Asianet Suvarna News Asianet Suvarna News

ತನಗೆ ಕಚ್ಚಿದ ಹಾವನ್ನು ಕಚ್ಚಿ-ಕಚ್ಚಿ ಸಾಯಿಸಿದ, ಏನೂ ಆಗಲಿಲ್ಲ!

* ತನಗೆ ಕಚ್ಚಿದ ಹಾವಿಗೆ ವಾಪಸ್ ಕಚ್ಚಿದ ರೈತ
* ಕಾಲಿಗೆ ಕಚ್ಚಿದ ಹಾವನ್ನು ತಿರುಗಿ ಕಚ್ಚಿ ಸಾಯಿಸಿದ
* ಆಸ್ಪತ್ರೆಗೆ ತೆರಳಿ ಚಿಕಿತಸೆಯನ್ನು ಪಡೆದುಕೊಳ್ಳಲಿಲ್ಲ
* ಹಾವನ್ನು ಕಚ್ಚಿದ ವ್ಯಕ್ತಿಗೆ ಏನೂ ಆಗಿಲ್ಲ

Snake bites man in Odisha He bites it back snake dies Odisha mah
Author
Bengaluru, First Published Aug 13, 2021, 5:14 PM IST
  • Facebook
  • Twitter
  • Whatsapp

ಓರಿಸ್ಸಾ(ಆ. 13)  ಹಾವಿನ ದ್ವೇಷ ಹನ್ನೆರಡು ವರುಷ ಎನ್ನುವುದು ಹಳೆಯ ಮಾತು.  ಇಲ್ಲೊಬ್ಬ ತನಗೆ ಕಚ್ಚಿದ ಹಾವಿನ ಮೇಲೆ ದ್ವೇಷ ತೀರಿಸಿಕೊಂಡಿದ್ದಾನೆ.  ಬುಡಕಟ್ಟು ಜನಾಂಗಕ್ಕೆ ಸೇರಿದ  45 ವರ್ಷದ  ವ್ಯಕ್ತಿ ತನಗೆ ಕಚ್ಚಿದ ಹಾವಿಗೆ ವಾಪಸ್ ಕಚ್ಚಿದ್ದಾನೆ.

ಒಡಿಶಾದ ಜಜ್‌ಪುರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಘಟನೆ  ನಡೆದಿದೆ.  ದನಗಡಿ ಬ್ಲಾಕ್ ವ್ಯಾಪ್ತಿಯ ಸಾಲಿಜಂಗಾ ಪಂಚಾಯತ್ ವ್ಯಾಪ್ತಿಯ ಗಾಂಭರಿಪತಿಯಾ ಗ್ರಾಮದ ಕಿಶೋರ್ ಬದ್ರಾ ಬುಧವಾರ ರಾತ್ರಿ ತನ್ನ ಗದ್ದೆಯಲ್ಲಿ ಕೆಲಸ ಮಾಡಿ ಮನೆಗೆ ಮರಳುತ್ತಿದ್ದ. ಈ ವೇಳೆ ಆತನ ಕಾಲಿಗೆ ಹಾವು ಕಚ್ಚಿದೆ. 

ನಾಗರಪಂಚಮಿಯಂದು ಈ ರೀತಿ ಮಾಡಿದರೆ ಕನಸಿನಲ್ಲಿ ಹಾವು ಕಾಣುವುದಿಲ್ಲ

ಸೇಡು ತೀರಿಸಿಕೊಳ್ಳಲು  ಮುಂದಾದ ಕಿಶೋರ್  ಹಾವನ್ನೇ ಹಿಡಿದು ಕಚ್ಚಿದ್ದಾನೆ. ಮನೆಗೆ ಬರುತ್ತಿದ್ದಾಗ ಏನೋ ಒಂದು  ಪ್ರಾಣಿ ಕಾಲಿಗೆ ಕಚ್ಚಿದ ಹಾಗೆ ಆಯಿತು. ತಕ್ಷಣ ಕೈಯಲ್ಲಿದ್ದ ಟಾರ್ಚ್ ನಿಂದ ಬೆಳಕು ಬಿಟ್ಟಾಗ ಹಾವು ಎನ್ನುವುದು ಗೊತ್ತಾಯಿತು. ವಿಷಕಾರಿ ಹಾವು ಎಂದು ಕಂಡುಕೊಂಡೆ.  ಸಿಟ್ಟಿನಿಂದ ಅದನ್ನು ಕಚ್ಚಿ ಕಚ್ಚಿ ಸಾಯಿಸಿದೆ ಎಂದು  ಕಿಶೋರ್ ಹೇಳುತ್ತಾರೆ.

ಸತ್ತ ಹಾವಿನೊಂದಿಗೆ ಊರಿಗೆ ಬಂದು ಪತ್ನಿಗೆ ವಿಚಾರ ತಿಳಿಸಿದೆ.  ಕೆಲವರು ಆತನಿಗೆ ಆಸ್ಪತ್ರೆಗೆ ತೆರಳಲು ಸಲಹೆ ನೀಡಿದರೂ ಕಿಶೋರ್ ಮಾತ್ರ ಸಾಂಪ್ರದಾಯಿಕ ಚಿಕಿತ್ಸೆಯನ್ನೇ ಪಡೆದುಕೊಂಡ. ಇಲ್ಲಿಯವರೆಗೆ ಯಾವುದೇ ಆರೋಗ್ಯ ಸಮಸ್ಯೆ ಆದ ದೂರು ದಾಖಲಾಗಿಲ್ಲ. ಕಿಶೋರ್ ಎಂದಿನಂತೆ ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

 

 

Follow Us:
Download App:
  • android
  • ios