ಮುಂಬೈ(ಅ.07): ಇಂಟರ್ನೆಟ್‌ನಲ್ಲಿ ಅಪಾಯಕಾರಿ ಸಚ್‌ರ್‍ ರಿಸಲ್ಟ್‌ಗಳನ್ನು ನೀಡುವ ಭಾರತದ ಟಾಪ್‌ ಸೆಲೆಬ್ರಿಟಿಗಳ ಪಟ್ಟಿಯನ್ನು ಮೆಕ್‌ಕೆಫಿ ಆ್ಯಂಟಿವೈರಸ್‌ ಕಂಪನಿ ಬಿಡುಗಡೆ ಮಾಡಿದ್ದು, ಬಾಲಿವುಡ್‌ ನಟಿಯರಾದ ಟಬು, ತಾಪ್ಸಿ ಪನ್ನು, ಅನುಷ್ಕಾ ಶರ್ಮಾ ಹಾಗೂ ಸೋನಾಕ್ಷಿ ಸಿನ್ಹಾ ಮೊದಲ ಸ್ಥಾನಗಳನ್ನು ಪಡೆದಿದ್ದಾರೆ.

ಇವರ ಉಚಿತ ವಿಡಿಯೋ, ಫೋಟೋ ಅಥವಾ ಇವರಿಗೆ ಸಂಬಂಧಿಸಿದ ಸುದ್ದಿಗಳ ಬಗ್ಗೆ ಲಿಂಕ್‌ ನೀಡಿ ಅಪಾಯಕಾರಿ ವೈರಸ್‌ಗಳನ್ನು ಇಂಟರ್ನೆಟ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹರಡಲಾಗುತ್ತಿದೆ. ಆ ಲಿಂಕ್‌ಗಳನ್ನು ಕ್ಲಿಕ್‌ ಮಾಡಿದಾಗ ಕಂಪ್ಯೂಟರ್‌ ಅಥವಾ ಮೊಬೈಲ್‌ನಲ್ಲಿ ವೈರಸ್‌ ಇನ್‌ಸ್ಟಾಲ್‌ ಆಗುತ್ತದೆ. ಇಂತಹ ಸೆಲೆಬ್ರಿಟಿಗಳ ಜಾಗತಿಕ ಪಟ್ಟಿಯನ್ನು ಮೆಕ್‌ಕೆಫಿ ಬಿಡುಗಡೆ ಮಾಡಿದ್ದು, ನಂ.1 ಸ್ಥಾನದಲ್ಲಿ ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಇದ್ದಾರೆ. ಭಾರತದ ಟಾಪ್‌ 10 ಪಟ್ಟಿಯಲ್ಲೂ ರೊನಾಲ್ಡೋ ನಂ.1 ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಟಬು, ತಾಪ್ಸಿ, ಅನುಷ್ಕಾ, ಸೋನಾಕ್ಷಿ, ಗಾಯಕ ಅರ್ಮಾನ್‌ ಮಲಿಕ್‌, ನಟಿ ಸಾರಾ ಅಲಿಖಾನ್‌, ಧಾರಾವಾಹಿ ನಟಿ ದಿವ್ಯಾಂಕಾ ತ್ರಿಪಾಠಿ, ನಟ ಶಾರುಖ್‌ ಖಾನ್‌ ಹಾಗೂ ಗಾಯಕ ಅರಿಜಿತ್‌ ಸಿಂಗ್‌ ಇದ್ದಾರೆ.

ಇವರ ಹೆಸರಿನಲ್ಲಿ ಬರುವ ಲಿಂಕ್‌ಗಳನ್ನು ಕ್ಲಿಕ್‌ ಮಾಡುವಾಗ ಎಚ್ಚರ ವಹಿಸಿ ಎಂದು ಮೆಕ್‌ಕೆಫಿ ಇಂಡಿಯಾದ ಉಪಾಧ್ಯಕ್ಷ ವೆಂಕಟ್‌ ಕೃಷ್ಣಾಪುರ ಹೇಳಿದ್ದಾರೆ.