Asianet Suvarna News Asianet Suvarna News

ಗಲ್ಲು ಸಜೆ ಮೇಲ್ಮನವಿ ವಿಚಾರಣೆ ಆರಂಭಕ್ಕೆ 6 ತಿಂಗಳ ಗಡುವು

ಗಲ್ಲು ಸಜೆ ಮೇಲ್ಮನವಿ ವಿಚಾರಣೆ ಆರಂಭಕ್ಕೆ 6 ತಿಂಗಳ ಗಡುವು | ಹೈಕೋರ್ಟ್‌ ಆದೇಶಿಸಿದ 6 ತಿಂಗಳೊಳಗೆ ವಿಚಾರಣೆ ಆರಂಭವಾಗಬೇಕು | ತ್ರಿ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಬೇಕು | ಸುಪ್ರೀಂ ಕೋರ್ಟ್‌ ಹೊಸ ನಿಯಮಾವಳಿ | ನಿರ್ಭಯಾ ರೇಪಿಸ್ಟ್‌ಗಳ ವಿಳಂಬ ತಂತ್ರದ ಬೆನ್ನಲ್ಲೇ ಹೊಸ ನಿಯಮ

Supreme Court further extends deadline for Nirbhaya convicts to file response
Author
Bengaluru, First Published Feb 15, 2020, 10:19 AM IST
  • Facebook
  • Twitter
  • Whatsapp

ನವದೆಹಲಿ (ಫೆ. 15):  ಗಲ್ಲು ಶಿಕ್ಷೆಯ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳ ತ್ವರಿತ ವಿಚಾರಣೆ ನಡೆಯುವಂತಾಗಲು ನಿಯಮಾವಳಿಗಳನ್ನು ಬದಲಿಸಿ ಎಂಬ ಕೇಂದ್ರ ಸರ್ಕಾರದ ಮನವಿಗೆ ಸುಪ್ರೀಂ ಕೋರ್ಟ್‌ ಓಗೊಟ್ಟಿದೆ.

ಮರಣದಂಡನೆಗೆ ಹೈಕೋರ್ಟ್‌ ಆದೇಶಿಸಿದ 6 ತಿಂಗಳ ಒಳಗೆ ಅದಕ್ಕೆ ಸಂಬಂಧಿಸಿದ ಮೇಲ್ಮನವಿಗಳ ವಿಚಾರಣೆ ಆರಂಭವಾಗಬೇಕು ಎಂಬ ನಿಯಮಾವಳಿಗಳನ್ನು ಅದು ಜಾರಿಗೆ ತಂದಿದೆ.

ಇತ್ತೀಚೆಗೆ ನಿರ್ಭಯಾ ಗ್ಯಾಂಗ್‌ರೇಪ್‌ ಪ್ರಕರಣದ ದೋಷಿಗಳು ತಮ್ಮ ಗಲ್ಲು ಶಿಕ್ಷೆಯನ್ನು ಮುಂದೂಡಿಸಿಕೊಳ್ಳಲು ಮೇಲ್ಮನವಿಗಳ ಮೇಲೆ ಮೇಲ್ಮನವಿ ಸಲ್ಲಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

7 ವರ್ಷ ಸರಿದರೂ ಸಿಗದ ನ್ಯಾಯ: ಪ್ರತಿಭಟನೆಗೆ ಮುಂದಾದ ನಿರ್ಭಯಾ ತಾಯಿ!

ಈ ಹಿನ್ನೆಲೆಯಲ್ಲಿ ‘ತ್ವರಿತವಾಗಿ ಈ ಪ್ರಕರಣಗಳ ವಿಚಾರಣೆ ನಡೆಯುವಂತಾಗಬೇಕು. ಇದಕ್ಕಾಗಿ ಹೊಸ ಗಡುವಿನೊಂದಿಗೆ ನಿಯಮಾವಳಿ ರೂಪಿಸಿ’ ಎಂದು ಕೇಂದ್ರ ಗೃಹ ಸಚಿವಾಲಯವು ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಈ ಹಿನ್ನೆಲೆಯಲ್ಲಿ ನಿಯಮಾವಳಿಗಳು ಮಹತ್ವ ಪಡೆದಿವೆ.

ಹೊಸ ನಿಯಮಾವಳಿ ಹೀಗಿವೆ:

- ಗಲ್ಲು ಶಿಕ್ಷೆಗೆ ಆದೇಶಿಸಿ ಹೈಕೋರ್ಟ್‌ ನೀಡಿದ ತೀರ್ಪಿನ 6 ತಿಂಗಳ ಗಡುವಿನಲ್ಲಿ, ಅದರ ವಿರುದ್ಧದ ಮೇಲ್ಮನವಿಗಳ ವಿಚಾರಣೆ ಆರಂಭವಾಗಬೇಕು.

- ಮೇಲ್ಮನವಿಗಳ ವಿಚಾರಣೆಯನ್ನು ತ್ರಿಸದಸ್ಯ ಪೀಠ ನಡೆಸಬೇಕು

- ಮೇಲ್ಮನವಿ ಸಲ್ಲಿಕೆಯಾದ ತಕ್ಷಣವೇ ವಿಷಯವನ್ನು ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿ, ನ್ಯಾಯಪೀಠದ ಗಮನಕ್ಕೆ ತರಬೇಕು.

- ಮೇಲ್ಮನವಿ ಸಲ್ಲಿಕೆಯಾದ 60 ದಿನದೊಳಗೆ ಅಥವಾ ಕೋರ್ಟ್‌ ನಿಗದಿಪಡಿಸಿದ ದಿನಾಂಕದೊಳಗೆ ಸಂಬಂಧಿಸಿದ ಮೂಲ ದಾಖಲಾತಿ ನೀಡಬೇಕು

- ಅನ್ಯ ಭಾಷೆಯಲ್ಲಿ ಮೂಲ ದಾಖಲೆಗಳಿದ್ದರೆ ಅವುಗಳನ್ನು ಇಂಗ್ಲಿಷ್‌ನಲ್ಲಿ ತರ್ಜುಮೆ ಮಾಡಲಾದ ದಾಖಲೆಗಳನ್ನು ಸಲ್ಲಿಸಬೇಕು

- ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ಒಪ್ಪಿಕೊಂಡರೆ, 30 ದಿನದೊಳಗೆ ಹೆಚ್ಚುವರಿ ದಾಖಲೆ ಕೊಡಿ ಎಂದು ಕಕ್ಷಿದಾರರಿಗೆ ರಿಜಿಸ್ಟ್ರಿ ಸೂಚಿಸಬೇಕು

- ಒಂದು ವೇಳೆ ನಿಗದಿತ ಸಮಯದೊಳಗೆ ದಾಖಲೆ ಸಲ್ಲಿಕೆಯಾಗದೇ ಇದ್ದಲ್ಲಿ ಪ್ರಕರಣವನ್ನು ರಿಜಿಸ್ಟ್ರಿಯಲ್ಲಿ ಲಿಸ್ಟ್‌ ಮಾಡಿಸುವ ಬದಲು, ಚೇಂಬರ್‌ನಲ್ಲೇ ವಿಚಾರಣೆ ನಡೆಸಲು ಪಟ್ಟಿಮಾಡಬೇಕು.

 

Follow Us:
Download App:
  • android
  • ios