Asianet Suvarna News Asianet Suvarna News

ಏಪ್ರಿಲ್‌ ಅಂತ್ಯಕ್ಕೆ ಭಾರತಕ್ಕೆ ಸ್ಪುಟ್ನಿಕ್‌ ಲಸಿಕೆ!

ಏಪ್ರಿಲ್‌ ಅಂತ್ಯಕ್ಕೆ ಭಾರತಕ್ಕೆ ಸ್ಪುಟ್ನಿಕ್‌ ಲಸಿಕೆ| ಮೇ ತಿಂಗಳಲ್ಲಿ ಭಾರತದಲ್ಲೇ ಉತ್ಪಾದನೆ| ವಿದೇಶೀ ಲಸಿಕೆ ಆಮದಿಗೆ ಆಮದು ಸುಂಕ ವಿನಾಯ್ತಿ ಸಾಧ್ಯತೆ

Sputnik V Covid Vaccine to Arrive in India This Month Production to Start in May pod
Author
Bangalore, First Published Apr 21, 2021, 7:28 AM IST

ನವದೆಹಲಿ(ಏ.21): ರಷ್ಯಾದ ಸ್ಪುಟ್ನಿಕ್‌-5 ಕೊರೋನಾ ಲಸಿಕೆ ಭಾರತಕ್ಕೆ ಏಪ್ರಿಲ್‌ ಅಂತ್ಯಕ್ಕೆ ಆಗಮಿಸಲಿದೆ. ಮೇ ಅಂತ್ಯಕ್ಕೆ ಭಾರತದಲ್ಲೇ ಉತ್ಪಾದನೆ ಆಗುವ ನಿರೀಕ್ಷೆ ಇದೆ.

ರಷ್ಯಾದಲ್ಲಿನ ಭಾರತದ ರಾಯಭಾರಿ ಬಾಲ ವೆಂಕಟೇಶ ಶರ್ಮಾ ಮಂಗಳವಾರ ಈ ವಿಷಯಯ ತಿಳಿಸಿದ್ದಾರೆ.

ಇತ್ತೀಚೆಗೆ ಸ್ಪುಟ್ನಿಕ್‌ ಲಸಿಕೆಯ ತುರ್ತು ಬಳಕೆಗೆ ಭಾರತ ಒಪ್ಪಿಗೆ ಸೂಚಿಸಿತ್ತು. ಹೀಗಾಗಿ ಮೊದಲ ಲಸಿಕೆಯ ಶಿಪ್‌ಮೆಂಟ್‌ ಈ ತಿಂಗಳ ಅಂತ್ಯಕ್ಕೆ ಆಗಮಿಸಲಿದೆ. ನಂತರ ಮೇನಲ್ಲಿ ಭಾರತದಲ್ಲೇ ಉತ್ಪಾದನೆ ಆಗಲಿದ್ದು ತಿಂಗಳಿಗೆ 50 ದಶಲಕ್ಷ ಡೋಸ್‌ವರೆಗೆ ಉತ್ಪಾದನೆ ಆಗಬಹುದು ಎಂದು ಹೇಳಿದ್ದಾರೆ. ಭಾರತದಲ್ಲಿ ಸ್ಪುಟ್ನಿಕ್‌ ಲಸಿಕೆ ಉತ್ಪಾದನೆಗೆ ಡಾ| ರೆಡ್ಡೀಸ್‌ ಸೇರಿದಂತೆ ವಿವಿಧ ಕಂಪನಿಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಸುಂಕ ವಿನಾಯಿತಿ:

ವಿದೇಶದಿಂದ ಆಮದದಾಗುವ ಲಸಿಕೆಗಳಿಗೆ ಭಾರತವು ಶೇ.10ರಷ್ಟುಸುಂೆಎಂಕ ವಿನಾಯಿತಿ ನೀಡಿವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ವಿದೇಶದಿಂದ ಆಮದಾಗುವ ವಸ್ತುಗಳಿಗೆ ಸರ್ಕಾರ ಶೇ.10 ಆಮದು ಸುಂಕ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 

Follow Us:
Download App:
  • android
  • ios