ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿಯು 25 ವರ್ಷಗಳಲ್ಲಿ ನಡೆದ ಅತಿದೊಡ್ಡ ದಾಳಿಯಾಗಿದೆ. ಉಗ್ರರು ಪ್ರವಾಸಿಗರ ಗುರುತು ಪರಿಶೀಲಿಸಿ, ಮುಸ್ಲಿಮೇತರರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ.

ಶ್ರೀನಗರ: ಪಹಲ್ಗಾಂನಲ್ಲಿ ಮಂಗಳವಾರ ಪ್ರವಾಸಿಗರ ಮೇಲೆ ನಡೆದ ದಾಳಿಯು 25 ವರ್ಷದಲ್ಲೇ ಪ್ರವಾಸಿಗರ ಮೇಲೆ ನಡೆದ ಅತಿದೊಡ್ಡ ದಾಳಿಯಾಗಿದೆ. 2000ನೇ ಇಸವಿಯ ಆಗಸ್ಟ್ 2 ರ ಸಂಜೆ ಹಿಜ್ಬುಲ್‌ ಮುಜಾಹಿದೀನ್‌ ಉಗ್ರರು ಯಾತ್ರಿಕರು ಇದ್ದ ಶಿಬಿರದ ಮೇಲೆ ದಾಳಿ ಮಾಡಿ 32 ಜನರನ್ನು ಕೊಂದಿದ್ದರು. ಇದು ಈವರೆಗಿನ ಅತಿದೊಡ್ಡ ಪ್ರವಾಸಿಗರ ಮೇಲೆ ನಡೆದ ದಾಳಿಯಾಗಿದೆ. ಇನ್ನು 2019ರಲ್ಲಿ ಪುಲ್ವಾಮಾದಲ್ಲಿ ಉಗ್ರರು ಸಿಆರ್‌ಪಿಎಫ್‌ ಯೋಧರ ಮೇಲೆ ದಾಳಿ ಮಾಡಿ 40 ಯೋಧರನ್ನು ಕೊಂದಿದ್ದರು.

ಪರಿಚ್ಛೇದ 370 ರದ್ದತಿ ಬಳಿಕ ದೊಡ್ಡ ದಾಳಿ
ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು 2019ರಲ್ಲಿ ರದ್ದುಗೊಳಿಸಲಾಗಿತ್ತು. ಇದಾದ ನಂತರ ಯೋಧರು, ವಲಸಿಗರು ಹಾಗೂ ಸ್ಥಳೀಯರ ಮೇಲೆ ಉಗ್ರರು ದಾಳಿ ಮಾಡಿದ್ದರೂ ಈ ಪ್ರಮಾಣದಲ್ಲಿ ದಾಳಿ ಮಾಡಿರಲಿಲ್ಲ. ಹೀಗಾಗಿ ಪಹಲ್ಗಾಂನಲ್ಲಿ ನಡೆದ ದಾಳಿ ವಿಶೇಷ ಸ್ಥಾನಮಾನ ರದ್ದಾದ ನಂತರದ ಅತಿದೊಡ್ಡ ದಾಳಿಯಾಗಿದೆ.

ಮುಸ್ಲಿಂ ಅಲ್ಲ ಎಂದು ಖಚಿತ ಮಾಡಿಪಡಿಸಿಕೊಂಡು ಹತ್ಯೆ!
ಕಾಶ್ಮೀರದ ಪಹಲ್ಗಾಂನಲ್ಲಿ, ಪ್ರವಾಸಿಗರು ಮುಸ್ಲಿಮರು ಹೌದೋ ಅಲ್ಲವೋ ಎಂದು ಖಚಿತಪಡಿಸಿಕೊಂಡು ಅವರ ಮೇಲೆ ಉಗ್ರರು ದಾಳಿ ಮಾಡಿದ ವಿಷಯವನ್ನು ದಾಳಿಯಿಂದ ಪಾರಾದವರು ಬಿಚ್ಚಿಟ್ಟಿದ್ದಾರೆ. ಉಗ್ರರು ಐಡಿ ಕಾರ್ಡ್‌ ಕೇಳಿ, ಪ್ರವಾಸಿಗರ ವಿವರ ಪಡೆದರು ಹಾಗೂ ಕೆಲವರ ಪ್ಯಾಂಟ್ ಬಿಚ್ಚಿಸಿ ಅವರ ಗುರುತು ಖಚಿತಪಡಿಸಿಕೊಂಡು ದಾಳಿ ಮಾಡಿದರು ಎಂದು ಗೊತ್ತಾಗಿದೆ. 

ದಾಳಿಗೆ ಒಳಗಾದ ಕುಟುಂಬದ ಮಹಿಳೆಯೊಬ್ಬರು ತನ್ನ ಗಂಡನ ತಲೆಗೆ ಗುಂಡು ಹಾರಿಸಲಾಗಿದೆ ಎಂದು ರೋದಿಸುತ್ತಾ ಪತ್ರಕರ್ತರ ಜತೆ ಮಾತನಾಡಿ, ‘ನನ್ನ ಗಂಡನ ತಲೆಗೆ ಗುಂಡು ಹಾರಿಸಲಾಗಿದೆ, ಅವರು ಮುಸ್ಲಿಂ ಅಲ್ಲ ಎಂಬ ಅಲ್ಲ ಕಾರಣಕ್ಕಾಗಿ ಗುಂಡು ಹಾರಿಸಲಾಗಿದೆ’ ಎಂದು ಹೇಳಿದಳು. ಇನ್ನೂ ಕೆಲವರು ಮಾತನಾಡಿ, ‘ಉಗ್ರರು ಪ್ರವಾಸಿಗರ ಜಾತಿ-ಧರ್ಮದ ಬಗ್ಗೆ ವಿಚಾರಿಸಿ, ಅವರ ಗುರುತಿನ ಪತ್ರ ನೋಡಿ ಮುಸ್ಲಿಮೇತರ ಎಂದು ಖಚಿತಪಡಿಸಿಕೊಂಡು ಗುಂಡು ಹಾರಿಸಿದರು’ ಎಂದಿದ್ದಾರೆ.

ಮಾನವೀಯತೆಗೆ ಕಪ್ಪುಚುಕ್ಕೆ
ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಕಾಂಗ್ರೆಸ್‌ ಖಂಡಿಸಿದೆ. ದೇಶವು ಉಗ್ರವಾದದ ವಿರುದ್ಧ ಒಂದಾಗಿದೆ ಎಂದು ಹೇಳಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಎಕ್ಸ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ‘ಜಮ್ಮು ಕಾಶ್ಮೀರದ ಪಹಾಲ್ಗಾಂನಲ್ಲಿ ಮುಗ್ಧ ಪ್ರವಾಸಿಗರ ಮೇಲೆ ನಡೆದ ಉಗ್ರ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಉಗ್ರವಾದದ ವಿರುದ್ಧ ಹೋರಾಡಲು ಇಡೀ ದೇಶ ಒಂದಾಗಿದೆ. ಈ ಹೀನ ಕೃತ್ಯಗಳು ಮಾನವೀಯತೆಗೆ ಕಪ್ಪುಚುಕ್ಕೆಯಾಗಿದೆ. ದುರ್ಘಟನೆಯಲ್ಲಿ ಮೃತರಾದ ಎಲ್ಲರಿಗೂ ಕಾಂಗ್ರೆಸ್‌ ಪಕ್ಷದ ಪರವಾಗಿ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುವೆ’ ಎಂದು ತಿಳಿಸಿದ್ದಾರೆ.

ಜೊತೆಗೆ ‘ಭಾರತದ ರಾಷ್ಟ್ರೀಯ ಭದ್ರತೆಯ ಅತಿಮುಖ್ಯವಾಗಿದ್ದು, ಇದನ್ನು ಸರಿಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಸರಿಯಾದ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: 'ಸಾವು ಕೂಡ ಧರ್ಮವನ್ನೇ ನೋಡಿತು..' ಸೋಶಿಯಲ್‌ ಮೀಡಿಯಾದಲ್ಲಿ ಪಹಲ್ಗಾಮ್‌ ರಕ್ತದೋಕುಳಿಗೆ ಕಂಬನಿ!

ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಆಕ್ರೋಶ
ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಆಕ್ರೋಶ ಹೊರಹಾಕಿದ್ದು, ನಿರಾಯುಧ ಮತ್ತು ಮುಗ್ಧ ಜನರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದು ಮಾನವೀಯತೆ ವಿರುದ್ಧದ ಅಪರಾಧವಾಗಿದೆ. ಇದು ಸಂಪೂರ್ಣ ಸ್ವೀಕಾರಾರ್ಹವಲ್ಲ. ಉಗ್ರವಾದದ ವಿರುದ್ಧ ದೇಶ ಒಗ್ಗಟ್ಟಾಗಿದ್ದು, ನಾವು ಈ ದಾಳಿಯನ್ನು ಖಂಡಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ಕಾಶ್ಮೀರ ಉಗ್ರರ ದಾಳಿಗೆ ಬೆಂಗಳೂರಿನ ವ್ಯಕ್ತಿ ಬಲಿ: ಹಿಂದೂ ಎನ್ನುತ್ತಿದ್ದಂತೆ ಗುಂಡು ಹಾರಿಸಿ ಹತ್ಯೆ!

Scroll to load tweet…
Scroll to load tweet…