ತಂಜಾವೂರು(ಫೆ.15): ಹೆಂಚು ತೆಗೆದು ಮನೆಯೊಳಗೆ ನುಗ್ಗಿದ ಕೋತಿಗಳು, ತೊಟ್ಟಿಲಲ್ಲಿ ಮಲಗಿದ್ದ 8 ದಿನ ಮಗುವನ್ನು ಹೊತ್ತೊಯ್ದು ಅದನ್ನು ಕೆರೆಯಲ್ಲಿ ಎಸೆದಿರುವ ಆಘಾತಕಾರಿ ಘಟನೆ ತಮಿಳುನಾಡಿನ ತಾಂಜಾವೂರಿನಲ್ಲಿ ನಡೆದಿದೆ.

ಶನಿವಾರ ಹೆಂಚು ತೆಗೆದು ಕೋತಿಗಳ ಗುಂಪು ಮನೆಗೆ ನುಗ್ಗಿದ್ದನ್ನು ಕಂಡ ಮಗುವಿನ ತಾಯಿ ಭುವನೇಶ್ವರಿ ಅವರು ಸಹಾಯಕ್ಕಾಗಿ ಕಿರುಚಾಡಿದ್ದಾರೆ.

ಡೂಡಲ್ ಆರ್ಟಿಸ್ಟ್‌ ತೋಳಲ್ಲಿ ನಗ್ತಿದ್ದಾರೆ ಶ್ರುತಿ ಹಾಸನ್..? ಯಾರೀತ ಶಂತನು..?

ಬಳಿಕ ಮಲಗಿಸಿದ್ದ ಮಗು ಕಾಣೆಯಾಗಿದ್ದು ಅರಿವಾಗಿದೆ. ನಂತರ ಸಹಾಯಕ್ಕೆ ಬಂದ ನೆರೆಯವರು ಒಂದು ಮಗುವನ್ನು ಕೋತಿಗಳಿಂದ ಕಿತ್ತುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಇನ್ನೊಂದು ಮಗು ಕೆಲ ಹೊತ್ತಿನ ಬಳಿಕ ಕರೆಯೊಂದರಲ್ಲಿ ಶವವಾಗಿ ಪತ್ತೆಯಾಗಿದೆ.