ನವದೆಹಲಿ(ನ.18): ಧೂಮಪಾನಿಗಳು ಹಾಗೂ ಸಸ್ಯಾಹಾರಿಗಳಲ್ಲಿ ಕೊರೋನಾ ಹರಡುವ ಅಪಾಯ ಕಮ್ಮಿ ಎಂದು ಭಾರತ ದೇಶಾದ್ಯಂತ ನಡೆಸಲಾದ ಸೀರೋ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಇದೇ ವೇಳೆ, ‘ಒ’ ರಕ್ತದ ಗುಂಪಿನವರಿಗೆ ಕೊರೋನಾ ಸಾಧ್ಯತೆ ಕಡಿಮೆ. ‘ಎ’ ಹಾಗೂ ‘ಎಬಿ’ ರಕ್ತ ಗುಂಪಿನವರಿಗೆ ಕೊರೋನಾ ಅಪಾಯ ಹೆಚ್ಚು ಎಂದೂ ವೈಜ್ಞಾನಿಕ ಹಾಗೂ ಔದ್ಯಮಿಕ ಸಂಶೋಧನಾ ಸಂಸ್ಥೆ, ತನ್ನ 40 ಕಚೇರಿಗಳ ಮೂಲಕ ನಡೆಸಿದ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ವ್ಯಕ್ತಿಗಳ ರಕ್ತದ ಮಾದರಿ ಸಂಗ್ರಹಿಸಿ ಈ ಸಮೀಕ್ಷೆ ನಡೆಸಲಾಗುತ್ತದೆ. ದೇಶದ 10,427 ವ್ಯಕ್ತಿಗಳ ರಕ್ತ ಮಾದರಿ ಪಡೆದು, ಇವರಲ್ಲಿ ಕೋವಿಡ್‌ ಪ್ರತಿಕಾಯ ಉತ್ಪತ್ತಿ ಆಗಿವೆಯೇ ಎಂದು ಪರೀಕ್ಷಿಸಲಾಗಿದೆ. ಆಗ 1,058 (ಶೇ.10.14) ಜನರಲ್ಲಿ ಪ್ರತಿಕಾಯಗಳು ದೃಢಪಟ್ಟಿವೆ.