ಎಸ್‌ಡಿಪಿಐ ಜೊತೆ ಕಮಲ್‌ಹಾಸನ್‌ ಮೈತ್ರಿ| ಬೆಂಗಳೂರು ಹಿಂಸೆಯಲ್ಲಿ ಭಾಗಿಯಾಗಿದ್ದ ಸಂಘಟನೆ ಜೊತೆ ಮೈತ್ರಿ

ಚೆನ್ನೈ(ಮಾ.11): ತಮಿಳುನಾಡಿನಲ್ಲಿ ಅಧಿಕಾರಕ್ಕೇರುವ ಇಲ್ಲವೇ ಕಿಂಗ್‌ಪಿನ್‌ ಆಗುವ ತವಕದಲ್ಲಿರುವ ನಟ, ಮಕ್ಕಳ್‌ ನೀದಿ ಮಯ್ಯಂ ಪಕ್ಷದ ಅಧ್ಯಕ್ಷ ಕಮಲ್‌ ಹಾಸನ್‌, ವಿಧಾನಸಭಾ ಚುನಾವಣೆಯಲ್ಲಿ ಎಸ್‌ಡಿಪಿಐ ಜೊತೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿವಾದಿತ ಸಂಘಟನೆಯಾದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ರಾಜಕೀಯ ಮುಖವಾಣಿಯಾದ ಎಸ್‌ಡಿಪಿಐ ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಪ್ರಮುಖವಾಗಿ ಭಾಗಿಯಾಗಿತ್ತು ಎಂಬುದು ಉಲ್ಲೇಖನೀಯ.

ಮೈತ್ರಿ ಸಂಬಂಧ ಉಭಯ ಪಕ್ಷಗಳು ಹಲವು ದಿನಗಳಿಂದ ಮಾತುಕತೆ ನಡೆಸುತ್ತಿದ್ದವು. ಎಸ್‌ಡಿಪಿಐ 25 ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರೆ, ಕಮಲ್‌ ಹಾಸನ್‌ 18 ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮೊದಲು ಟಿಟಿವಿ ದಿನಕರನ್‌ ನೇತೃತ್ವದ ಎಎಂಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವ ಉದ್ದೇಶವನ್ನು ಎಸ್‌ಡಿಪಿಐ ಹೊಂದಿತ್ತಾದರೂ, ಆ ಪಕ್ಷವನ್ನು ಬಿಜೆಪಿ ನಿಯಂತ್ರಿಸುತ್ತಿರಬಹುದು ಮತ್ತು ಅದು ಬಿಜೆಪಿ ಜೊತೆ ಮೈತ್ರಿಮಾಡಿಕೊಳ್ಳಬಹುದು ಎಂಬ ಆತಂಕದಿಂದಾಗಿ ಅದು ಟಿಟಿವಿ ದಿನಕರನ್‌ ಅವರಿಂದ ದೂರವಾಗಿತ್ತು.