ಯುವ ಸಮೂಹಕ್ಕೆ ಕನ್ನಡದಲ್ಲೇ ಮೋದಿ ಸಂದೇಶ, ಹುಬ್ಬಳ್ಳಿ ಯವಜನೋತ್ಸವದಲ್ಲಿ ಪ್ರಧಾನಿ ಭಾಷಣ!
ಹುಬ್ಬಳ್ಳಿಯಲ್ಲಿ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನಿ ಮೋದಿ, ಕರ್ನಾಟಕಕ್ಕೂ ವಿವೇಕಾನಂದರಿಗೂ ಇದ್ದ ನಂಟು ವಿವರಿಸಿದ್ದಾರೆ. ಇದೇ ವೇಳೆ ಯುವಸಮೂಹಕ್ಕೆ ವಿವೇಕಾನಂದರ ಸಂದೇಶವನ್ನು ಕನ್ನಡದಲ್ಲೇ ಹೇಳಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಮೋದಿ ಯುವಜನೋತ್ಸವ ಕಾರ್ಯಕ್ರಮದಲ್ಲಿ ಮಾಡಿದ ಭಾಷಣದ ಹೈಲೈಟ್ಸ್ ಇಲ್ಲಿದೆ.
ಹುಬ್ಬಳ್ಳಿ(ಜ.12): ಇಡೀ ವಿಶ್ವ ಭಾರತವನ್ನು ಆಶಾಭಾವನೆಯಿಂದ ನೋಡುತ್ತಿದೆ. ಎಲ್ಲಾ ಸಮಸ್ಯೆಗಳಿಗೂ ಭಾರತವೇ ಪರಿಹಾರ ಎಂದು ನಮ್ಮತ್ತ ನೋಡುತ್ತಿದೆ. ಇದರ ಹಿಂದಿನ ಕಾರಣ ಯವಶಕ್ತಿ ಎಂದು ಮೋದಿ ಹೇಳಿದ್ದಾರೆ. ಹುಬ್ಬಳ್ಳಿಯ ಯವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಕನ್ನಡದಲ್ಲೇ ಭಾಷಣ ಆರಂಭಿಸಿದರು. ಮೂರು ಸಾವಿರ ಮಠ, ಸಿದ್ದರೂಡ ಮಠ ಇಂತಹ ಅನೇಕ ಮಠಗಳ ಕ್ಷೇತ್ರಕ್ಕೆ ನನ್ನ ನಮಸ್ಕಾರ. ರಾಣಿ ಚೆನ್ನಮ್ಮನ ನಾಡು, ಸಂಗೊಳ್ಳಿ ರಾಯಣ್ಣನ ಬೀಡು, ಈ ಪುಣ್ಯ ಭೂಮಿಗೆ ನನ್ನ ನಮಸ್ಕಾರಗಳು ಎಂದು ಪ್ರಧಾನಿ ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸಿದರು. ಈ ಕ್ಷೇತ್ರದ ಹಲವರನ್ನ ಜ್ಞಾನಪೀಠ ಅರಸಿಬಂದಿದೆ. ಇದೇ ಕ್ಷೇತ್ರದ ಭಾರತ್ ರತ್ನ ಭೀಮಸೇನ ಜೋಶಿ, ಗಂಗೂಭಾಯಿ ಹಾನಗಲ್ ಸೇರಿದಂತೆ ಹಲವರು ಗಣ್ಯರು ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಏಳು ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ವಿವೇಕಾನಂದರ ಸಂದೇಶವನ್ನು ಕನ್ನಡದಲ್ಲೇ ಹೇಳಿದ ಮೋದಿ, ಯುವ ಸಮೂಹಕ್ಕೆ ವಿವೇಕಾನಂದರ ವಿವೇಕ ಸಾರಿದರು. ಭಾರತದ ಯುವಸಮೂಹಕ್ಕೆ ವಿವೇಕಾಂದರ ಪ್ರೇರಣೆ ಅಪಾರ. ಈ ಸಂದರ್ಭದಲ್ಲಿ ವಿವೇಕಾನಂದರ ಪಾದಗಳಿಗೆ ನಮಸ್ಕರಿಸುತ್ತೇನೆ. ಇತ್ತೀಚಿಗೆ ಕರ್ನಾಟಕದ ಮಹಾ ಸಂತ ಸಿದ್ದೇಶ್ವರ ಸ್ವಾಮಿಜಿ ದೈವಾಧೀನರಾಗಿದ್ದಾರೆ. ಸಿದ್ದೇಶ್ವರ ಸ್ವಾಮೀಜಿಗೂ ಶ್ರದ್ಧಾಂಜಲಿ ಅರ್ಪಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.
ಜನಸಂಖ್ಯೆಯೇ ಭಾರತದ ಶಕ್ತಿ ಎಂದ ಮೊದಲ ಪ್ರಧಾನಿ ಮೋದಿ, ಯುಜನೋತ್ಸವದಲ್ಲಿ ಬೊಮ್ಮಾಯಿ ಭಾಷಣ!
