Asianet Suvarna News Asianet Suvarna News

ಬಿಹಾರದಲ್ಲಿ ಉದ್ದ ಮೂತಿಯ ಹಾವಿನ ಹೊಸ ಪ್ರಭೇದ ಪತ್ತೆ

ಭಾರತದಲ್ಲಿ ಇದೇ ಮೊದಲ ಬಾರಿಗೆ ಉದ್ದ ಮೂತಿ ಇರುವ ಹಾವಿನ ಹೊಸ ಪ್ರಬೇಧವೊಂದು ಪತ್ತೆಯಾಗಿದ್ದು, ಪರಿಸರ ವಿಜ್ಞಾನಿಗಳು ಈ ವಿಚಾರವನ್ನು ಖಚಿತಪಡಿಸಿದ್ದಾರೆ.

Snouted Vine Snakes A new species of snake discovered in Bihar akb
Author
First Published Sep 12, 2024, 6:16 PM IST | Last Updated Sep 13, 2024, 9:15 AM IST

ಭಾರತದಲ್ಲಿ ಇದೇ ಮೊದಲ ಬಾರಿಗೆ ಉದ್ದ ಮೂತಿ ಇರುವ ಹಾವಿನ ಹೊಸ ಪ್ರಬೇಧವೊಂದು ಪತ್ತೆಯಾಗಿದ್ದು, ಪರಿಸರ ವಿಜ್ಞಾನಿಗಳು ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಮೇಘಾಲಯ ಹಾಗೂ ಬಿಹಾರದಿಂದ 11,20 ಕಿಲೋ ಮೀಟರ್ ದೂರದಲ್ಲಿ ಈ ಹೊಸ ಜಾತಿಯ  ಹಾವೊಂದು ಪತ್ತೆಯಾಗಿದ್ದು, ಈ ರೀತಿಯ ಹಾವನ್ನು ತಾವು ಈ ಹಿಂದೆ ಎಲ್ಲೂ ನೋಡಿಲ್ಲ ಎಂದು ವಿಜ್ಞಾನಿಗಳು ಖಚಿತಪಡಿಸಿದ್ದಾರೆ. ಈ ಹೊಸದಾಗಿ ಕಂಡು ಬಂದ ಹಾವಿನ ಜಾತಿಗೆ ಸೇರಿದ ಎರಡು ವಿಧದ ಹಾವುಗಳು ಇಲ್ಲಿ ಕಂಡು ಬಂದಿವೆ ಎಂದು ಏಷ್ಯಾ ಪೆಸಿಫಿಕ್‌ ವೈವಿಧ್ಯಕ್ಕೆ (Journal of Asia-Pacific Diversity) ಸಂಬಂಧಿಸಿ ಜರ್ನಲ್‌ನಲ್ಲಿ ಪರಿಸರ ವಿಜ್ಞಾನಿಗಳು ಬರೆದುಕೊಂಡಿದ್ದಾರೆ. 

2021ರ ಡಿಸೆಂಬರ್ 16 ರಂದು ಮೊದಲ ಬಾರಿಗೆ ಅಸ್ವಸ್ಥಗೊಂಡಿದ್ದ ಈ ಉದ್ದ ಮೂತಿಯ ವೈನ್ ಸ್ನೇಕೊಂದು ಬಿಹಾರದ ಗೊನೌಲಿ ಗ್ರಾಮದಲ್ಲಿ ಬರುವ ವಾಲ್ಮೀಕಿ ಹುಲಿ ಸಂರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಕಂಡು ಬಂದಿತ್ತು. ಆದರೆ ಅದು ನಂತರದಲ್ಲಿ ಸಾವನ್ನಪ್ಪಿದ್ದು, ಅದರ ದೇಹದಲ್ಲಿ ಯಾವುದೇ ಗಾಯದ ಗುರುತುಗಳಿಲ್ಲದ ಕಾರಣ ಅದು ಹೇಗೆ ಮೃತಪಟ್ಟಿದೆ ಎಂಬುದಕ್ಕೆ ಕಾರಣ ಸಿಕ್ಕಿರಲಿಲ್ಲ ಎಂದು ಏಷ್ಯಾ ಫೆಸಿಫಿಕ್ ಡೈವರ್ಸಿಟಿ ಜರ್ನಲ್‌ನಲ್ಲಿ ಲೇಖಕರು ಬರೆದಿದ್ದಾರೆ. ಈ ವಿಭಿನ್ನ ಹಾವು ಅಸ್ತಿತ್ವದಲ್ಲಿರುವ ಇತರ ಹಾವುಗಳನ್ನೇ ಹೋಲುತ್ತಿದ್ದರು ಇದರ ಉದ್ದನೇಯ ಮೂತಿಯ ಕಾರಣಕ್ಕೆ ಇದು ಬೇರೆ ಹಾವುಗಳಿಂದ ವಿಭಿನ್ನ ಎನಿಸಿದೆ. ಅಲ್ಲೇ ಈ ಪ್ರದೇಶದಲ್ಲಿ ಈ ಹಿಂದೆಂದೂ ಈ ರೀತಿಯ ಹಾವುಗಳು ಕಾಣಿಸಿಕೊಳ್ಳದ ಕಾರಣ ಈ ಹಾವುಗಳನ್ನು ಇಲ್ಲಿ ಹೊಸ ಜಾತಿಯ ಹಾವೆಂದು ಪರಿಗಣಿಸಲಾಗಿದೆ.

