Asianet Suvarna News Asianet Suvarna News

ಬಿಜೆಪಿ ನಾಯಕ ಜ್ಞಾನೇಂದ್ರ ಪ್ರಸಾದ್ ಶವವಾಗಿ ಪತ್ತೆ, ಸ್ಥಳಕ್ಕೆ ಧಾವಿಸಿದ ಪೊಲೀಸ್!

ಜನ ನಾಯಕಾಗಿ, ಕ್ಷೇತ್ರದ ಜನರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಬಿಜೆಪಿ ನಾಯಕ ಜ್ಞಾನೇಂದ್ರ ಪ್ರಸಾದ್ ಶವವಾಗಿ ಪತ್ತೆಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Telangana Bjp leader Gnanendra Prasad found dead hanged himself to ceiling fan at his residence Hyderabad ckm
Author
Bengaluru, First Published Aug 9, 2022, 12:07 PM IST

ಹೈದರಾಬಾದ್(ಆ.09): ಬಿಜೆಪಿ ಪಾಳಯಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತೆಲಂಗಾಣ ಬಿಜೆಪಿ ನಾಯಕ ಜ್ಞಾನೇಂದ್ರ ಪ್ರಸಾದ್ ಶವವಾಗಿ ಪತ್ತೆಯಾಗಿದ್ದಾರೆ. ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಜ್ಞಾನೇಂದ್ರ ಪ್ರಸಾದ್ ಪತ್ತೆಯಾಗಿದ್ದಾರೆ. ಮಾಹಿತಿ ತಿಳಿದ ಮಿಯಾಪುರ್ ಪೊಲೀಸ್ ಸ್ಥಳಕ್ಕೆ ಧಾವಿಸಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ರೀತಿಯಲ್ಲಿದೆ. ಈ ಕುರಿತು ತನಿಖೆ ನಡೆಸಿ ಸತ್ಯ ಬಯಲು ಮಾಡುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಆತ್ಮಹತ್ಯೆಗೆ ಕಾರಣಗಳೇನು ಅನ್ನೋದು ತಿಳಿದು ಬಂದಿಲ್ಲ.  ನಿನ್ನೆ(ಆ.08) ಬೆಳಗ್ಗೆ ಮಿಯಾಪುರ್ ಪೊಲೀಸ್ ಠಾಣೆಗೆ ಕರೆಯೊಂದು ಬಂದಿದೆ. ಬಿಜೆಪಿ ನಾಯಕ ಜ್ಞಾನೇಂದ್ರ ಪ್ರಸಾದ್ ಆತ್ಮೆಹತ್ಯೆ ಮಾಡಿಕೊಂಡಿದ್ದಾರೆ ಅನ್ನೋ ಮಾಹಿತಿ ಪಡೆದ ಪೊಲೀಸರ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಎರಡು ತಂಡ ರಚಿಸಿದ್ದಾರೆ. ಒಂದು ತಂಡ ನೇರವಾಗಿ ಸ್ಥಳಕ್ಕೆ ಧಾವಿಸಿದೆ. ಈ ವೇಳೆ ಮನೆಯ ಕೊಠಡಿಯೊಳಗೆ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಜ್ಞಾನೇಂದ್ರ ಪ್ರಸಾದ್ ಶವ ಪತ್ತೆಯಾಗಿದೆ.

ಅಲ್ವಿನ್ ಕಾಲೋನಿಯಲ್ಲಿರುವ ಮನೆಯಲ್ಲಿ ಜ್ಞಾನೇಂದ್ರ ಪ್ರಸಾದ್ ಶವ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸೆರ್ಲಿಂಗಪಲ್ಲಿ ಕ್ಷೇತ್ರದ ನಾಯಕನಾಗಿರುವ ಜ್ಞಾನೇಂದ್ರ ಪ್ರಸಾದ್ ಕಳೆದ ಒಂದು ವಾರದಿಂದ ತೀವ್ರವಾಗಿ ಮನನೊಂದಿದ್ದರು ಅನ್ನೋ ಮಾಹಿತಿ ಬಹಿರಂಗವಾಗಿದೆ.  ಮನೆಯಲ್ಲಿ ಕುಟುಂಬಸ್ಥರು ಇರುವಾಗಲೇ ಈ ಘಟನೆ ನಡೆದಿದೆ. 

ಮಂಗಳೂರಿನ 'ಧರ್ಮ ಚಾವಡಿ'ಯ  ಶ್ರೀ ಕೃಷ್ಣ ದೇವಿ ಪ್ರಸಾದ ಸ್ವಾಮೀಜಿ ಆತ್ಮಹತ್ಯೆ

ಜ್ಞಾನೇಂದ್ರ ಪ್ರಸಾದ್ ಕೊಠಡಿ ಬಾಗಿಲು ತೆರಯದೇ ಇದ್ದಾಗ ಅನುಮಾನಗೊಂಡ ಕುಟುಂಬಸ್ಥರು ಬಾಗಿಲು ಒಡೆದು ಒಳ ಪ್ರವೇಶಿಸಿದ್ದಾರೆ. ಈ ವೇಳೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇತ್ತ ಇದೇ ವೇಳೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ತಕ್ಷಣವೇ ಜ್ಞಾನೇಂದ್ರ ಪ್ರಸಾದ್ ದೇಹವನ್ನು ಕೆಳಕ್ಕಿಳಿಸಿ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ವೈದ್ಯರು ಜ್ಞಾನೇಂದ್ರ ಪ್ರಸಾದ್ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. U/s 174 CrPC ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಮಾಜಿ ಮುಖ್ಯಮಂತ್ರಿ ಪುತ್ರಿ ಉಮಾ ಮಹೇಶ್ವರಿ ಆತ್ಮಹತ್ಯೆ
ಇತ್ತೀಚೆಗೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಖ್ಯಾತ ತೆಲುಗು ನಟ ಎನ್‌ಟಿಆರ್ ರಿಯ ಪುತ್ರಿ ಉಮಾ ಮಹೇಶ್ವರಿ (57)ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಖಿನ್ನತೆ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಉಮಾ ಮಹೇಶ್ವರಿ ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ಜ್ಯುಬಿಲಿ ಹಿಲ್ಸ್‌ ಪೊಲೀಸರು ಶಂಕಿಸಿದ್ದಾರೆ. ಆದರೆ ಈಗಲೇ ಇದನ್ನು ಆತ್ಮಹತ್ಯೆ ಎಂದು ಅಂತಿಮವಾಗಿ ಹೇಳಲಾಗದು ಎಂದು ಸ್ಪಷ್ಟಪಡಿಸಿರುವ ಅವರು ಶಂಕಾಸ್ಪದ ಸಾವು ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಸಂತ್ರಸ್ತೆ ಆತ್ಮಹತ್ಯೆ ಹಿನ್ನೆಲೆ: ರೇಪ್‌ ಆರೋಪಿ ಬಿಎಸ್‌ಪಿ ಸಂಸದ ಖುಲಾಸೆ
ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಘೋಸಿ ಲೋಕಸಭಾ ಕ್ಷೇತ್ರದ ಬಿಎಸ್‌ಪಿ ಸಂಸದ ಅತುಲ್‌ ಕುಮಾರ್‌ ಸಿಂಗ್‌ ಅವರನ್ನು ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆ ಕೋರ್ಚ್‌ ಖುಲಾಸೆಗೊಳಿಸಿದೆ.

Follow Us:
Download App:
  • android
  • ios