ತನ್ನ ಮಗ ಪಿಂಚಣಿ ಪಡೆಯುವುದರ ಜೊತೆಗೆ ಕನ್ಸಲ್ಟೆನ್ಸಿ ಸೇವೆಗಳಿಂದ ಹಣವನ್ನು ಪಡೆಯುತ್ತಿದ್ದಾನೆ. ಈ ಹಿನ್ನೆಲೆ ಅವನು  ಪ್ರತಿ ತಿಂಗಳು ತನಗೆ 35 ಸಾವಿರ ರೂ. ನೀಡಬೇಕು, ತನ್ನ ಮಗನನ್ನು ಹಾಗೂ ಆತನ ಕುಟುಂಬವನ್ನು ಫ್ಲಾಟ್‌ನಿಂದ ಹೊರಹಾಕಬೇಕು ಮತ್ತು ತನ್ನನ್ನು ಕೌಟುಂಬಿಕ ಹಿಂಸೆಗೆ ಒಳಪಡಿಸುವುದನ್ನು ನಿಲ್ಲಿಸುವಂತೆ ನ್ಯಾಯಾಲಯವನ್ನು ಮಹಿಳೆ ಮನವಿ ಮಾಡಿಕೊಂಡಿದ್ದರು. 

ಖಾಸಗಿ ಕಂಪನಿಯೊಂದರಲ್ಲಿ (Private Company) ನಿವೃತ್ತ ಮ್ಯಾನೇಜರ್ ಆಗಿರುವ 72 ವರ್ಷದ ವ್ಯಕ್ತಿಯೊಬ್ಬರಿಗೆ ಮುಂಬೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು (Mumbai Magistrate Court) ತನ್ನ 98 ವರ್ಷದ ತಾಯಿಗೆ ತಾತ್ಕಾಲಿಕವಾಗಿ ತಿಂಗಳಿಗೆ 20,000 ರೂ. ಜೀವನಾಂಶ ನೀಡುವಂತೆ ಸೂಚನೆ ನೀಡಿದೆ. ಅಲ್ಲದೆ, ಮಗನಾಗಿರುವುದರಿಂದ (Son) ಆಕೆಯನ್ನು (ತಾಯಿ) (Mother) ಕಾಪಾಡಿಕೊಳ್ಳುವ ಜವಾಬ್ದಾರಿ ಅವರದು ಎಂದೂ ಕೋರ್ಟ್‌ ಈ ತೀರ್ಪು ನೀಡುವ ವೇಳೆ ಅಭಿಪ್ರಾಯ ಪಟ್ಟಿದೆ. ತನ್ನ ಮಗ, ಆತನ ಪತ್ನಿ ಮತ್ತು ಮಗಳಿಂದ ವಿತ್ತೀಯ ಮತ್ತು ಇತರ ಪರಿಹಾರಗಳಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಅವರು ತನಗೆ ಕಿರುಕುಳ ನೀಡುತ್ತಿದ್ದಾರೆ ಮತ್ತು ಒಟ್ಟಿಗೆ ವಾಸಿಸುವ ಫ್ಲಾಟ್‌ನಿಂದ ತನ್ನನ್ನು ಹೊರಹಾಕಲು ಬಯಸುತ್ತಿದ್ದಾರೆ ಎಂದು ಆರೋಪಿಸಿ ತಾಯಿ ನ್ಯಾಯಾಲಯದ ಮೊರೆ ಹೋಗಿದ್ದರು. 

98 ವರ್ಷದ ತಾಯಿ ತನ್ನ ಪತಿಯ ಮನೆಯಲ್ಲಿ ಕಳೆದ 50 ವರ್ಷಗಳಿಂದ ವಾಸಿಸುತ್ತಿದ್ದಾರೆ. ಗಂಡನ ಮರಣದ ನಂತರ ಆಸ್ತಿಯ ಹಕ್ಕನ್ನೂ ಪಡೆದುಕೊಂಡಿದ್ದರು. ಇನ್ನು, ತನ್ನ ಮಗನ ಕುಟುಂಬಕ್ಕೆ ವಸತಿ ಕಲ್ಪಿಸಲು ಫ್ಲಾಟ್‌ನಲ್ಲಿ ಹೆಚ್ಚುವರಿ ಜಾಗವನ್ನು ನಿರ್ಮಿಸಿದ್ದೇನೆ ಎಂದೂ ವೃದ್ಧೆ ನ್ಯಾಯಾಲಯಕ್ಕೆ ತಿಳಿಸಿದ್ದರು.

