ಗ್ಯಾನವಾಪಿ ಶಿವಲಿಂಗ ಒಡೆದು ಕಾರಂಜಿ ನಿರ್ಮಾಣಕ್ಕೆ ಯತ್ನ!

* ಹಿಂದೂ ಅರ್ಜಿದಾರರ ಪರ ವಕೀಲರ ಆರೋಪ

* ಗ್ಯಾನವಾಪಿ ಶಿವಲಿಂಗ ಒಡೆದು ಕಾರಂಜಿ ನಿರ್ಮಾಣಕ್ಕೆ ಯತ್ನ

Shivling in Gyanvapi mosque damaged to make fountain on top upper portion of different colour pod

ವಾರಾಣಸಿ(ಮೇ.27): ಇಲ್ಲಿನ ಗ್ಯಾನವಾಪಿ ಮಸೀದಿಯಲ್ಲಿ ಇತ್ತೀಚೆಗೆ ಪತ್ತೆಯಾದ ಶಿವಲಿಂಗವನ್ನು ವಿರೂಪಗೊಳಿಸಲಾಗಿದೆ ಎಂದು ಹಿಂದೂ ಅರ್ಜಿದಾರರ ಪರ ವಕೀಲ ವಿಷ್ಣು ಜೈನ್‌ ಆರೋಪಿಸಿದ್ದಾರೆ. ಮಸೀದಿಯೊಳಗೆ ಪತ್ತೆಯಾದ ಶಿವಲಿಂಗ ಕಪ್ಪುಕಲ್ಲಿನಿಂದ ನಿರ್ಮಾಣ ಮಾಡಿದ್ದಾಗಿದ್ದು, ಅದರ ಗುಮ್ಮಟದ ಮೇಲೆ ರಂಧ್ರ ಕೊರೆದು ಕಾರಂಜಿಯಾಗಿ ಆಗಿ ಪರಿವರ್ತಿಸುವ ಯತ್ನ ಮಾಡಲಾಗಿದೆ ಎಂದು ಜೈನ್‌ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ಮಸೀದಿಯಲ್ಲಿ ದೊರಕಿರುವ ಶಿವಲಿಂಗ ಮಸ್ಲಿಮರ ನಿಯಂತ್ರಣದಲ್ಲಿದೆ. ಅವರು ಅದನ್ನು ಕಾರಂಜಿ ಎನ್ನುತ್ತಿದ್ದಾರೆ. ಆದರೆ ಕಾರಂಜಿ ಮಾಡಲೆಂದೇ ಶಿವಲಿಂಗವನ್ನು ಅವರು ಒಡೆದಿದ್ದಾರೆ. ಅದರ ಮೇಲೆ ಚಕ್ರಿ ತರಹದ ವಸ್ತುವನ್ನು ಅಳವಡಿಸಿದ್ದಾರೆ ಮತ್ತು ಶಿವಲಿಂಗದ ಮೇಲೆ 5 ಸಾಲುಗಳನ್ನು ಅವರೇ ಕೆತ್ತಿದ್ದಾರೆ. ಕೆಲದಿನಗಳ ಹಿಂದೆ ಚಕ್ರಿಯನ್ನು ಸಾಗಿಸುತ್ತಿದ್ದವರನ್ನು ಸಿಆರ್‌ಪಿಎಫ್‌ ಬಂಧಿಸಿತ್ತು. ಇದನ್ನು ಮೂಲ ನಿರ್ಮಾಣದ ಮೇಲೆ ಗೆರೆಗಳನ್ನು ಕೊರೆಯಲು ಮುಸ್ಲಿಮರು ಬಳಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಮೀಕ್ಷೆಯ ಸಮಯದಲ್ಲಿ ಹಾಜರಿದ್ದ ಹಿಂದೂ ಅರ್ಜಿದಾರ ಸೋಹನ್‌ ಲಾಲ್‌ ಆರ್ಯ, ಶಿವಲಿಂಗ ಕಪ್ಪು ಬಣ್ಣದಲ್ಲಿದೆ. ನಂತರ ಅದನ್ನು ಒಡೆದು ಬೇರೆ ಬಣ್ಣದ ಸಿಮೆಂಟಿನ ಮೇಲ್ಭಾಗವನ್ನು ಅಳವಡಿಸಲಾಗಿದೆ. ಇದರ ಮೇಲೆ ಹೆಚ್ಚುವರಿ ಪದರವನ್ನು ಅಳವಡಿಸಿರುವುದು ಸಮೀಕ್ಷೆಯ ಸಮಯದಲ್ಲಿ ಕಾಣಿಸುತ್ತದೆ ಎಂದು ಆರೋಪಿಸಿದ್ದರು.

