Asianet Suvarna News Asianet Suvarna News

ಗಣ​ರಾ​ಜ್ಯೋ​ತ್ಸ​ವ​ದ ಪರೇ​ಡ್‌ನ ಮೊದಲ ಸಾಲು ಶ್ರಮಜೀವಿಗಳಿಗೆ ಮೀಸಲು

ಸಾ​ಮಾನ್ಯ ಜನರ ಸಹ​ಭಾ​ಗಿ​ತ್ವ' ಥೀಮ್‌ ಅಡಿ​ಯಲ್ಲಿ ಆಯೋ​ಜಿ​ಸ​ಲಾ​ಗು​ತ್ತಿ​ರುವ ಈ ಬಾರಿಯ ಗಣ​ರಾ​ಜ್ಯೋ​ತ್ಸವ ಪರೇ​ಡ್‌​ನಲ್ಲಿ ವೇದಿಕೆ ಮುಂಭಾ​ಗದ ಸಾಲು​ಗಳನ್ನು ವಿಐ​ಪಿ​ಗ​ಳ ಬದಲಾಗಿ ಶ್ರಮ​ಜೀ​ವಿ​ಗ​ಳಿಗೆ ಮೀಸ​ಲಿ​ಡ​ಲು ನಿರ್ಧರಿಸಲಾಗಿದೆ.

This time first row of the Republic day parade is reserved for the common peoples of India akb
Author
First Published Jan 20, 2023, 9:08 AM IST

ನವ​ದೆ​ಹ​ಲಿ: 'ಸಾ​ಮಾನ್ಯ ಜನರ ಸಹ​ಭಾ​ಗಿ​ತ್ವ' ಥೀಮ್‌ ಅಡಿ​ಯಲ್ಲಿ ಆಯೋ​ಜಿ​ಸ​ಲಾ​ಗು​ತ್ತಿ​ರುವ ಈ ಬಾರಿಯ ಗಣ​ರಾ​ಜ್ಯೋ​ತ್ಸವ ಪರೇ​ಡ್‌​ನಲ್ಲಿ ವೇದಿಕೆ ಮುಂಭಾ​ಗದ ಸಾಲು​ಗಳನ್ನು ವಿಐ​ಪಿ​ಗ​ಳ ಬದಲಾಗಿ ಶ್ರಮ​ಜೀ​ವಿ​ಗ​ಳಿಗೆ ಮೀಸ​ಲಿ​ಡ​ಲು ನಿರ್ಧರಿಸಲಾಗಿದೆ.  ರಿಕ್ಷಾ ಎಳೆ​ಯು​ವ​ವರು, ತರ​ಕಾರಿ ಮಾರುವವರು, ದಿನಸಿ ವ್ಯಾಪಾ​ರಿ​ಗಳು ಮತ್ತು ನವೀಕೃತ ಸೆಂಟ್ರ​ಲ್‌​ವಿಸ್ತಾ ನಿರ್ಮಾ​ಣ​ದಲ್ಲಿ ಭಾಗಿಯಾದ ಕಾರ್ಮಿ​ಕರು ಹಾಗೂ ಅವರ ಕುಟುಂಬ, ಕರ್ತ​ವ್ಯ​ಪ​ಥದ ನಿರ್ವ​ಹಣಾ ಕಾರ್ಮಿ​ಕ​ರಿಗೆ ಮೊದಲ ಸಾಲನ್ನು ಮೀಸ​ಲಿ​ರಿ​ಸ​ಲಾ​ಗಿದೆ. ಇವ​ರು​ಗಳು ನಿಜ​ವಾ​ಗಲೂ ಗಣ​ರಾಜ್ಯ ದೇಶದ ಪ್ರತಿ​ನಿ​ಧಿ​ಗ​ಳಾ​ಗಿ​ದ್ದಾರೆ. ಹಾಗಾಗಿ ಈ ಬಾರಿ ಸಾಮಾ​ನ್ಯ​ರಿಗೆ ಈ ಬಾರಿ ಅವ​ಕಾಶ ನೀಡ​ಲಾ​ಗಿ​ದೆ ಎಂದು ವರ​ದಿ​ಗಳು ತಿಳಿ​ಸಿವೆ.

ಈ ಬಾರಿ ಗಣ​ರಾ​ಜ್ಯೋ​ತ್ಸ​ವದ ಮುಖ್ಯ ಅತಿ​ಥಿ​ಯಾಗಿ(chief guest of the Republic Day) ಈಜಿ​ಫ್ಟ್‌ನ ಅಧ್ಯಕ್ಷ (President of Egypt) ಅಬೆಲ್‌ ಫತಾಹ್‌ ಅಲ್‌-ಸಿಸಿ (Abel Fattah Al-Sisi) ಅವರು ಭಾಗ​ವ​ಹಿ​ಸು​ತ್ತಿ​ದ್ದಾರೆ. ಇವ​ರೊಂದಿಗೆ ಈಜಿಫ್ಟ್‌​ನಿಂದ (Egypt) ಆಗ​ಮಿ​ಸು​ತ್ತಿ​ರುವ 120 ಮಂದಿಯ ತಂಡ ಸಹ ಭಾಗಿ​ಯಾ​ಗು​ತ್ತಿದೆ. ಇದು ರಾಜ​ಪಥ ಎಂಬ ಹೆಸ​ರನ್ನು ಕರ್ತ​ವ್ಯ​ಪಥ ಎಂದು ಬದ​ಲಾ​ಯಿ​ಸಿದ ಬಳಿಕ ನಡೆ​ಯು​ತ್ತಿ​ರುವ ಮೊದಲ ಗಣ​ರಾ​ಜ್ಯೋ​ತ್ಸ​ವ​ವಾ​ಗಿದೆ. ಈ ಬಾರಿ ಪರೇ​ಡ್‌ನ ವೇಳೆ ಒದ​ಗಿ​ಸ​ಲಾ​ಗು​ತ್ತಿದ್ದ ಸೀಟು​ಗ​ಳನ್ನು 45 ಸಾವಿ​ರಕ್ಕೆ ಇಳಿಕೆ ಮಾಡ​ಲಾ​ಗಿದೆ. ಇದ​ರಲ್ಲಿ 32 ಸಾವಿರ ಸೀಟು​ಗಳು ಹಾಗೂ ಬೀಟಿಂಗ್‌ ರಿಟ್ರೀಟ್‌ನ ಶೇ.10ರಷ್ಟು ಸೀಟು​ಗಳು ಆನ್ಲೈ​ನ್‌​ನಲ್ಲಿ ಲಭ್ಯ​ವಿದೆ.

Republic Day : ಪಾಲಕರೇ…ಮಕ್ಕಳಲ್ಲಿ ದೇಶ ಪ್ರೇಮ ಹೆಚ್ಚಿಸಿ, ರಾಷ್ಟ್ರೀಯ ಹಬ್ಬದ ಮಹತ್ವ ತಿಳಿಸಿ

Republic Day 20 ರಿಂದ 10 ದಿನ ಲಾಲ್‌ಬಾಗಲ್ಲಿ ಪುಷ್ಪ ಪ್ರದರ್ಶನ

Follow Us:
Download App:
  • android
  • ios