ಇದನ್ನು ಓದಿ: ಅಂಕಿತಾ ಭಂಡಾರಿ ಕೊಲೆ ಪ್ರಕರಣ: ಎಸ್‌ಐಟಿಯಿಂದ 500 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

ಇನ್ನು, ತನ್ನ ಮಗ ಪಿಂಚಣಿ ಪಡೆಯುವುದರ ಜೊತೆಗೆ ಕನ್ಸಲ್ಟೆನ್ಸಿ ಸೇವೆಗಳಿಂದ ಹಣವನ್ನು ಪಡೆಯುತ್ತಿದ್ದಾನೆ. ಈ ಹಿನ್ನೆಲೆ ಅವನು ಪ್ರತಿ ತಿಂಗಳು ತನಗೆ 35 ಸಾವಿರ ರೂ. ನೀಡಬೇಕು, ತನ್ನ ಮಗನನ್ನು ಹಾಗೂ ಆತನ ಕುಟುಂಬವನ್ನು ಫ್ಲಾಟ್‌ನಿಂದ ಹೊರಹಾಕಬೇಕು ಮತ್ತು ತನ್ನನ್ನು ಕೌಟುಂಬಿಕ ಹಿಂಸೆಗೆ ಒಳಪಡಿಸುವುದನ್ನು ನಿಲ್ಲಿಸುವಂತೆ ನ್ಯಾಯಾಲಯವನ್ನು ಮಹಿಳೆ ಮನವಿ ಮಾಡಿಕೊಂಡಿದ್ದರು. 

ಇನ್ನು, ಪೊಲೀಸ್ ಠಾಣೆಯಲ್ಲಿ ವೃದ್ಧೆ ಸಲ್ಲಿಸಿದ ದೂರುಗಳ ಪ್ರತಿಗಳನ್ನು ಅವಲೋಕಿಸಿದ ನ್ಯಾಯಾಲಯವು ಪ್ರಾಥಮಿಕವಾಗಿ ಆಕೆಯನ್ನು ಕೌಟುಂಬಿಕ ಹಿಂಸೆಗೆ ಒಳಪಡಿಸಲಾಗುತ್ತಿದೆ ಮತ್ತು ಆಕೆಯ ಪರವಾಗಿ ರಕ್ಷಣಾ ಆದೇಶವನ್ನು ನೀಡುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ಮುಂಬೈನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಿಪಿ ಕಾಶಿದ್, ಮಗನಿಗೆ ತನ್ನನ್ನು, ತನ್ನ ಕುಟುಂಬವನ್ನು ಮತ್ತು ಆತನ ತಾಯಿಯನ್ನು ನಿರ್ವಹಿಸಲು ಸಾಕಷ್ಟು ಆದಾಯವಿದೆ ಎಂಬ ದಾಖಲೆಗಳನ್ನು ಪರಿಗಣಿಸಿದ್ದಾರೆ.

ಇದನ್ನೂ ಓದಿ: Gujarat Riots: ಬಿಲ್ಕಿಸ್‌ ಬಾನೋ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್‌

ಹಾಗೂ, ಅರ್ಜಿದಾರರ ಅಗತ್ಯತೆಗಳು, ಆಕೆಯ ಮಗನ ಆದಾಯದ ಮೂಲ, ಅವರ ಜವಾಬ್ದಾರಿಗಳು ಮತ್ತು ವೈದ್ಯಕೀಯ ವೆಚ್ಚಗಳು ಹಾಗೂ ಇಂದಿನ ತುಟ್ಟಿ ಭತ್ಯೆಯನ್ನು ಪರಿಗಣಿಸಿ, 98 ವರ್ಷದ ತಾಯಿ ಮಾಸಿಕ 20,000 ರೂ. ವೆಚ್ಚವನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಆದರೆ, ತಾಯಿಯ ಬೇಡಿಕೆಯಾದ 35,000 ರೂ. ಹಣ ವಿಪರೀತವಾಯ್ತು ಎಂದೂ ಮುಂಬೈ ಕೋರ್ಟ್‌ ಅಭಿಪ್ರಾಯಪಟ್ಟಿದೆ. 

ಇದನ್ನೂ ಓದಿ: Godhra Train Burning Case: ಗೋಧ್ರಾ ರೈಲಿನ ಮೇಲೆ ಕಲ್ಲು ತೂರಿದ್ದ ವ್ಯಕ್ತಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು!