ಮುಂಬೈ(ಜ.12): ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಸೋಮವಾರ 486 ಅಂಕಗಳ ಭರ್ಜರಿ ಏರಿಕೆಯೊಂದಿಗೆ 49269 ಅಂಕಗಳಲ್ಲಿ ಮುಕ್ತಾಯವಾಗಿದೆ. ಸೆನ್ಸೆಕ್ಸ್‌ 49000 ಅಂಕಗಳ ಗಡಿ ದಾಟಿದ್ದು ಇದೇ ಮೊದಲು. ಜೊತೆಗೆ ಇದು ಸಂವೇದಿ ಸೂಚ್ಯಂಕದ ಇದುವರೆಗಿನ ಗರಿಷ್ಠ ಮುಕ್ತಾಯ ಮಟ್ಟಕೂಡಾ ಹೌದು.

ಮಧ್ಯಂತರದ ಅವಧಿಯಲ್ಲಿ ಸೆನ್ಸೆಕ್ಸ್‌ 49303 ಅಂಕಗಳವರೆಗೂ ತಲುಪಿತ್ತಾದರೂ, ಅಂತಿಮವಾಗಿ ಶೇ.1ರಷ್ಟುಏರಿಕೆಯೊಂದಿಗೆ 49269 ಅಂಕಗಳಲ್ಲಿ ಮುಕ್ತಾಯವಾಯಿತು. ಇದರೊಂದಿಗೆ ಸೆನ್ಸೆಕ್ಸ್‌ 50000 ಅಂಕಗಳ ಐತಿಹಾಸಿಕ ಗಡಿ ಮುಟ್ಟಲು ಇನ್ನು ಕೇವಲ 730 ಅಂಕಗಳಷ್ಟೇ ಬಾಕಿ ಉಳಿದಂತೆ ಆಗಿದೆ. ಇದೇ ವೇಳೆ ನಿಫ್ಟಿಕೂಡಾ 137 ಅಂಕಗಳ ಏರಿಕೆಯೊಂದಿಗೆ 14484 ಅಂಕ ತಲುಪಿ, ಗರಿಷ್ಠ ಮುಕ್ತಾಯದ ಮತ್ತೊಂದು ದಾಖಲೆ ಬರೆದಿದೆ.

ಏಕೆ ಏರಿಕೆ?

ಕೊರೋನಾದಿಂದ ಗುಣಮುಖರಾಗುವವರ ಸಂಖ್ಯೆ ಹೆಚ್ಚಳ, ಸೋಂಕಿನ ಪ್ರಮಾಣ ಇಳಿಕೆ, ಜ.16ರಿಂದ ಲಸಿಕೆ ವಿತರಣೆ, ಕಾರ್ಪೋರೆಟ್‌ ಸಂಸ್ಥೆಗಳ ಆದಾಯ ಏರಿಕೆ, ರುಪಾಯಿ ಮೌಲ್ಯ ಚೇತರಿಕೆ, ವಿದೇಶಿ ಹೂಡಿಕೆಯಲ್ಲಿ ಹೆಚ್ಚಳ.