Asianet Suvarna News Asianet Suvarna News

OROP ಕೇಂದ್ರ ಸರ್ಕಾರದ ಒನ್‌ ರ‍್ಯಾಂಕ್ ಒನ್‌ ಪೆನ್ಶನ್ ಯೋಜನೆಯಲ್ಲಿ ಲೋಪವಿಲ್ಲ, ಸುಪ್ರೀಂ ಕೋರ್ಟ್!

  • ಕೇಂದ್ರ ಸರ್ಕಾರ ತಂದಿರುವ ಒಂದು ಶ್ರೇಣಿ, ಒಂದು ಪಿಂಚಣಿ ಯೋಜನೆ
  • ಕೇಂದ್ರ OROPನಲ್ಲಿ ಸಾಂವಿಧಾನಿಕ ಲೋಪಗಳಿವೆ ಎಂದು ಸುಪ್ರೀಂನಲ್ಲಿ ವಾದ
  • ಕೇಂದ್ರ ಸರ್ಕಾದ ಯೋಜನೆಯನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್
     
Supreme Court upheld Central Government introduced One Rank One Pension scheme in defence forces ckm
Author
Bengaluru, First Published Mar 16, 2022, 5:31 PM IST

ನವದೆಹಲ(ಮಾ.16): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತಂದಿರುವ ಒಂದು ಶ್ರೇಣಿ, ಒಂದು ಪಿಂಚಣಿ ಯೋಜನೆ ಎದ್ದ ವಿವಾದಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದೆ. 2015ರಲ್ಲಿ ಮೋದಿ ಸರ್ಕಾರ ಜಾರಿಗೆ ತಂದಿದ್ದ ಮಹತ್ವಾಕಾಂಕ್ಷೆಯ ಒನ್‌ ರ‍್ಯಾಂಕ್ ಒನ್‌ ಪೆನ್ಶನ್(OROP) ಯೋಜನೆಯಲ್ಲಿ ಯಾವುದೇ ಸಾಂವಿಧಾನಿಕ ಲೋಪವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನವೆಂಬರ್ 7, 2015ರಲ್ಲಿ ಕೇಂದ್ರ ಸರ್ಕಾರ ರಕ್ಷಣಾ ಪಡೆಗೆ OROP ಯೋಜನೆ ಪರಿಚಯಿಸಿತು. ಆದರೆ ಈ ಯೋಜನೆಯಲ್ಲಿ ಲೋಪಗಳಿವೆ. ಇದರಿಂದ ಮಾಜಿ ಯೋಧರಿಗೆ ಸಂಕಷ್ಟ ಎದುರಾಗಲಿದೆ ಎಂದು ಎಕ್ಸ್ ಸರ್ವೀಸ್‌ಮೆನ್ ಮೂವ್‌ಮೆಂಟ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇದೀಗ ಕೇಂದ್ರದ OROP ಯೋಜನೆನ್ನು ಎತ್ತಿ ಹಿಡಿದಿದೆ.

'ಒನ್‌ ರ‍್ಯಾಂಕ್ ಒನ್‌ ಪೆನ್ಷನ್‌' ಪರಿಷ್ಕರಣೆ: ರಕ್ಷಣಾ ಸಚಿವಾಲಯಕ್ಕೆ ಹೈಕೋರ್ಟ್‌ ನೋಟಿಸ್‌

ಒನ್‌ ರ‍್ಯಾಂಕ್ ಒನ್‌ ಪೆನ್ಶನ್ ಯೋಜನಾ ನೀತಿ ಕೇಂದ್ರ ಸರ್ಕಾರದ ಅಧಿಕಾರದ ವ್ಯಾಪ್ತಿಯೊಳಗಿದೆ. ಹೀಗಾಗಿ ಮನಬಂದಂತೆ , ತಮ್ಮ ರಾಜಕೀಯ ಲಾಭಕ್ಕಾಗಿ ಯೋಜನೆ ಜಾರಿ ಮಾಡಲಾಗಿದೆ ಅನ್ನೋ ಅರ್ಜಿದಾರರ ವಾದ ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದೇ ವೇಳೆ ಕೋರ್ಟ್‌ನಲ್ಲಿನ ದಾವೆಯಿಂದ ಸ್ಥಗಿತಗೊಂಡಿದ್ದ ಸೇನಾ ಸಿಬ್ಬಂದಿಗಳ ಬಾಕಿಯನ್ನು ಮೂರು ತಿಂಗಳ ಒಳಗೆ ಪಾವತಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಈ ಹಿಂದಿನ ಯುಪಿಎ ಸರ್ಕಾರ ಜಾರಿಗೊಳಿಸಿರುವ ಯೋಜನೆಯಲ್ಲಿ ಪಂಚಿಣಿ ನೀಡುವಂತೆ ಅರ್ಜಿದಾರರು ಮನವಿಯಲ್ಲಿ ಉಲ್ಲೇಖಿಸಿದ್ದರು. ಆದರೆ  ಈ ಮನವಿಯನ್ನೂ ಕೋರ್ಟ್ ತರಿಸ್ಕರಿಸಿದೆ. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂದ್, ಸೂರ್ಯಕಾಂತ್ ಹಾಗೂ ವಿಕ್ರಮ್ ನಾಥ್ ತ್ರಿಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದೆ.

