Asianet Suvarna News Asianet Suvarna News

ಆರಂಭದಲ್ಲೇ ಸ್ಟಿರಾಯ್ಡ್ ಬಳಕೆಯಿಂದ ರೋಗಿಗಳಲ್ಲಿ ಆಕ್ಸಿಜನ್ ಕುಸಿತ: ಏಮ್ಸ್

ಆರಂಭದಲ್ಲೇ ಸ್ಟಿರಾಯ್ಡ್‌ ಬಳಕೆಯಿಂದ ರೋಗಿಗಳಲ್ಲಿ ಆಕ್ಸಿಜನ್‌ ಪ್ರಮಾಣ ಕುಸಿತ| ಲಘು ಸೋಂಕಿತರಿಗೆ ಸ್ಟಿರಾಯ್ಡ್‌, ಸಿ.ಟಿ.ಸ್ಕಾ್ಯನ್‌ನಿಂದ ಅಪಾಯ ಹೆಚ್ಚಳ| ಏಮ್ಸ್‌ ಮುಖ್ಯಸ್ಥ ರಣದೀಪ್‌ ಗುಲೇರಿಯಾ ಎಚ್ಚರಿಕೆ

Steroid use too early may be causing drop in oxygen AIIMS chief Randeep Guleria pod
Author
Bangalore, First Published May 6, 2021, 8:39 AM IST

ನವದೆಹಲಿ(ಮೇ.06): ಸೌಮ್ಯ ರೋಗ ಲಕ್ಷಣ ಇರುವ ಕೊರೋನಾ ಸೋಂಕಿತರಲ್ಲೂ ಆಕ್ಸಿಜನ್‌ ಸ್ಯಾಚುರೇಷನ್‌ ಪ್ರಮಾಣ (ರಕ್ತದಲ್ಲಿನ ಆಮ್ಲಜನಕ) ಕುಸಿತವಾಗಿ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ಎದುರಾಗುತ್ತಿರುವುದಕ್ಕೆ, ಅವರು ಆರಂಭಿಕ ಹಂತದಲ್ಲೇ ಸ್ಟಿರಾಯ್ಡ್‌ಗಳನ್ನು ಸೇವಿಸುತ್ತಿರುವುದೂ ಕಾರಣವಾಗಿರಬಹುದು ಎಂದು ದೆಹಲಿಯ ಏಮ್ಸ್‌ ಆಸ್ಪತ್ರೆಯ ಮುಖ್ಯಸ್ಥ ರಣದೀಪ್‌ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ.

ಕೊರೋನಾ ಸೋಂಕಿತರಿಗೆ ಸೂಕ್ತ ರೀತಿಯ ಔಷಧೋಪಚಾರದ ಬಗ್ಗೆ ಪ್ರತಿಪಾದಿಸಿರುವ ಗುಲೇರಿಯಾ, ಸ್ಟಿರಾಯ್ಡ್‌ ಬಳಕೆ ಮಾಡಿದ ರೋಗಿಗಳಲ್ಲಿ, ವೈರಸ್‌ ದ್ವಿಗುಣ ಪ್ರಮಾಣ ಹೆಚ್ಚಳವಿರುವ ಮತ್ತು ಅದರಿಂದಾಗಿ ಅವರ ದೇಹದಲ್ಲಿ ಆಮ್ಲಜನಕ ಮಟ್ಟಕುಸಿಯುತ್ತಿರುವ ಸಂಗತಿ ದೇಶದ ಹಲವು ಆಸ್ಪತ್ರೆಗಳಲ್ಲಿ ಕಂಡುಬಂದಿದೆ.

"

ಸೋಂಕಿನ ಆರಂಭಿಕ ಹಂತದಲ್ಲಿ ಸ್ಟಿರಾಯ್ಡ್‌ ಪಡೆದುಕೊಳ್ಳುವುದು, ದೇಹದಲ್ಲಿ ವೈರಸ್‌ ದ್ವಿಗುಣಗೊಳ್ಳುವ ಪ್ರಮಾಣ ಹೆಚ್ಚಳಕ್ಕೆ ಉತ್ತೇಜನ ನೀಡಬಲ್ಲದು. ಇದರ ಪರಿಣಾಮವಾಗಿಯೇ ಸೌಮ್ಯ ಸೋಂಕಿನ ಲಕ್ಷಣ ಹೊಂದಿರುವವರು ನಂತರ ಗಂಭೀರ ಸ್ವರೂಪದ ಸಮಸ್ಯೆಗೆ ತುತ್ತಾಗಿ ನ್ಯುಮೋನಿಯಾಕ್ಕೆ ತುತ್ತಾಗುತ್ತಿದ್ದಾರೆ. ಸೋಂಕಿನ ಮೊದಲ 5 ದಿನಗಳಲ್ಲಿ ಸ್ಟಿರಾಯ್ಡ್‌ಗಳು ಯಾವುದೇ ಪರಿಣಾಮ ಹೊಂದಿರುವುದಿಲ್ಲ. ಹೀಗಾಗಿ ಸೌಮ್ಯ ಲಕ್ಷಣ ಹೊಂದಿರುವವರು ಯಾವುದೇ ಕಾರಣಕ್ಕೂ ಸ್ಟೆರಾಯ್ಡ್‌ ಬಳಸಬಾರದು ಮತ್ತು ಸಿ.ಟಿ.ಸ್ಕಾ್ಯನ್‌ ಮಾಡಿಸಬಾರದು ಎಂದು ಹೇಳಿದ್ದಾರೆ.

ಸಾಧಾರಣ ರೋಗ ಲಕ್ಷಣಗಳಿಂದ ಬಳಲುತ್ತಿರುವವರಿಗೆ ಮೊದಲು ಆಮ್ಲಜನಕ ಚಿಕಿತ್ಸೆಯ ಅಗತ್ಯವಿದೆ. ಒಂದು ವೇಳೆ ಆಮ್ಲಜನಕ ಪ್ರಮಾಣ ಕುಸಿತವಾದಾಗ ಮಾತ್ರ ಸ್ಟಿರಾಯ್ಡ್‌ ಮಾಡಬೇಕು ಎಂದು ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios