Asianet Suvarna News Asianet Suvarna News

ಜಾತ್ರೆಗೆ ಬಂದ ಸ್ಪೈಡರ್‌ಮ್ಯಾನ್‌... ಜಾನಪದ ನೃತ್ಯಕ್ಕೆ ಬೆರಗಾಗಿ ಸಖತ್ ಸ್ಟೆಪ್

ಇಲ್ಲೊಬ್ಬರು ಸ್ಪೈಡರ್ ಮ್ಯಾನ್ ವೇಷ ಧರಿಸಿ ಸ್ಥಳೀಯ ಜಾತ್ರೆಯೊಂದರಲ್ಲಿ ಕುಣಿದು ಕುಪ್ಪಳಿಸಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Spider man dancing in Market place video goes viral akb
Author
Bangalore, First Published Aug 12, 2022, 1:13 PM IST

ಸ್ಪೈಡರ್ ಮ್ಯಾನ್ ಹೆಸರು ಯಾರು ಕೇಳಿಲ್ಲ ಹೇಳಿ, ಈ ಹೆಸರು ಕೇಳಿದ ಕೂಡಲೇ ಮಕ್ಕಳ ಕಿವಿ ಚಿಗುರಿ ಬಿಡುತ್ತದೆ. ಹಲವರಿಗೆ ಸ್ಪೈಡರ್‌ಮ್ಯಾನ್‌ ಸ್ಫೂರ್ತಿ, ಹಲವರ ಪಾಲಿನ ಹೀರೋ ಸ್ಪೈಡರ್ ಮ್ಯಾನ್. ಅಷ್ಟೊಂದು ಪ್ರಭಾವ ಬೀರಿದ ಸಿನಿಮಾ ಇದು. ಇದಾದ ಬಳಿಕ ಸ್ಪೈಡರ್ ಮ್ಯಾನ್‌ಗಿರುವ ಈ ಅಭಿಮಾನಿ ಬಳಗವನ್ನು ನೋಡಿದ ಆಟಿಕೆ ಕಂಪನಿಗಳು ಈ ರೀತಿಯ ಹಲವು ಆಟಿಕೆಗಳನ್ನು ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಯಶಸ್ವಿಯೂ ಆದವು. ಆದೆಲ್ಲಾ ಈಗ್ಯಾಕೆ ಅಂತಿರಾ, ಇಲ್ಲೊಬ್ಬರು ಸ್ಪೈಡರ್ ಮ್ಯಾನ್ ವೇಷ ಧರಿಸಿ ಸ್ಥಳೀಯ ಜಾತ್ರೆಯೊಂದರಲ್ಲಿ ಕುಣಿದು ಕುಪ್ಪಳಿಸಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್ಸ್ಟಾಗ್ರಾಮ್‌ ಇನ್‌ಫ್ಲುಯೆನ್ಸರ್ ಒಬ್ಬರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬರು ಸ್ಪೈಡರ್ ಮ್ಯಾನ್ ಸಿನಿಮಾದ ಮಾರ್ವೆಲ್ ವೇಷ ಧರಿಸಿ ಜಾತ್ರೆಯಲ್ಲಿ ಜಾನಪದ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಈಗಾಗಲೇ ಜಾತ್ರೆಯೊಂದರ ಮಾರುಕಟ್ಟೆ ಪ್ರದೇಶದಲ್ಲಿ ಜಾನಪದ ನೃತ್ಯ ಮಾಡುವ ಮಹಿಳೆಯರ ಗುಂಪಿನೊಂದಿಗೆ ಆ ತಂಡದ ಭಾಗದಂತೆ ಸೇರಿಕೊಂಡ ಸ್ಪೈಡರ್ ಮ್ಯಾನ್‌ ಅವರೊಂದಿಗೆ ಸಖತ್ ಆಗಿ ಹೆಜ್ಜೆ ಹಾಕುತ್ತಾರೆ. ಇನ್ಸ್ಟಾಗ್ರಾಮ್‌ನಲ್ಲಿ ಉಲ್ಲೇಖಿಸಿರುವಂತೆ ಈ ದೃಶ್ಯವನ್ನು ಸೋನಾಝುರಿ ಪ್ರದೇಶದ ಶಾಂತಿನಿಕೇತನ ಬಳಿ ಸೆರೆ ಹಿಡಿಯಲಾಗಿದೆ.

 

ಈ ವಿಡಿಯೋವನ್ನು 44 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅಲ್ಲದೇ 4 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಸ್ವಾರಸ್ಯಕರವಾಗಿ ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋಗೆ ಈ ಸ್ಪೈಡರ್‌ಮ್ಯಾನ್ ವೇಷಧಾರಿಯೂ ತನ್ನ ಖಾತೆಯಿಂದ ಕಾಮೆಂಟ್ ಮಾಡಿದ್ದು, ನಾನು ಪಶ್ಚಿಮ ಬಂಗಾಳದ ಹಲವು ಪ್ರದೇಶಗಳಲ್ಲಿ ಈ ರೀತಿ ಜನರನ್ನು ಮನೋರಂಜಿಸುತ್ತೇನೆ ನನ್ನನ್ನು ಬೆಂಬಲಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನಗುವ ಇಮೋಜಿಯನ್ನು ಕಾಮೆಂಟ್ ಮಾಡಿದ್ದಾರೆ. ಒಬ್ಬರು ಆರ್‌ಐಪಿ ಸೈಡರ್‌ಮ್ಯಾನ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಮ್ಮ ಜಾನಪದ ಕಲೆಯನ್ನು ಈ ರೀತಿ ಅವಮಾನಿಸಬೇಡಿ ಎಂದು ಪ್ರತಿಕ್ರಿಯಿಸಿದ್ದಾರೆ. 

25ನೇ ವರ್ಷಕ್ಕೆ ಗರ್ಲ್‌ಫ್ರೆಂಡ್‌ ಜೊತೆ 3 ಮಿಲಿಯನ್ ಡಾಲರ್ ಮನೆ ಖರೀದಿಸಿದ Spider Man ನಟ!

ಕೆಲ ದಿನಗಳ ಹಿಂದೆ ಭಿಕ್ಷುಕನೋರ್ವ ಜಾಕ್‌ ಸ್ಪೆರೋ ವೇಷ ಧರಿಸಿ ಭಿಕ್ಷೆ ಬೇಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಈ ವಿಡಿಯೋದಲ್ಲಿ ವೇಷ ಧರಿಸಿದಾತ ಜಾನಿಡಿಪ್(ಕೆರಿಬಿಯನ್‌ ಫ್ರಂಚೈಸ್‌ ಅಲ್ಲಿ ಪೈರೆಟ್ ಪಾತ್ರಧಾರಿ) ತರ ನಟನೆ ಮಾಡುತ್ತಾ ಜನರಿಂದ ಹಣ ಕೇಳುತ್ತಿದ್ದ. ಜೊತೆಗೆ ಈ ಪಾತ್ರವನ್ನು ಸಂಪೂರ್ಣಗೊಳಿಸಲು ಆತ ಆಟಿಕೆ ಗನ್ ಅನ್ನು ಇಟ್ಟುಕೊಂಡಿದ್ದ.

ಜಾನಿ ಡಿಪ್‌ ಇತ್ತೀಚೆಗೆ ತಮ್ಮ ಮಾಜಿ ಪತ್ನಿ ಅಂಬೆರ್‌ ಹೆರ್ಡ್‌ ವಿರುದ್ಧ ಕಾನೂನು ಹೋರಾಟದಲ್ಲಿ ದೊಡ್ಡ ಗೆಲುವು ದಾಖಲಿಸಿದ ಸಂದರ್ಭದಲ್ಲೇ ಈ ಜಾಕ್‌ ಸ್ಪೆರೋ ವೇಷಧಾರಿ ಭಿಕ್ಷುಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿತ್ತು. ಅಲ್ಲದೇ ನೆಟ್ಟಿಗರು ಈ ಭಿಕ್ಷುಕನಿಗೆ ಥಮ್ಸಪ್ ನೀಡಿದ್ದರು. ಜೊತೆಗೆ ಜಾನಿ ಡೆಬ್ಟ್ (Johnny debt) ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದಲ್ಲದೇ 8 ಮಿಲಿಯನ್‌ಗೂ ಹೆಚ್ಚು ಜನ ಆ ವಿಡಿಯೋವನ್ನು ವೀಕ್ಷಿಸಿದ್ದರು.

Spider Man Dance: 'ರಾ ರಾ ಸಾಮಿ' ಹಾಡಿಗೆ ರಶ್ಮಿಕಾರಂತೆ ಸ್ಟೆಪ್ ಹಾಕಿದ ಸ್ಪೈಡರ್​ ಮ್ಯಾನ್

Follow Us:
Download App:
  • android
  • ios