ಮುಂಬೈ(ನ.23): ಮಹಾರಾಷ್ಟ್ರದ ರಾಜಕೀಯ ಕ್ಷಣ ಕ್ಷಣಕ್ಕೊಂದು ರೋಚಕ ತಿರುವು ಪಡೆಯುತ್ತಿದೆ. ಈಗಾಗಲೇ ಅಜಿತ್ ಪವಾರ್ ಹಿಡಿತದಿಂದ ಶರದ್ ಪವಾರ್ ತೆಕ್ಕೆಗೆ ಬಂದಾಗಿದೆ.ಇದೀಗ ಮತ್ತಿಬ್ಬರು ಎನ್’ಸಿಪಿ ಶಾಸಕ ಮರಳಿ ಗೂಡಿಗೆ ಸೇರಿದ್ದಾರೆ.

'ಮಹಾ' ರಾಜಕೀಯದಲ್ಲಿ ರೋಚಕ ತಿರುವು: 'ಸೇನೆ'ಗೆ ಶಾಕ್, ಫಡ್ನವೀಸ್ ಮತ್ತೆ ಸಿಎಂ!
ಎನ್’ಸಿಪಿಯ ಶಾಸಕರಾದ  ಸಂಜಯ್ ಬನ್ಸೋದ್ ಹಾಗೂ ಬಾಬಾಸಾಹೇಬ್ ಪಾಟೀಲ್ ಮರಳಿ ಶರದ್ ಪವಾರ್ ಬಣ ಸೇರಿದ್ದು, ವಿಚಿತ್ರ ಸನ್ನಿವೇಶದಲ್ಲಿ ಶಿವಸೇನೆ ನಾಯಕರು ಅವರನ್ನು ಎನ್’ಸಿಪಿ ಕಚೇರಿ ತಲುಪಿಸಿದ್ದಾರೆ.

ದಿಢೀರ್ ಬೆಳವಣಿಗೆಯಲ್ಲಿ ಅವರನ್ನು ಶಿವಸೇನೆ ನಾಯಕರಾದ ಏಕನಾಥ್ ಶಿಂಧೆ ಹಾಗೂ ಮಿಲಿಂದ್ ನರ್ವೇಕರ್ ಸೇರಿ ಸಂಜಯ್ ಬನ್ಸೋದ್ ಹಾಗೂ ಬಾಬಾಸಾಹೇಬ್ ಪಾಟೀಲ್ ಅವರನ್ನು ಎನ್’ಸಿಪಿ ಕಚೇರಿಗೆ ತಂದಿದ್ದಾರೆ.

ತಮ್ಮ ಬೆಂಬಲ ಕೇವಲ ಶರದ್ ಪವಾರ್ ಅವರಿಗೆ ಎಂದಿರುವ ಇಬ್ಬರೂ ನಾಯಕರು, ಬಿಜೆಪಿ ಜೊತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಶರದ್ ಪವಾರ್ ಕರೆದಿದ್ದ ಶಾಸಕಾಂಗ ಪಕ್ಷದ ಸಭೆಗೆ ಒಟ್ಟು 42 ಶಾಸಕರು ಹಾಜರಾಗಿದ್ದಾರೆ.

ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಉಚ್ಛಾಟನೆಗೊಂಡ ಅಜಿತ್ ಪವಾರ್!

ಈ ಮಧ್ಯೆ ದೇವೇಂದ್ರ ಫಡ್ನವೀಸ್ ಅವರಿಗೆ ಸರ್ಕಾರ ರಚಿಸಲು ಅನುವು ಮಾಡಿಕೊಟ್ಟ ರಾಜ್ಯಪಾಲರ ಕ್ರಮವನ್ನು ಶಿವಸೇನೆ, ಕಾಂಗ್ರೆಸ್-ಎನ್’ಸಿಪಿ ಮೈತ್ರಿಕೂಟ ಸುಪ್ರೀಂಕೋರ್ಟ್’ನಲ್ಲಿ ಪ್ರಶ್ನೆ ಮಾಡಲಿದೆ.

ಬಿಜೆಪಿಗೆ ಜೈ ಎಂದಿದ್ದ ಎನ್‌ಸಿಪಿ ನಾಯಕ ಮರಳಿ ಗುಡಿಗೆ!