ವಿವೇಕಾಂದರು ಕರ್ನಾಟಕ ಪ್ರವಾಸದ ವೇಳೆ ಹುಬ್ಭಳ್ಳಿ ಧಾರವಾಡ ಆಗಮಿಸಿದ್ದರು. ಮೈಸೂರು ಮಹಾರಾಜರು ಸ್ವಾಮಿ ವಿವೇಕಾನಂದರ ಶಿಕಾಗೋ ಪ್ರವಾಸಕ್ಕೆ ನೆರವಾಗಿದ್ದರು. ಕರ್ನಾಟಕದ ಈ ಬೀಡು ಅಸಂಖ್ಯಾತ ಸಂತರನ್ನು ನೀಡಿದೆ. ಅತೀ ಕಡಿಮೆ ವಯಸ್ಸಿನಲ್ಲಿ ಅಸಾಧಾರಣ ಸಾಧನೆ ಮಾಡಿದ ಪುಣ್ಯಭೂಮಿ ಇದೆ. ಕಿತ್ತೂರು ರಾಣಿ ಚೆನ್ನಮ್ಮ, ಭಾರತದ ಮಹಿಳಾ ಸ್ವಾತಂತ್ರ ಹೋರಾಟಗಾರಲಲ್ಲಿ ಪ್ರಮುಖರಾಗಿದ್ದರು. ಸ್ವಾತಂತ್ರ ಹೋರಾಟದಲ್ಲಿ ಚೆನ್ನಮ್ಮ ಹೋರಾಟ, ಸಂಗೊಳ್ಳಿ ರಾಯಣ್ಣ ಹೋರಾಟದ ಮೂಲಕ ಬ್ರಿಟೀಷರನ್ನು ಹಿಮ್ಮೆಟ್ಟಿಸಿದ್ದರು ಎಂದು ಮೋದಿ ಹೇಳಿದರು.
ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಸಿಯಾಚಿನ್ ಯುದ್ಧಭೂಮಿಯಲ್ಲಿ ನಡೆದ ಹಿಮಪಾತದಲ್ಲಿ ಸಿಲುಕಿ ಎರಡು ವಾರ ಹೋರಾಟ ನಡೆಸಿದ್ದರು. ಕಠಿಣ ಪರಿಸ್ಥಿತಿಯಲ್ಲೂ ಕೊಪ್ಪದ ಜೀವಂತವಾಗಿ ಹೋರಾಡಿದ್ದರು. ಈ ಮೂಲಕ ಕೊಪ್ಪದ ಶೌರ್ಯ ಮೆರೆದಿದ್ದರು.
ಅತೀ ಹೆಚ್ಚಿನ ಯುವಕರನ್ನು ಭಾರತ ಹೊಂದಿದೆ. ಯುವ ಶಕ್ತಿಯಿಂದ ಭಾರತ ಉದ್ದೇಶಿತ ಗುರಿ ತಲುಪಲು ನೆರವಾಗಲಿದೆ. ಇಂದು ವಿಶ್ವವೇ ಭಾರತದತ್ತ ಆಶಾಭಾವನೆಯಿಂದ ನೋಡುತ್ತಿದೆ. ಇದರ ಹಿಂದಿರುವ ಪ್ರಮುಖ ಕಾರಣ ಯುವಶಕ್ತಿ. ನಾವು ಜಗತ್ತಿನಲ್ಲಿ 5ನೇ ಅತೀ ದೊಡ್ಡ ಆರ್ಥಿಕ ರಾಷ್ಟ್ರ. ನಮ್ಮ ಗುರಿ 3ನೇ ಸ್ಥಾನಕ್ಕೇರುವುದು. ನಮ್ಮ ಯುವಶಕ್ತಿಗೆ ಅಪಾರ ಅವಕಾಶಗಳನ್ನು ಸೃಷ್ಟಿಸಲಾಗುತ್ತದೆ. ಕೃಷಿ ಕ್ಷೇತ್ರದಲ್ಲಿ ಭಾರತ ಕ್ರಾಂತಿ ಮಾಡುತ್ತಿದೆ. ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಮೂಲಕ ಭಾರತ ಹೊಸ ಆಯಾಮದಲ್ಲಿ ಸಾಗುತ್ತಿದೆ. ಇದರಿಂದ ಯುವ ಸಮೂಹಕ್ಕೆ ಹೆಚ್ಚಿನ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತಿದೆ ಎಂದು ಮೋದಿ ಹೇಳಿದರು.