ಇಲ್ಲೊಂದು ನಿಧಿ ಸಿಕ್ಕಿದೆ, ಆದ್ರೆ ಅದರೊಳಗೊಂದು ಹಾವಿದೆ!

ಸೌರಭ್ ವರ್ಮಾ ಮತ್ತು ಸೋಹಮ್ ಪಟೇಕರ್ ಎಂಬ ಇಬ್ಬರು ಸಂಶೋಧಕರು, ಈ ಪ್ರದೇಶದ ಅಧ್ಯಯನ ಮಾಡದೇ ಇರುವ ಉಭಯಚರಗಳು ಮತ್ತು ಸರೀಸೃಪಗಳ ಸಮೀಕ್ಷೆ ಮತ್ತು ದಾಖಲೀಕರಣ ಮಾಡುವ ಯೋಜನೆಯಲ್ಲಿ ತೊಡಗಿದ್ದಾಗ ಈ ಸತ್ತು ಬಿದ್ದಿದ್ದ ಹಾವು ಇವರ ಕಣ್ಣಿಗೆ ಬಿದ್ದಿತ್ತು. ಆದರೆ ಈ ಹಾವು ಹೇಗೆ ಸತ್ತಿದೆ ಎಂಬುದು ಯಾರಿಗೂ ತಿಳಿದಿಲ್ಲ. ಹಾವಿನಲ್ಲಿರುವ ಈ ಉದ್ದ ಮೂತಿಯ ಸ್ವರೂಪವೂ ಈ ಹಿಂದೆ ಕಂಡು ಬಂದಂತಹ ಯಾವ ಹಾವುಗಳಲ್ಲೂ ಕಾಣಿಸಿಲ್ಲ. ಈ ಉದ್ದ ಮೂತಿ ಹೊಂದಿರುವ ಈ ಹಾವು ನಾಲ್ಕು ಅಡಿಗಳಷ್ಟು ಉದ್ದ ಬೆಳೆಯಬಹುದು ಎಂದು ಅಂದಾಜಿಸಲಾಗಿದೆ. ಈ ಹಾವುಗಳು ತ್ರಿಕೋನಾಕಾದ ತಲೆಯನ್ನು ಹೊಂದಿದ್ದು, ಉದ್ದಮೂತಿಯನ್ನು ಹೊಂದಿವೆ. ಈ ಉದ್ದ ಮೂತಿ ಹಾವುಗಳ ತಲೆಯ ಶೇಕಡಾ 18ರಷ್ಟು ಉದ್ದವನ್ನು ಹೊಂದಿವೆ.  ಈ ಉದ್ದ ಮೂತಿಯ ಹಾವುಗಳ ಮೇಲೈ ಹಸಿರು ಬಣ್ಣದಿಂದ ಕೂಡಿದ್ದರೆ ಹೊಟ್ಟೆಯ ಭಾಗವೂ ಸ್ವಲ್ಪ ಕೇಸರಿ ಬಣ್ಣವನ್ನು ಹೊಂದಿದೆ. 

ಶ್ರೀಗಂಧದ ಮರಕ್ಕೇ ವಿಷ ಇರೋ ಹಾವು ಹೆಚ್ಚಾಗಿ ಸುತ್ಗೊಂಡಿರೋದೇಕೆ?

Latest Videos
Follow Us:
Download App:
  • android
  • ios