ಮುಂಬೈ(ಏ.05):  ಮುಕೇಶ್‌ ಅಂಬಾನಿ ಮನೆ ಮುಂದೆ ಪತ್ತೆಯಾದ ಕಾರು ಬಾಂಬ್‌ ಮತ್ತು ಅದರ ಮಾಲೀಕ ಮನ್ಸೂಕ್‌ ಹಿರೇನ್‌ ಅವರ ನಿಗೂಢ ಸಾವಿನ ಪ್ರಕರಣದಲ್ಲಿ ಸಿಲುಕಿರುವ ಪೊಲೀಸ್‌ ಅಧಿಕಾರಿ ಸಚಿನ್‌ ವಾಝೆ ಬಂಧನದ 1 ವಾರದ ಬಳಿಕ ವಾಝೆ ಬ್ಯಾಂಕ್‌ ಖಾತೆಯಿಂದ 26.50 ಲಕ್ಷ ರು. ತೆಗೆಯಲಾಗಿರುವ ವಿಚಾರವನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದಿಂದ ಬಯಲಾಗಿದೆ.

ಈ ಸಂಬಂಧ ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ಎನ್‌ಐಎ ತಂಡ, ‘ಈ ಪ್ರಕರಣದಲ್ಲಿ ಬಂಧನವಾದ 1 ವಾರದ ಬಳಿಕ ವಾಝೆ ತನ್ನ ಆಪ್ತನ ಜೊತೆ ಹೊಂದಿದ್ದ ಜಂಟಿ ಬ್ಯಾಂಕ್‌ ಖಾತೆಯಿಂದ 26.50 ಲಕ್ಷ ರು. ಹಣ ತೆಗೆಯಲಾಗಿದೆ.

ಅಂದರೆ ಮಾ.14ರಂದು ವಾಝೆ ಬಂಧನವಾಗಿದ್ದು, ಮಾ.18ರಂದು ಬ್ಯಾಂಕ್‌ನಿಂದ ಹಣ ಹಾಗೂ ದೋಷಾರೋಪಕ್ಕೆ ಸಂಬಂಧಿಸಿದ ಕೆಲ ವಸ್ತುಗಳನ್ನು ಬ್ಯಾಂಕ್‌ ಲಾಕರ್‌ನಿಂದ ಹೊರತೆಗೆಯಲಾಗಿದೆ’ ಎಂದಿದೆ. ಆದರೆ ವಾಝೆ ಜೊತೆ ಜಂಟಿ ಖಾತೆ ಹೊಂದಿದ ವ್ಯಕ್ತಿಯ ಹೆಸರನ್ನು ಎನ್‌ಐಎ ಬಹಿರಂಗಪಡಿಸಿಲ್ಲ.