 ಅಂಚೆ ಮೂಲಕ ಮನೆಗೇ ಸಾಮಾಜಿಕ ಪಿಂಚಣಿ: ಆರ್‌.ಅಶೋಕ್‌

ಒಂದು ಶ್ರೇಣಿ ಒಂದು ಪಿಂಚಣಿ ಯೋಜನಗೆೆ ಹಲವು ನಿವೃತ್ತ ಸೈನಿಕರು ಬೆಂಬಲ ಸೂಚಿಸಿದ್ದಾರೆ. ನಿವೃತ್ತ ಸೈನಿಕರಿಗೆ ಸರ್ಕಾರವು ಹಲವು ಸವಲತ್ತುಗಳನ್ನು ನೀಡುತ್ತಿದ್ದು, ‘ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆ’ಯಿಂದ ನಿವೃತ್ತ ಸೈನಿ​ಕ​ರಿಗೆ ಹೆಚ್ಚಿನ ಲಾಭ​ವಾ​ಗಿದೆ ಎಂದು ದಕ್ಷಿಣ ವಲಯ ಆರ್ಮಿ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ಎಸ್‌.ಕೆ. ಸೈನಿ ಹೇಳಿ​ದ್ದರು. ನಿವೃತ್ತ ಸೈನಿಕರು ಹಾಗೂ ಹುತಾತ್ಮ ಸೈನಿಕರ ಕುಟುಂಬ ವರ್ಗದವರಿಗೆ ವಿಶೇಷ ಸವಲತ್ತುಗಳನ್ನು ಸರ್ಕಾರ ನೀಡುತ್ತಿದ್ದು, ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ ಎಂದಿದ್ದರು.

ಜ.ರಾವತ್‌ ಸ್ಮಾರಕ ನಿರ್ಮಿಸಲು ಮಾಜಿ ಸೈನಿಕರ ಆಗ್ರಹ
ಇತ್ತೀಚೆಗೆ ಹೆಲಿಕಾಪ್ಟರ್‌ ದುರಂತದಲ್ಲಿ ಮಡಿದ ಜ.ಬಿಪಿನ್‌ ರಾವತ್‌ ಸೇರಿದಂತೆ 12 ವೀರಯೋಧರ ಸ್ಮಾರಕ ಹುಬ್ಬಳ್ಳಿ ಕಿತ್ತೂರು ಚನ್ನಮ್ಮ ಪಾರ್ಕ್ನಲ್ಲಿ ನಿರ್ಮಿಸುವಂತೆ ನಿವೃತ್ತ ಸೈನಿಕರ ಹಾಗೂ ವೀರ ನಾರಿಯರ ಅಭಿವೃದ್ಧಿ ಸಂಘದ ಅಧ್ಯಕ್ಷ ಶಿವರಡ್ಡಿ ದಾನರೆಡ್ಡಿ ಆಗ್ರಹಿಸಿದ್ದಾರೆ.  ಭೂದಳ, ವಾಯುದಳ, ನೌಕದಳದ ಮುಖ್ಯಸ್ಥರಾಗಿದ್ದ ಬಿಪಿನ್‌ ರಾವತ್‌, ವಿವಿಧ ದಳಗಳ ನಡುವೆ ಸಮನ್ವಯ ಸಾಧಿಸಿ, ದೇಶದ ರಕ್ಷಣೆಗೆ ಸಾಕಷ್ಟುಶ್ರಮಿಸಿದ್ದಾರೆ. ಅವರ ಅಗಲಿಕೆ ಭಾರತೀಯ ಸೈನ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವಿಷಾದಿಸಿದರು.ತಮಿಳುನಾಡಿನ ಕೂನೂರು ಸಮೀಪದಲ್ಲಿ ಹೆಲಿಕಾಪ್ಟರ್‌ ದುರಂತದಲ್ಲಿ ಜ.ರಾವತ್‌ ಸೇರಿದಂತೆ 12 ವೀರ ಯೋಧರ ಮರಣ ಹೊಂದಿದ್ದು, ಅವರ ಬಗ್ಗೆ ದೇಶದ ಯುವಕರಿಗೆ ತಿಳಿಸಿಕೊಡುವ ಹಾಗೂ ದೇಶಭಕ್ತಿ ಹೆಚ್ಚಿಸುವ ದೃಷ್ಟಿಯಿಂದ ಅವರ ಪುತ್ಥಳಿ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

Follow Us:
Download App:
  • android
  • ios