ಭಾರತದಲ್ಲಿ ಸ್ವದೇಶಿ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಲಸಿಕೆ ವಿತರಣೆ ಅಭಿಯಾನ ಆರಂಭ| ಭಾರತದಲ್ಲಿ ಟಾಟಾದಿಂದ ಮಾಡೆರ್ನಾ ಲಸಿಕೆ ಮಾರಾಟ?

ನವದೆಹಲಿ(ಜ.26): ಭಾರತದಲ್ಲಿ ಸ್ವದೇಶಿ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿರುವ ಬೆನ್ನಲ್ಲೇ ಅಮೆರಿಕದ ಮಾಡೆರ್ನಾ ಕಂಪನಿ ಉತ್ಪಾದಿಸಿರುವ ಲಸಿಕೆಯನ್ನು ಭಾರತಕ್ಕೆ ತರುವ ಬಗ್ಗೆ ಟಾಟಾ ಗ್ರೂಪ್‌, ಔಷಧ ತಯಾರಿಕಾ ಕಂಪನಿಯೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಟಾಟಾ ಸಮೂಹದ ಭಾಗವಾದ ‘ಟಾಟಾ ಮೆಡಿಕಲ್‌ ಡಯೋಗ್ನಾಸ್ಟಿಕ್ಸ್‌’ ಸಂಸ್ಥೆಯು ಐಸಿಎಂಆರ್‌ ಜೊತೆಗೂಡಿ ಭಾರತದಲ್ಲಿ ಕೊರೋನಾ ಲಸಿಕೆಯ ಪ್ರಾಯೋಗಿಕ ಪರೀಕ್ಷೆ ನಡೆಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಆದರೆ ಮಾಡೆರ್ನಾ ಕಂಪನಿಯಾಗಲೀ, ಟಾಟಾ ಸಂಸ್ಥೆಯಾಗಲೀ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ.

ಅಮೆರಿಕದ ಫೈಝರ್‌ ಲಸಿಕೆಯನ್ನು -70 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ಇಡಬೇಕಾದ ಅಗತ್ಯ ಇದೆ. ಆದರೆ ಮಾಡೆರ್ನಾ ಲಸಿಕೆಯನ್ನು ಸಾಮಾನ್ಯ ರೆಫ್ರಿಜರೇಟರ್‌ನಲ್ಲೂ ಸಂಗ್ರಹಿಸಿಡಬಹುದು. ಭಾರತದಂತಹ ದೇಶಗಳಿಗೆ ಮಾಡೆರ್ನಾ ಲಸಿಕೆ ಹೆಚ್ಚು ಸೂಕ್ತ ಎನ್ನಲಾಗುತ್ತಿದೆ. ಅಮೆರಿಕ ಮತ್ತು ಯುರೋಪಿನಲ್ಲಿ ಮಾಡೆರ್ನಾ ಲಸಿಕೆಯನ್ನು ವಿತರಣೆ ಮಾಡಲಾಗುತ್ತಿದ್ದು, ಲಸಿಕೆಯು ಶೇ.94.1%ರಷ್ಟುಪರಿಣಾಮಕಾರಿ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.