ತಿರುವನಂತಪುರಂ(ಜೂ. 06): ಕಳೆದ ಕೆಲ ದಿನಗಳ ಹಿಂದೆ ಗರ್ಭಿಣಿ ಆನೆಯೊಂದು ಸ್ಪೋಟಕ ತುಂಬಿದ ಹಣ್ಣು ತಿಂದು ನರಳಾಡುತ್ತಾ ಪ್ರಾಣ ಬಿಟ್ಟ ಘಟನೆ ಇಡೀ ದೇಶವನ್ನೇ ದಂಗಾಗಿಸಿತ್ತು. ಘಟನೆ ಬೆನ್ನಲ್ಲೇ ಮನುಷ್ಯತ್ವ ಸತ್ತು ಹೋಗಿದೆ ಎಂಬ ಕೂಗು, ಬೇಜಾರಿನ ಮಾತು ಕೇಳಿ ಬಂದಿತ್ತು. ಹೀಗಿರುವಾಗಲೇ ಆನೆಗಳು ಮನುಷ್ಯರಿಗೆ ತೋರಿಸುವ ಪ್ರೀತಿಯ ವಿಡಿಯೋಗಳು ವೈರಲ್ ಆಗಲಾರಂಭಿಸಿದ್ದವು ಹಾಗೂ ಮನುಷ್ಯರು ಪ್ರಾಣಿಗಳ ಪ್ರೀತಿಗೆ ಅರ್ಹರಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಸದ್ಯ ಮಾವುತನೊಬ್ಬ ತನ್ನ ಆನೆ ಬಳಿ ಮಾತನಾಡುತ್ತಾ ಪ್ರೀತಿಯಿಂದ ನಾನು ಹೋಗಲೇ ಎಂದು ಕೇಳಿದಾಗ, ಆ ಆನೆ ಅಷ್ಟೇ ಪ್ರೀತಿಯಿಂದ ತನ್ನ ಮಾಲೀಕನಿಗೆ ಉತ್ತರಿಸುವ ವಿಡಿಯೋ ವೈರಲ್ ಆಗಿದೆ.

ಗರ್ಭಿಣಿ ಆನೆಗೆ ಸ್ಫೋಟಕವಿಟ್ಟು ಹಣ್ಣು ನೀಡಿದ ದುರುಳರು, ನರಕವೇದನೆಯಿಂದ ಪ್ರಾಣಬಿಟ್ಟ ಗಜ!

ಚಿತ್ತೂಕುರುವಿ ಎಂಬ ಖಾತೆಯಿಂದ ಈ ವಿಡಿಯೋ ಟ್ವೀಟ್ ಮಾಡಲಾಗಿದೆ. ಈ ವಿಡಿಯೋವನ್ನು ಶೇರ್ ಮಾಡಿರುವ ವ್ಯಕ್ತಿ 'ಕೇರಳದದ ಒಂದು ಮಂದಿರದಲ್ಲಿ ಮಾವುತ ತನ್ನ ಆನೆ ಬಳಿ ಮನೆಗೆ ಹೋಗಲು ಪರ್ಮೀಷನ್ ಕೇಳುತ್ತಾರೆ. ಹೀಗಿರುವಾಗ ಆನೆಯ ಹಾವಭಾವ ನೋಡಿ. ಅದ್ಭುತ' ಎಂದು ಬರೆದಿದ್ದಾರೆ.

ಈ ವಿಡಿಯೋ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ಮಾವುತ ನಾನು ಮನೆಗೆ ಹೋಗಲೇ ಎಂದು ಹಲವಾರು ಬಾರಿ ಆಣೆ ಬಳಿ ಪ್ರಶ್ನಿಸುತ್ತಾರೆ. ಹೀಗಿರುವಾಗ ಆನೆ ತನ್ನದೇ ಧಾಟಿಯಲ್ಲಿ ಪ್ರತಿಕ್ರಿಯಿಸುತ್ತಾ ತಲೆ ಅಲ್ಲಾಡಿಸಿ ಹೋಗಿ ಎಂದು ಹೇಳುತ್ತದೆ. ಹೀಗಿರುವಾಗ ಮಾವುತ ಇನ್ನೇನು ಹೊರಡಲು ಹೆಜ್ಜೆ ಇರಿಸುತ್ತಿದ್ದಂತೆಯೇ ಆತನ ಬಳಿ ಸರಿದು ಅಪ್ಪಿಕೊಳ್ಳುವಂತೆ ನಿಲ್ಲುತ್ತಾ, ಪ್ರೀತಿ ಮಾಡುತ್ತದೆ.

ನೀರಿನಲ್ಲಿ ಮುಳುಗುತ್ತಿದ್ದವನನ್ನು ಕಾಪಾಡಿದ ಆನೆ, ಮಾನವ ಇದಕ್ಕೆ ಅರ್ಹನೇ?

ಗರ್ಭಿಣಿ ಆನೆ ದುರಂತ ಬಳಿಕ ಇಂತಹ ಹಲವಾರು ವಿಡಿಯೋಗಳು ವೈರಲ್ ಆಗಲಾರಂಭಿಸಿವೆ. ಎರಡು ದಿನಗಳ ಹಿಂದಷ್ಟೇ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ಮರಿ ಆನೆಯೊಂದು ನದಿಗಿಳಿದು ರಕ್ಷಿಸಿದ ವಿಡಿಯೋ ಭಾರೀ ವೈರಲ್ ಆಗಿತ್ತು.