Asianet Suvarna News Asianet Suvarna News

ಕೈಮುಗೀತೇನೆ ಆಮ್ಲಜನಕ ಪೂರೈಸಿ: ಕೇಜ್ರಿವಾಲ್‌!

ಕೈಮುಗೀತೇನೆ ಆಮ್ಲಜನಕ ಪೂರೈಸಿ: ಕೇಜ್ರಿವಾಲ್‌| ಕೆಲ ಆಸ್ಪತ್ರೆಗಳಲ್ಲಿ ಕೆಲವೇ ಗಂಟೆಗಳಲ್ಲಿ ಆಮ್ಲಜನಕ ಖಾಲಿ-ಖಾಲಿ

Some hospitals left with just few hours of oxygen Delhi CM asks for Centre help pod
Author
Bangalore, First Published Apr 21, 2021, 11:00 AM IST

ನವದೆಹಲಿ(ಏ.21): ನಮ್ಮ ಹಲವು ಆಸ್ಪತ್ರೆಗಳು ವೈದ್ಯಕೀಯ ಆಮ್ಲಜನಕದ ಸಿಲಿಂಡರ್‌ ಕೊರತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಆಮ್ಲಜನಕ ಪೂರೈಸಲು ಕೇಂದ್ರ ಸರ್ಕಾರಕ್ಕೆ ಕೈಮುಗಿದು ಕೋರಿಕೊಳ್ಳುತ್ತೇನೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ.

ಈ ಸಂಬಂಧ ಮಂಗಳವಾರ ಟ್ವೀಟ್‌ ಮಾಡಿದ ಕೇಜ್ರಿವಾಲ್‌, ‘ದೆಹಲಿಯಲ್ಲಿ ಆಮ್ಲಜನಕದ ಬಿಕ್ಕಟ್ಟು ವಿಪರೀತ ಹಂತ ತಲುಪಿದ್ದು, ಕೆಲವು ಆಸ್ಪತ್ರೆಗಳಲ್ಲಿ ಕೆಲವೇ ಗಂಟೆಗಳಲ್ಲಿ ಆಮ್ಲಜನಕದ ಸಿಲಿಂಡರ್‌ಗಳು ಬರಿದಾಗಲಿವೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಆಮ್ಲಜನಕ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ನನ್ನ ಎರಡೂ ಕೈಗಳನ್ನು ಮುಗಿಯುತ್ತೇನೆ ಎಂದಿದ್ದಾರೆ.

ಸರ್‌ ಗಂಗಾರಾಮ್‌ ಆಸ್ಪತ್ರೆಯಲ್ಲಿ ಒಟ್ಟಾರೆ 485 ಕೋವಿಡ್‌ ಬೆಡ್‌ಗಳ ಪೈಕಿ 475 ಭರ್ತಿಯಾಗಿದ್ದು, ಇದರಲ್ಲಿ 120 ರೋಗಿಗಳು ಐಸಿಯುನಲ್ಲಿದ್ದಾರೆ. ಈ ಆಸ್ಪತ್ರೆಯಲ್ಲಿ ಕೇವಲ 8 ಗಂಟೆಗಳಿಗೆ ಸಾಕಾಗುವಷ್ಟುಮಾತ್ರವೇ ಆಮ್ಲಜನಕವಿದೆ.

Follow Us:
Download App:
  • android
  • ios