ಗ್ಯಾನ್‌ವಾಪಿಯಲ್ಲಿ ದೇಗುಲ ಕುರುಹು!

ಶಿ ವಿಶ್ವನಾಥ ಮಂದಿರದ ಕೆಲ ಭಾಗ ಬೀಳಿಸಿ ಮುಘಲ್‌ ದೊರೆ ಔರಂಗಜೇಬ್‌ ನಿರ್ಮಿಸಿದ್ದ ಎನ್ನಲಾದ ಗ್ಯಾನವಾಪಿ ಮಸೀದಿಯ ಸಮೀಕ್ಷಾ ವರದಿಯನ್ನು ಕೋರ್ಚ್‌ ಕಮಿಷ್ನರ್‌ಗಳು ಗುರುವಾರ ವಾರಾಣಸಿ ಸಿವಿಲ್‌ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಸಲ್ಲಿಸಲಾಗಿದೆ ಎನ್ನಲಾದ ವರದಿಯನ್ನು ಕೆಲವು ವಕೀಲರು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ. ಮಸೀದಿಯು ಈ ಹಿಂದೆ ಹಿಂದೂ ದೇಗುಲವಾಗಿತ್ತು ಎಂಬುದನ್ನು ದೃಢೀಕರಿಸುವ ಸಂಗತಿಗಳಿವೆ ಎಂಬ ಅಂಶಗಳು ವರದಿಯಲ್ಲಿವೆ.

ಸೀಲ್‌ ಮಾಡಲಾಗಿದ್ದ ವರದಿಯನ್ನು ಫೋಟೋ, ವಿಡಿಯೋಗಳನ್ನು ಹೊಂದಿದ ಚಿಪ್‌ನೊಂದಿಗೆ ವಿಶೇಷ ಕೋರ್ಚ್‌ ಕಮಿಷ್ನರ್‌ ವಿಶಾಲ್‌ ಸಿಂಗ್‌ ಅವರು ವಾರಾನಸಿ ಸಿವಿಲ್‌ ಕೋರ್ಚ್‌ಗೆ ಸಲ್ಲಿಸಿದ್ದಾರೆ. ‘ವರದಿಯನ್ನು ಸೀಲ್‌ ಮಾಡಲಾಗಿದೆ. ಇನ್ನೇನಿದ್ದರೂ ಮುಂದಿನ ಕ್ರಮ ಕೋರ್ಚ್‌ ಮೇಲೆ ಅವಲಂಬಿತವಾಗಿದೆ’ ಎಂದು ವಿಶಾಲ್‌ ಹೇಳಿದ್ದಾರೆ. ಆದರೂ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಹಿಂದೂಪರ ವಕೀಲರು ಮಾಧ್ಯಮಗಳ ಮುಂದೆ ಸಂಜೆ ಕೆಲವು ಮಹತ್ವದ ವಿಷಯಗಳನ್ನು ಬಹಿರಂಗಪಡಿಸಿದ್ದು, ಇದು ಹಿಂದೂ ದೇಗುಲ ಆಗಿತ್ತು ಎಂಬ ಸಾಕ್ಷ್ಯಗಳು ಲಭ್ಯವಾಗಿವೆ ಎಂದಿದ್ದಾರೆ.

ಶೇಷನಾಗ ಪತ್ತೆ:

ಕೋರ್ಚ್‌ ಕಮಿಷ್ನರ್‌ಗಳ ತಂಡದಿಂದ ವಜಾ ಆಗಿದ್ದರೂ ಹಿಂದೂ ಪರ ವಕೀಲ ಅಜಯ್‌ ಮಿಶ್ರಾ ಪ್ರತ್ಯೇಕ ವರದಿ ಸಲ್ಲಿಸಿದ್ದಾರೆ. ಈ ಬಗ್ಗೆ ಅವರು ಮಾಧ್ಯಮಗಳ ಜತೆ ಮಾತನಾಡಿ, ‘ದೇವಾಲಯದ ಅವಶೇಷಗಳು, ಸಮೀಕ್ಷೆ ವೇಳೆ ಕಂಡುಬಂದವು. ಇದರಲ್ಲಿ ಶೇಷನಾಗನ ಹೆಡೆಯನ್ನು ನಾನು ಕಂಡೆ. ಈ ಅವಶೇಷಗಳು 500-600 ವರ್ಷದಷ್ಟುಹಳೆಯದಾಗಿರಬಹುದು’ ಎಂದು ತಿಳಿಸಿದ್ದಾರೆ. ಮಸೀದಿ ಆವರಣದಲ್ಲಿ ಗುಮ್ಮಟದ ರೀತಿಯ ಶಿಲೆ (ಶಿವಲಿಂಗ) ಕಂಡುಬಂತು ಎಂದು ಖಚಿತಪಡಿಸಿದ್ದಾರೆ.

ಈ ನಡುವೆ ವಿಶೇಷ ಕೋರ್ಚ್‌ ಕಮಿಷ್ನರ್‌ ವಿಶಾಲ್‌ ಸಿಂಗ್‌ ಮಾತನಾಡಿ, ‘ಸನಾತನ ಧರ್ಮದ ಸಂಕೇತಗಳಾದ ಕಮಲ, ಡಮರು ಹಾಗೂ ತ್ರಿಶೂಲವನ್ನು ಮಸೀದಿಯ ತಳಮಹಡಿ ಗೋಡೆಯ ಮೇಲೆ ಕಂಡೆ’ ಎಂದಿದ್ದಾರೆ.

ಬಿಲ್ವದ ಮರ ಕಾಣೆ:

ಈ ಮುಂಚೆ 1921ರ ದೀನ್‌ ಮೊಹಮ್ಮದ್‌ ಪ್ರಕರಣದ ವಿಚಾರಣೆ ವೇಳೆ ಗ್ಯಾನವಾಪಿ ಮಸೀದಿ ಆವರಣದಲ್ಲಿ ಬಿಲ್ವದ ಮರ ಸೇರಿ 3 ಮರಗಳಿವೆ ಎಂದು ಉಲ್ಲೇಖಿಸಲಾಗಿತ್ತು. ಆರೆ ಬಿಲ್ವದ ಮರ ಇಂದು ಇಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅದು ಕಾರಂಜಿಯಲ್ಲ, ಶಿವಲಿಂಗ

 ‘ಗ್ಯಾನವಾಪಿ ಮಸೀದಿಯಲ್ಲಿ ಪತ್ತೆಯಾಗಿದ್ದು ಶಿವಲಿಂಗವಲ್ಲ, ಕೊಳದೊಳಗಿನ ಕಾರಂಜಿ’ ಎಂಬ ಮುಸ್ಲಿಂ ಸಂಸ್ಥೆಗಳ ಹೇಳಿಕೆಗೆ ಕೋಟ್‌ಗೆ ಹಿಂದೂ ಪರ ವಕೀಲರು ಸಲ್ಲಿಸಿದ ವರದಿಯಲ್ಲಿ ಆಕ್ಷೇಪಿಸಲಾಗಿದೆ. ‘ಕಾರಂಜಿ ಎಂದರೆ ಅದಕ್ಕೆ ನೀರಿನ ಸಂಪರ್ಕ ಇರಬೇಕು. ಆದರೆ ನೀರಿನ ಸಂಪರ್ಕ ಎಲ್ಲೂ ಕಂಡುಬಂದಿಲ್ಲ. ಹೀಗಾಗಿ ಅದು ಶಿವಲಿಂಗ ಎಂದು ಸಾಬೀತಾಗಿದೆ’ ಎಂದು ವಾರಾಣಸಿ ಕೋರ್ಚ್‌ಗೆ ಸಲ್ಲಿಸಲಾದ ಹಿಂದೂ ಪರ ವಕೀಲರ ವರದಿ ಹೇಳಿದೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ‘ಶಿವಲಿಂಗ ಪತ್ತೆ ಆಗಿದೆ’ ಎಂದು ಹಿಂದೂಪರ ವಕೀಲರು ಹೇಳಿದ್ದರು. ಆದರೆ ಅದು ‘ಕೊಳದೊಳಗಿನ ಕಾರಂಜಿ. ಶಿವಲಿಂಗದ ರೀತಿ ಕಾಣುತ್ತದೆ ಅಷ್ಟೇ. ನೀರು ಹೋಗಲು ರಂಧ್ರಗಳಿವೆ’ ಎಂದು ಮುಸ್ಲಿಂ ಮುಖಂಡರು ವಾದಿಸಿದ್ದರು.

Latest Videos
Follow Us:
Download App:
  • android
  • ios