ಒನ್ ನೇಷನ್, ಒನ್ ರೇಟ್ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ  ಒತ್ತಡ ಹೆಚ್ಚಿದ ಹಿನ್ನಲೆ| ಎರಡು ಕಂಪನಿಗಳ ಜೊತೆ ಮಾತುಕತೆ ನಡೆಸಿರೋ ಕೇಂದ್ರ ಸರ್ಕಾರದ ಅಧಿಕಾರಿಗಳು| ಈ ಬಗ್ಗೆ ಪರಿಶೀಲಿಸೋದಾಗಿಯೂ ಕಂಪನಿಗಳಿಂದ ಭರವಸೆ

ನವದೆಹಲಿ(ಏ.28) ಕೊರೋನಾ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಭಾರತದ ಎರಡು ಸ್ವದೇಶೀ ಲಸಿಕೆಗಳಾದ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ದರ ಸದ್ಯ ಸದ್ದು ಮಾಡುತ್ತಿದೆ. ಕೇಂದ್ರ ಹಾಗೂ ರಾಜ್ಯಗಳಿಗೆ ವಿಭಿನ್ನ ದರದಲ್ಲಿ ಮಾರಾಟವಾಗುತ್ತಿರುವ ಹಿನ್ನೆಲೆ, ಒನ್ ನೇಷನ್, ಒನ್ ರೇಟ್ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಿದೆ.

ಹೌದು ದೇಶಾದ್ಯಂತ ಬಿರುಸಿನಿಂದ ನಡೆಯುತ್ತಿರುವ ಲಸಿಕೆ ಅಭಿಯಾನದಲ್ಲಿ ಸೀರಂ ಹಾಗೂ ಭಾರತ್‌ ಬಯೋಟೆಕ್‌ನ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆ ಹಾಕಲಾಗುತ್ತಿದೆ. ಈಗಾಗಲೇ ನಲ್ವತ್ತೈದಕ್ಕೂ ಮೇಲಿನವರಿಗೆ ಲಸಿಕೆ ಹಂಚಲಾಗಿದ್ದು, ಮೇ 1ರಿಂದ ಹದಿನೆಂಟು ವರ್ಷಕ್ಕಿಂತ ಮೇಲಿನವರಿಗೆ ಲಸಿಕೆ ನೀಡುವ ಕಾರ್ಯ ಆರಂಭವಾಗಲಿದೆ. ಹೀಗಿರುವಾಗ ಲಸಿಕೆ ದರ ಒಂದೇ ರೀತಿ ನಿಗದಿಪಡಿಸುವಂತೆ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆ ಎರಡು ಕಂಪನಿಗಳ ಜೊತೆ ಕೇಂದ್ರದ ಅಧಿಕಾರಿಗಳು ಮಾತುಕತೆ ಆರಂಭಿಸಿದ್ದಾರೆ. ಕೇಂದ್ರದ ಮಾತುಕತೆ ಬೆನ್ನಲ್ಲೇ ಈ ಬಗ್ಗೆ ಪರಿಶೀಲಿಸೋದಾಗಿ ಕಂಪನಿಗಳು ಭರವಸೆ ನೀಡಿವೆ. 

"

ಕೇಂದ್ರ ಸರ್ಕಾರಕ್ಕೆ ಎರಡು ಕಂಪನಿಗಳು 150 ರೂಪಾಯಿಗೆ ಒಂದು ಡೋಸ್ ಮಾರಾಟ ಮಾಡುತ್ತಿವೆ. ಅದರಂತೆ ರಾಜ್ಯಗಳಿಗೂ ಮಾರಾಟ ಮಾಡಬೇಕು ಎಂಬ ಒತ್ತಡ ಹೆಚ್ಚಾಗಿದೆ. ಕೇಂದ್ರ ಮಾತು ಫಲಶೃತಿಯಾದರೆ ಮೇ 1 ರ ಒಳಗಾಗಿ ವ್ಯಾಕ್ಸಿನ್ ದರದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona