ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಕಾರ್ಮಿಕ ಶಿಬಿರದಲ್ಲಿ ನಡೆಸಿದ ಪೊಲೀಸರ ದಾಳಿಯಲ್ಲಿ ಆರೋಪಿ ಸಿಕ್ಕಿಬಿದ್ದರು.

 ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಕಾರ್ಮಿಕ ಶಿಬಿರದಲ್ಲಿ ನಡೆಸಿದ ಪೊಲೀಸರ ದಾಳಿಯಲ್ಲಿ ಆರೋಪಿ ಸಿಕ್ಕಿಬಿದ್ದರು.

ಬಂಧನ ಬಳಿಕ ಆರೋಪಿಯ ವಿಚಾರಣೆ ವೇಳೆ ಮುಂಬೈ ಪೊಲೀಸರು ಶಾಕ್ ಆಗಿದ್ದಾರೆ. ಏಕೆಂದರೆ ವಿಚಾರಣೆ ವೇಳೆ ಆರೋಪಿ ತನ್ನ ನಿಜವಾದ ಚಹರೆಯನ್ನು ಬಹಿರಂಗಪಡಿಸುತ್ತಿಲ್ಲ. ಯಾರು ಎಲ್ಲಿಯವನು? ಏಕೆ ದಾಳಿ ಮಾಡಿದ್ದು..? ತನ್ನ ಹೆಸರನ್ನು ಸೇರಿ ಇದ್ಯಾವುದನ್ನೂ ಬಹಿರಂಗಪಡಿಸದೇ ಪದೇ ಪದೇ ಹೆಸರು ಬದಲಿಸಿ ಪೊಲೀಸರ ದಿಕ್ಕು ತಪ್ಪಿಸುತ್ತಿದ್ದಾರೆ ಖತರ್ನಾಕ್‌ ಖದೀಮರು. ಮೂಲಗಳ ಪ್ರಕಾರ, ಆರೋಪಿಯು ಅಕ್ರಮ ಬಾಂಗ್ಲಾದೇಶಿಯೂ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಆರೋಪಿ ನಿರಂತರವಾಗಿ ತನ್ನ ಹೆಸರನ್ನು ಬದಲಾಯಿಸುತ್ತಿದ್ದಾನೆ. ಮೂಲಗಳ ಪ್ರಕಾರ, ಕೆಲವು ಸಮಯದ ಹಿಂದೆ ಅವನು ತನ್ನ ಹೆಸರು ಮೊಹಮ್ಮದ್ ಸಜ್ಜದ್ ಮತ್ತು ಇದು ತನ್ನ ನಿಜವಾದ ಹೆಸರು ಎಂದು ಪೊಲೀಸರಿಗೆ ತಿಳಿಸಿದ್ದನು. ಆದರೆ ಇನ್ನೊಮ್ಮೆ ಬೇರೊಂದು ಹೆಸರು ತಿಳಿಸಿದ್ದಾನೆ. ಆರೋಪಿಗಳು ಬಾಂಗ್ಲಾದೇಶದಿಂದ ಸಿಲಿಗುರಿ ಮೂಲಕ ಮುಂಬೈಗೆ ಬಂದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಇದಕ್ಕೆ ಇಂಬು ಕೊಡುವಂತೆ ಬಂಧಿಸಿದ ಆರೋಪಿಗಳ ಬಳಿ ಯಾವುದೇ ಭಾರತೀಯ ದಾಖಲೆಗಳು ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ನಿಜವಾದ ಹೆಸರು ಅವನ ವಿಳಾಸ ಪರಿಶೀಲಿಸಲು ಪೊಲೀಸರು ಪ್ರಯತ್ನಿಸಿದ್ದಾರೆ. ಆದರೆ ಆರೋಪಿಗಳ ಬಳಿ ಆಧಾರ್ ಕಾರ್ಡ್, ಮತದಾರರ ಕಾರ್ಡ್ ಸೇರಿದಂತೆ ಭಾರತೀಯರು ಎನ್ನುವದಕ್ಕೆ ಯಾವುದೇ ದಾಖಲೆಗಳು ಪತ್ತೆಯಾಗಿಲ್ಲ. ಈ ಹಿಂದೆ ಆರೋಪಿಗಳು ವಿಜಯ್ ದಾಸ್, ಬಿಜೋಯ್ ದಾಸ್, ಮೊಹಮ್ಮದ್ ಇಲ್ಯಾಸ್ ಸೇರಿದಂತೆ ಹಲವು ಹೆಸರುಗಳನ್ನು ಬಳಸಿಕೊಂಡಿದ್ದರು.

ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?

ಸೈಫ್ ಅಲಿ ಖಾನ್ ಮೇಲೆ ದಾಳಿ ಬಳಿಕ ಆರೋಪಿ ತನ್ನ ಫೋನ್ ಸ್ವಿಚ್ ಆಫ್ ಮಾಡಿದ್ದಾನೆ. ಇದಾದ ಬಳಿಕ ಫೋನ್ ಸ್ವಿಚ್ ಆನ್ ಮಾಡಿ ಕರೆ ಮಾಡಿದ್ದಾರೆ. ಸಂಭಾಷಣೆ ಮುಗಿದ ನಂತರ, ಅವರು ಮತ್ತೆ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ. ಅಲ್ಲದೇ ಮಾರುಕಟ್ಟೆಯಲ್ಲಿ ಅಥವಾ ದಾರಿಯಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಕಂಡಾಗಲೆಲ್ಲಾ ಆರೋಪಿ ತನ್ನ ಮುಖವನ್ನು ಮರೆಮಾಚುತ್ತಿರುವುದು ಕಂಡುಬಂದಿದೆ. ಪೊಲೀಸರು ಅವನ ಫೋನ್ ಲೋಕೇಷನ್ ಜಾಡು ಹಿಡಿದು ಬೆನ್ನುಹತ್ತಿದ್ದ ಮುಂಬೈ ಪೊಲೀಸರು. ಆರೋಪಿಗಳು ಕಂಡುಬಂದಲ್ಲೆಲ್ಲಾ ಸಕ್ರಿಯ ಮೊಬೈಲ್ ಸಂಖ್ಯೆಗಳ ಡೇಟಾವನ್ನು ಸಂಗ್ರಹಿಸಿದ್ದ ಪೊಲೀಸರು.

ಮುಂಬೈ ಪಬ್‌ನಲ್ಲಿ ಕೆಲಸ:

ಆರೋಪಿಗಳು ಈ ಹಿಂದೆ ಮುಂಬೈನ ಪಬ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈತ ಪಶ್ಚಿಮ ಬಂಗಾಳದ ನಾಡಿಯಾ ನಿವಾಸಿ ಎಂದು ಮೊದಲು ಹೇಳಲಾಗಿತ್ತು. ಆದರೆ ನಿಜವಾದ ಹೆಸರು, ವಿಳಾಸ ಇನ್ನುವರೆಗೆ ಬಾಯಿಬಿಡದ ಆರೋಪಿಗಳು. 

 ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದು, ಆರೋಪಿಗಳ ಕಸ್ಟಡಿಗೆ ಕೋರಲಾಗಿದೆ. ಪೊಲೀಸರು ಆರೋಪಿಯನ್ನು ಮಹಾರಾಷ್ಟ್ರದ ಥಾಣೆಯ ಹಿರಾನಂದನಿ ಪ್ರದೇಶದಲ್ಲಿ ಬಂಧಿಸಿದ್ದಾರೆ. ಸೈಫ್ ಮನೆಗೆ ಕಳ್ಳತನ ಮಾಡಲು ಹೋಗಿದ್ದೆ ಎಂದು ಹೇಳಿದ್ದಾನೆ. ಆದರೆ ಎಲ್ಲಿಂದ ಬಂದಿದ್ದಾರೆ ಎಂಬುದು ಸ್ಪಷ್ಟಪಡಿಸುತ್ತಿಲ್ಲ.