ಪ್ರಧಾನಿ ಮೋದಿಗಾಗಿ ಗುಡಿ ನಿರ್ಮಿಸಿದ ತಮಿಳುನಾಡು ರೈತ| ಮೋದಿ ಪ್ರತಿಮೆಗೆ ಪ್ರತಿ ನಿತ್ಯ ಪೂಜೆ

ತಿರುಚಿರಾಪಳ್ಳಿ[ಡಿ.26]: ತಮಿಳುನಾಡಿನ ತಿರುಚಿರಾಪಳ್ಳಿಯ ರೈತನೊಬ್ಬ ತನ್ನ ಹೊಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಗುಡಿಯೊಂದನ್ನು ನಿರ್ಮಿಸಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎರಾಕುಡಿ ಗ್ರಾಮದ 50 ವರ್ಷದ ಪಿ. ಶಂಕರ್‌ ಎನ್ನುವವರು ತಮ್ಮ ಹೊಲದಲ್ಲಿ ನಿರ್ಮಿಸಿದ ಮೋದಿ ದೇವಾಲಯವನ್ನು ಕಳೆದ ವಾರ ಉದ್ಘಾಟಿಸಿದ್ದಾರೆ. ಈ ಗುಡಿ 8 ಚದರ ಅಡಿ ವಿಸ್ತೀರ್ಣ ಇದ್ದು, ಗುಡಿಯಲ್ಲಿರುವ ಮೋದಿ ಪ್ರತಿಮೆಗೆ ಅವರು ಪ್ರತಿ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ.

Scroll to load tweet…

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಪಿ. ಶಂಕರ್‌, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ್‌ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿಯಂತಹ ಕಲ್ಯಾಣ ಯೋಜನೆಯಿಂದ ಪ್ರಭಾವಿತಗೊಂಡು ಗುಡಿಯನ್ನು ನಿರ್ಮಿಸಿದ್ದೇನೆ. ಈ ಗುಡಿ ನಿರ್ಮಾಣಕ್ಕೆ ಸುಮಾರು 1.2 ಲಕ್ಷ ರು. ವೆಚ್ಚವಾಗಿದೆ ಎಂದು ಹೇಳಿದ್ದಾರೆ.