ಮುಂಬೈನ ಎಸ್‌ಆರ್‌ಎ ಯೋಜನೆಗಳಲ್ಲಿ ಮುಸ್ಲಿಂ ಬಿಲ್ಡರ್‌ಗಳು ಹಿಂದೂ ಅರ್ಜಿದಾರರನ್ನು ತಿರಸ್ಕರಿಸುತ್ತಿದ್ದಾರೆ ಎಂದು ಸಂಜಯ್ ನಿರುಪಮ್ ಆರೋಪಿಸಿದ್ದಾರೆ. ಇದು ಹೌಸಿಂಗ್ ಜಿಹಾದ್ ಎಂದು ಅವರು ಹೇಳಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಮುಂಬೈ (ಫೆ.22): ಮುಂಬೈನ ಎಸ್‌ಆರ್‌ಎ (ಕೊಳೆಗೇರಿ ಪುನರ್ವಸತಿ ಪ್ರಾಧಿಕಾರ) ಯೋಜನೆಗಳಲ್ಲಿ ಹಿಂದೂ ಅರ್ಜಿದಾರರನ್ನು ಮುಸ್ಲಿಂ ಬಿಲ್ಡರ್‌ಗಳು ಸಾರಾಸಗಟಾಗಿ ತಿರಸ್ಕರಿಸುತ್ತಿದ್ದಾರೆ ಎಂದು ಶಿವಸೇನಾ ನಾಯಕ ಸಂಜಯ್ ನಿರುಪಮ್ ಶುಕ್ರವಾರ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಅದು ಮಾತ್ರವಲ್ಲದೆ, ಇದನ್ನು ಹೌಸಿಂಗ್ ಜಿಹಾದ್ ಎಂದೂ ಕರೆದಿದ್ದಾರೆ. ಈ ವಿಚಾರದ ಬಗ್ಗೆ ಗಮನ ನೀಡುವಂತೆ ಮಹಾರಾಷ್ಟ್ರದ ವಸತಿ ಸಚಿವ ಹಾಗೂ ಉಪಮುಖ್ಯಮಂತ್ರಿಯೂ ಆಗಿರುವ ಏಕನಾಥ್ ಶಿಂಧೆ ಮತ್ತು ಎಸ್‌ಆರ್‌ಎ ಮುಖ್ಯಸ್ಥರಿಗೆ ಪತ್ರ ಬರೆದಿರುವುದಾಗಿ ಸಂಜಯ್ ನಿರುಪಮ್ ತಿಳಿಸಿದ್ದಾರೆ. ಪಶ್ಚಿಮ ಉಪನಗರಗಳು ಮತ್ತು ಗೋವಂಡಿ, ಮಂಖುರ್ಡ್, ಕುರ್ಲಾ, ಸಾಕಿ ನಾಕಾ ಮತ್ತು ಬಾಂದ್ರಾದಂತಹ ಪ್ರದೇಶಗಳಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿವೆ ಎಂದು ನಿರುಪಮ್ ಹೇಳಿದ್ದಾರೆ.
"ಮುಂಬೈನಲ್ಲಿ 'ವಸತಿ ಜಿಹಾದ್' ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು, ಇದರಲ್ಲಿ ಮುಸ್ಲಿಂ ಬಿಲ್ಡರ್‌ಗಳು ಪ್ರಮುಖವಾಗಿ ಭಾಗಿಯಾಗಿದ್ದಾರೆ. ಈ ಬಿಲ್ಡರ್‌ಗಳು ಮುಸ್ಲಿಂ ಪ್ರಾಬಲ್ಯವಿರುವ ಮತ್ತು ಹಿಂದೂಗಳು ಇರುವ ಹತ್ತಿರದ ಪ್ರದೇಶಗಳಲ್ಲಿ ಸಕ್ರಿಯರಾಗಿದ್ದಾರೆ" ಎಂದು ನಿರುಪಮ್ ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಮುಸ್ಲಿಂ ಬಿಲ್ಡರ್‌ಗಳು ಎಸ್‌ಆರ್‌ಎ ಯೋಜನೆಗಳಲ್ಲಿ ಹೆಚ್ಚಾಗಿ ಮುಸ್ಲಿಮರನ್ನೇ ಸೇರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ ನಿರುಪಮ್, "ಈ ಕ್ರಮವು ಅನೇಕ ಪ್ರದೇಶಗಳಲ್ಲಿ ಹಿಂದೂಗಳನ್ನು ಅಲ್ಪಸಂಖ್ಯಾತರನ್ನಾಗಿ ಮಾಡುತ್ತಿದೆ, ಆದರೆ ಮುಸ್ಲಿಮರನ್ನು ಬಹುಸಂಖ್ಯಾತರನ್ನಾಗಿ ಮಾಡುತ್ತಿದೆ" ಎಂದು ಹೇಳಿದ್ದಾರೆ.
"ಪ್ರಸ್ತುತ ಮುಂಬೈನಲ್ಲಿ 600 ಎಸ್‌ಆರ್‌ಎ ಯೋಜನೆಗಳು ಚಾಲ್ತಿಯಲ್ಲಿದ್ದು, ಅವುಗಳಲ್ಲಿ ಶೇಕಡಾ 10 ರಷ್ಟು ಮುಸ್ಲಿಂ ಬಿಲ್ಡರ್‌ಗಳು ಭಾಗಿಯಾಗಿದ್ದಾರೆ ಮತ್ತು ಎಲ್ಲರೂ ಅಂತಹ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ನಗರದ ಭೌಗೋಳಿಕತೆಯನ್ನು ದೊಡ್ಡ ರೀತಿಯಲ್ಲಿ ಬದಲಾಯಿಸುವುದು ಯೋಜನೆಯಾಗಿದೆ" ಎಂದು ನಿರುಪಮ್ ಆರೋಪಿಸಿದರು.
ಬಾಂಗ್ಲಾದೇಶಿ ಪ್ರಜೆಗಳಿಗೆ ಶಾಶ್ವತ ಮನೆಗಳನ್ನು ನೀಡುವ ಅಭಿಯಾನವನ್ನು ಮುಸ್ಲಿಂ ಬಿಲ್ಡರ್‌ಗಳು ನಡೆಸುತ್ತಿದ್ದಾರೆ ಎಂದು ಸೇನಾ ನಾಯಕ ಹೇಳಿದ್ದಾರೆ. "ಕಿರಿಯ ಅಧಿಕಾರಿಗಳ ಮಟ್ಟದಲ್ಲಿ ದೊಡ್ಡ ಹಗರಣ ನಡೆಯುತ್ತಿದೆ' ಎಂದು ಆರೋಪಿಸಿದ್ದಾರೆ.
ಈ ನಡುವೆ, ಅಸಾದುದ್ದೀನ್ ಓವೈಸಿ ನೇತೃತ್ವದ AIMIM ರಾಷ್ಟ್ರೀಯ ವಕ್ತಾರ ವಾರಿಸ್ ಪಠಾಣ್ ನಿರುಪಮ್ ವಿರುದ್ಧ ವಾಗ್ದಾಳಿ ನಡೆಸಿ, ಇದು ಸಂಪೂರ್ಣ ಅಸಂಬದ್ಧ ಎಂದಿದ್ದಾರೆ."ಅವರು ಸುಳ್ಳು ಹೇಳುತ್ತಿದ್ದಾರೆ ಮತ್ತು ಇದು ಸಂಪೂರ್ಣ ಅಸಂಬದ್ಧ" ಎಂದು ಪಠಾಣ್ ತಿಳಿಸಿದ್ದಾರೆ. "ಮೊದಲು ಅವರು ಲವ್ ಜಿಹಾದ್ ಆರೋಪ ಮಾಡಿದರು, ನಂತರ ಭೂ ಜಿಹಾದ್ ಆರೋಪ ಮಾಡಿದರು, ಮತ್ತು ಈಗ ಅವರು ಹೌಸಿಂಗ್ ಜಿಹಾದ್ ಆರೋಪ ಮಾಡುತ್ತಿದ್ದಾರೆ" ಎಂದು ಪಠಾಣ್ ಹೇಳಿದರು, "ಅವರಿಗೆ ಜಿಹಾದ್‌ನ ಅರ್ಥವೇನೆಂದು ತಿಳಿದಿದೆಯೇ?" ಎಂದು ಹೇಳಿದರು.
ಲವ್ ಜಿಹಾದ್ ಪ್ರಕರಣ: 3 ಮಕ್ಕಳ ಮುಸ್ಲಿಂ ತಂದೆ ಜೊತೆ ಓಡಿಹೋದ 22ರ ಹುಡುಗಿ ದೀಕ್ಷಾ!
ಕಳೆದ ತಿಂಗಳು ಸೈಫ್ ಅಲಿ ಖಾನ್ ಮೇಲೆ ನಡೆದ ದಾಳಿಯ ಬಳಿಕ ಅವರಿಗೆ ಆರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆದಿತ್ತು. ತ್ವರಿತ ಚೇತರಿಕೆಯ ಬಗ್ಗೆ ನಿರುಪಮ್ ಪ್ರಶ್ನೆ ಎತ್ತಿದ್ದರು. "ಲೀಲಾವತಿ ಆಸ್ಪತ್ರೆಯ ವೈದ್ಯರು, ಚಾಕು ಸೈಫ್ ಅಲಿ ಖಾನ್ ಅವರ ಬೆನ್ನಿನೊಳಗೆ 2.5 ಇಂಚುಗಳಷ್ಟು ನುಸುಳಿದೆ ಎಂದು ಹೇಳಿದರು. ಇಷ್ಟು ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿ ಹೇಗೆ ಬೇಗನೆ ಚೇತರಿಸಿಕೊಳ್ಳಬಹುದು ಎಂಬುದನ್ನು ಅವರು ಸ್ಪಷ್ಟಪಡಿಸಬೇಕು" ಎಂದು ನಿರುಪಮ್ ಹೇಳಿದ್ದರು.
ಯುಪಿ ಬಳಿಕ ಲವ್ ಜಿಹಾದ್ ವಿರುದ್ಧ ಕ್ರಮಕ್ಕೆ ಮಹಾರಾಷ್ಟ್ರ ಸಜ್ಜು, ಶಾ ಭೇಟಿ ಬೆನ್ನಲ್ಲೇ ಫಡ್ನವೀಸ್ ಅಧಿಸೂಚನೆ
