Asianet Suvarna News Asianet Suvarna News

'ಕುಂಭ ಮೇಳ, ಚುನಾವಣೆ..  ಸುಪ್ರೀಂ ಕೋರ್ಟ್ ಮೊದಲೇ ಬರಬೇಕಿತ್ತು'

ಕೊರೋನಾ ಎರಡನೇ ಅಲೆ ಅಬ್ಬರ/ ಸುಪ್ರೀಂ ಕೋರ್ಟ್  ಈ ಮೊದಲೇ ಮಧ್ಯ ಪ್ರವೇಶ ಮಾಡಿದ್ದರೆ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ/ ಕೇಂದ್ರದ ನಾಐಕತ್ವ ಶಕ್ತಿ ಕಳೆದುಕೊಂಡಿದೆ/ ಶಿವಸೇನೆ ಆರೋಪ

SC should intervened during poll rallies, Kumbh Mela, says Sena mah
Author
Bengaluru, First Published Apr 26, 2021, 12:00 AM IST

ಮುಂಬೈ (ಏ. 25) ಕೊರೋನಾ ಕಾಣದಲ್ಲಿ ಚುನಾವಣೆ ಮೆರವಣಿಗೆ ಮತ್ತು ಕುಂಭಮೇಳ ನಡೆಸಿದ  ಬಗ್ಗೆ ಶಿವಸೇನೆ ಅಸಮಾಧಾನ ಹೊರಹಾಕಿದೆ.  ಸುಪ್ರೀಂ ಕೋರ್ಟ್ ಇದಕ್ಕೂ ಮುನ್ನವೇ ಮಧ್ಯ ಪ್ರವೇಶ ಮಾಡಿದಿದ್ದರೆ ಪರಿಸ್ಥತಿ ಇಷ್ಟು ಬಿಗಡಾಯಿಸುತ್ತಿರಲಿಲ್ಲ ಎಂದಿದೆ.

ಆಮ್ಲ ಜನಕ ಕೊರತೆ ನೀಗಿಸಲು ಕೇಂದ್ರ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ  ಎಂದು ನ್ಯಾಯಾಲಯ ಪ್ರಶ್ನೆ ಮಾಡಿದೆ.  ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಈ ವಿಚಾರವನ್ನು ಎತ್ತಿಕೊಂಡಿದೆ. 

ಮದುವೆ ವೇಳೆ ಮಾಸ್ಕ್ ಧರಿಸದ ವಧುವಿಗೆ ದಂಡ

ಹರಿದ್ವಾರದ ಜನ ನಿರ್ಲಕ್ಷಕ್ಕೆ ಬಲಿಯಾಗುವ ಕೆಲಸ ಇರಲಿಲ್ಲ ಎಂದು ಹೇಳಿದೆ.  ದೆಹಲಿ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ, ಆಕ್ಸಿಜನ್ ಸಿಗುತ್ತಿಲ್ಲ.. ಇಂಥ ಸ್ಥಿತಿ ಬರುತ್ತದೆ ಎಂದು ಗೊತ್ತಿರಲಿಲ್ಲವೇ? ಎಂದು ಪ್ರಶ್ನೆ ಮಾಡಿದೆ. ಈ ಪರಿಸ್ಥಿತಿಗೆ ಕೇಂದ್ರ ಸರ್ಕಾರ ಕಾರಣವಲ್ಲವೇ? ಎಂದು ಕೇಳಿದೆ.

ಮುಂಬೈ, ವಿಹಾರ್, ನಾಸಿಕ್, ಬಾಂದ್ರಾದಲ್ಲಿನ ಪರಿಸ್ಥಿಯ ಬಗ್ಗೆಯೂ ವಿಷಾದ ವ್ಯಕ್ತಪಡಿಸಿದೆ.  ದೇಶದ ಅಗ್ರ ನಾಯಕತ್ವ ಸಂಪೂರ್ಣ ವಿಫಲವಾಗಿದೆ ಎಂದು ಸಂಜಯ್ ರಾವತ್ ಆರೋಪಿಸಿದ್ದಾರೆ.

ರಾಜಕಾರಣವನ್ನು ಮರೆತು ಜನರ ಒಳಿತಿಗೆ ಕೆಲಸ ಮಾಡಬೇಕು.  ಈ ಮಾತು ಎಲ್ಲ ರಾಜಕೀಯ ಪಕ್ಷಗಳಿಗೂ ಅನ್ವಯವಾಗುತ್ತದೆ ಎಂದು ಶಿವಸೇನೆ ಹೇಳಿದೆ. 

 

Follow Us:
Download App:
  • android
  • ios