ಮಾಸ್ಕೋ(ಏ.05): ಕಟ್ಟಡಕ್ಕೆ ಬೆಂಕಿ ಬಿದ್ದರೆ ಮೊದಲು ನಮ್ಮ ಪ್ರಾಣ ರಕ್ಷಣೆಗೆ ಮುಂದಾಗುತ್ತೇವೆ. ಆದರೆ, ರಷ್ಯಾದ ಆಸ್ಪತ್ರೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದರೂ ವೈದ್ಯರು ಧೃತಿಗೆಡದೇ ರೋಗಿಯೊಬ್ಬನಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.

ಏ.2 ರಂದು ರಷ್ಯಾದ ಬ್ಯಾಗೊವೆಶ್ಚೆನ್ಸ್ ನಗರದಲ್ಲಿನ 115 ವರ್ಷ ಹಳೆಯ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಆದರೆ, ಈ ವೇಳೆ ವೈದ್ಯರು ಹೃದಯ ಶಸ್ತ್ರ ಚಿಕಿತ್ಸೆಯನ್ನು ನೆರವೇರಿಸುತ್ತಿದ್ದರು.

ಆಸ್ಪತ್ರೆಗೆ ಬೆಂಕಿ ಬಿದ್ದಿದ್ದರೂ ವೈದ್ಯರು ಶಸ್ತ್ರ ಚಿಕಿತ್ಸೆಯನ್ನು ಪೂರ್ಣಗೊಳಿಸಿ, ರೋಗಿಯನ್ನು ಸುರಕ್ಷಿತವಾಗಿ ಇನ್ನೊಂದು ಕಡೆ ಸ್ಥಳಾಂತರಿಸಿದ್ದಾರೆ. ವೈದ್ಯರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.