರುವ ವಿಪ್ಲವ್ ದೇಶದಲ್ಲಿ ಸೌಹಾರ್ದ ಭಾವನೆ ಮೂಡಿಸಿ ಜನರನ್ನು ಒಗ್ಗೂಡಿಸುವ ಪ್ರಯತ್ನ ಮಾಡಲು ಮನವಿ ಮಾಡಿಕೊಂಡಿದ್ದಾರೆ. 
 

ಫೆಬ್ರವರಿ 6ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