ಗ್ರಾಮ, ಜಿಲ್ಲೆ, ನಗರ, ಪಟ್ಟಣ ಯಾವುದೇ ಇರಲಿ. ಇದು ಯವಶಕ್ತಿಯ ಸಮಯ. ಇದು ವಿಶೇಷ ಸಂದರ್ಭ. ಭಾರತದ ಸ್ಟಾರ್ಟ್ ಅಪ್‌ಗೆ ವಿಶ್ವಾದ್ಯಂತ ಹೂಡಿಕೆಯಾಗುತ್ತಿದೆ. ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಸೇರಿದಂತೆ ಹಲವು ಯೋಜನೆಗಳಿಂದ ಭಾರತದ ಗತಿ ಬದಲಾಗಿದೆ. ನಮ್ಮ ದೇಶದಲ್ಲಿ ನಾರಿ ಶಕ್ತಿಯನ್ನು ರಾಷ್ಟ್ರ ಶಕ್ತಿಯಾಗಿ ಜಾಗೃತ ಮಾಡುವ ಕೆಲಸವಾಗಿದೆ. ಇದರಿಂದ ನಮ್ಮ ಹೆಣ್ಣುಮಕ್ಕಳು ಹಲವು ಕ್ಷೇತ್ರದಲ್ಲಿ ಸಾಧನೆ ಮಾಡತ್ತಿದ್ದಾರೆ. ಇಂದು ಮಹಿಳೆ ಫೈಟರ್ ಜೆಟ್ ಪೈಲೆಟ್ ಆಗಿದ್ದಾರೆ. ನಾರಿ ಶಕ್ತಿ ವಿಶ್ವದಲ್ಲೇ ಹೆಸರು ಮಾಡುತ್ತಿದೆ ಎಂದು ಮೋದಿ ಹೇಳಿದರು.
ಅಭಿಮಾನಿಗಳಿಂದ ಹೂಮಳೆಯ ಸ್ವಾಗತ, ಹುಬ್ಬಳ್ಳಿ ಜನರ ಪ್ರೀತಿಗೆ ಮೋದಿ ಪುಳಕ!
ಕೆಲ ವರ್ಷಗಳ ಹಿಂದೆ ಡಿಜಿಟಲ್ ಪೇಮೆಂಟ್ ಆರಂಭಿಸಲಾಯಿತು. ಇದನ್ನು ಗೇಲಿ ಮಾಡಲಾಯಿತು. ಸ್ವಚ್ಚ ಭಾರತ್, ಸ್ವದೇಶಿ ಲಸಿಕೆ ಬಂದಾಗ ಇದು ಫಲ ನೀಡುತ್ತಾ ? ಅನ್ನೋ ಪ್ರಶ್ನೆ ಎದ್ದಿತ್ತು. ಜನಧನ ಖಾತೆ ಕುರಿತು ಗೇಲಿ ಮಾಡಿದ್ದರು. ಆದರೆ ಇಂದು ಪರಿಸ್ಥಿತಿ ಹೇಗಿದೆ? ಈ ಎಲ್ಲವನ್ನೂ ವಿಶ್ವವೇ ಮಾದರಿಯಾಗಿ ಪರಿಗಣಿಸಿದೆ. ನಿಮ್ಮಲ್ಲಿ ಹೊಸ ಆಲೋಚನೆ ಇದ್ದರೆ, ಅದರ ದಾರಿ ಹಿಡಿದು ಹೊರಡಿ, ಶ್ರದ್ಧೆಯಿಂದ ಕೆಲಸ ಮಾಡಿ, ಫಲ ಸಿಗಲಿದೆ ಎಂದು ಮೋದಿ ಹೇಳಿದರು.
ಮೋದಿಗೆ ಅದ್ಧೂರಿ ಸ್ವಾಗತ
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ, ಅಲ್ಲಿಂದ ರಸ್ತೆ ಮಾರ್ಗ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಿದರು. ಈ ವೇಳೆ ರಸ್ತೆಯ ಎರಡು ಬದಿಗಳಲ್ಲಿ ಕಿಕ್ಕಿರಿದು ತುಂಬಿದ್ದ ಜನ ಮೋದಿ ಮೋದಿ ಘೋಷಣೆ ಕೂಗಿದರು. ಈ ವೇಳೆ ಮೋದಿ ಕಾರಿನಿಂದ ಇಳಿದು ಜನರತ್ತ ಕೈಬೀಸಿದರು. ಬಳಿಕ ನೇರವಾಗಿ ರೈಲ್ವೆ ಮೈದಾನದಲ್ಲಿ ಆಯೋಜಿಸಿದ ಯುವಜನೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಮೋದಿ, ದೇಶದ ಮೂಲೆ ಮೂಲೆಯಿಂದ ಆಗಮಿಸಿದ ಯು ಸಮೂಹ ಉದ್ದೇಶಿ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಪ್ರಧಾನಿ ಮೋದಿವನ್ನು ರಾಜ್ಯದ ಪರವಾಗಿ ಸನ್ಮಾನಿಸಲಾಯಿತು. ಹಾವೇರಿಯಲ್ಲಿ ತಯಾರಿಸಿದ ಎಲಕ್ಕಿ ಹಾರ, ವಿವೇಕಾನಂದರ ಪ್ರತಿಮೆ ಹಾಗೂ ಧಾರವಾಡದ ಹೆಮ್ಮೆ ರಾಷ್ಟ್ರ ಧ್ವಜ ಫ್ರೇಮ್ ನೀಡಿ ಸನ್ಮಾನಿಸಲಾಯಿತು. ವಿಶೇಷ ರೀತಿಯಲ್ಲಿ ನಿರ್ಮಿಸಿದ ಮೈಸೂರು ಪೇಟ ತೊಟ್ಟುಕೊಂಡೆ ಮೋದಿ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು.