Asianet Suvarna News Asianet Suvarna News

ಕಪ್ಪು ಹಣ ಹೊಂದಿದವ್ರಿಗೆ ರೆಡ್‌ ಕಾರ್ಪೆಟ್‌ ಹಾಸಲಾಗಿದೆ: 2 ಸಾವಿರ ರೂ. ನೋಟು ಹಿಂಪಡೆತಕ್ಕೆ ಚಿದಂಬರಂ ಟೀಕೆ

ಕಪ್ಪು ಹಣವನ್ನು ಬಹಿರಂಗಪಡಿಸಲು ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲಾಗುತ್ತಿದೆ ಎಂದು ಕೇಂದ್ರ ಸರ್ಕಾರವನ್ನು ಚಿದಂಬರಂ ಲೇವಡಿ ಮಾಡಿದ್ದಾರೆ.

red carpet for black money keepers p chidambaram on 2000 rs note rule ash
Author
First Published May 22, 2023, 1:47 PM IST

ನವದೆಹಲಿ (ಮೇ 22, 2023): 2,000 ರೂ. ನೋಟು ಚಲಾವಣೆಯನ್ನು ಆರ್‌ಬಿಐ ಹಿಂಪಡೆದಿದೆ. ಮೋದಿ ಸರ್ಕಾರದ ಈ ನಿಧಾರವನ್ನು ಮೂರ್ಖತನ" ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಹೇಳಿದ್ದಾರೆ. ಅಲ್ಲದೆ, ಜನರು ಕಪ್ಪು ಹಣವನ್ನು ಸುಲಭವಾಗಿ ಸಂಗ್ರಹಿಸಲು ಸಹಾಯ ಮಾಡಿದೆ. ಈಗ, ಈ ಜನರಿಗೆ ತಮ್ಮ ಕರೆನ್ಸಿ ವಿನಿಮಯ ಮಾಡಿಕೊಳ್ಳಲು ರೆಡ್ ಕಾರ್ಪೆಟ್ ಹಾಸಲಾಗಿದೆ ಎಂದೂ ಮಾಜಿ ಹಣಕಾಸು ಸಚಿವರು ಹೇಳಿದರು.

2016 ರ ನೋಟು ಅಮಾನ್ಯೀಕರಣದ ನಂತರ ಪರಿಚಯಿಸಲಾದ ₹ 2,000 ನೋಟು ರದ್ದುಪಡಿಸುವ ಸರ್ಕಾರದ ನಿರ್ಧಾರದ ಕುರಿತು ಸರಣಿ ಟ್ವೀಟ್‌ ಮಾಡಿರುವ ಚಿದಂಬರಂ, ಕಪ್ಪು ಹಣವನ್ನು ಬಹಿರಂಗಪಡಿಸಲು ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲಾಗುತ್ತಿದೆ ಎಂದು ಕೇಂದ್ರ ಸರ್ಕಾರವನ್ನು ಲೇವಡಿ ಮಾಡಿದ್ದಾರೆ. ‘’₹ 2,000 ನೋಟುಗಳನ್ನು ಬದಲಾಯಿಸಿಕೊಳ್ಳಲು ಯಾವುದೇ ಗುರುತು, ನಮೂನೆಗಳು ಮತ್ತು ಪುರಾವೆಗಳ ಅಗತ್ಯವಿಲ್ಲ ಎಂದು ಬ್ಯಾಂಕ್‌ಗಳು ಸ್ಪಷ್ಟಪಡಿಸಿವೆ, ಈ ಮೂಲಕ ಕಪ್ಪುಹಣವನ್ನು ಬಹಿರಂಗಪಡಿಸಲು ₹ 2000 ನೋಟುಗಳನ್ನು ಹಿಂತೆಗೆದುಕೊಳ್ಳಲಾಗುತ್ತಿದೆ ಎಂಬ ಬಿಜೆಪಿಯ ಹೇಳಿಕೆಯನ್ನು ಸುಳ್ಳು ಮಾಡಿದೆ’’ ಎಂದು ಚಿದಂಬರಂ ಟ್ವೀಟ್‌ ಮಾಡಿದ್ದಾರೆ.

ಇದನ್ನು ಓದಿ: 2 ಸಾವಿರ ರೂ. ನೋಟುಗಳನ್ನೇ ಕೊಟ್ಟು 5 ಲಕ್ಷಕ್ಕೂ ಹೆಚ್ಚು ಬೆಲೆಬಾಳೋ ಚಿನ್ನದ ಆಭರಣ ಖರೀದಿಸಿದ ಗ್ರಾಹಕ!

''ಸಾಮಾನ್ಯ ಜನರ ಬಳಿ ₹ 2,000 ನೋಟು ಇಲ್ಲ, 2016ರಲ್ಲಿ ಜಾರಿಗೆ ತಂದ ಕೂಡಲೇ ಅದನ್ನು ದೂರವಿಟ್ಟರು. ದಿನನಿತ್ಯದ ಚಿಲ್ಲರೆ ವಿನಿಮಯಕ್ಕೆ ನಿಷ್ಪ್ರಯೋಜಕವಾಗಿದ್ದವು. ಹಾಗಾದರೆ ₹2,000 ನೋಟುಗಳನ್ನು ಇಟ್ಟುಕೊಂಡು ಬಳಸಿದ್ದು ಯಾರು? ಉತ್ತರ ಗೊತ್ತಿದೆ. ಕಪ್ಪುಹಣ ಹೊಂದಿದವರಿಗೆ ₹ 2,000 ನೋಟು ತಮ್ಮ ಹಣವನ್ನು ಸುಲಭವಾಗಿ ಕೂಡಿಡಲು ಮಾತ್ರ ಸಹಾಯ ಮಾಡಿದರು. ಈಗ ₹ 2,000 ನೋಟುಗಳನ್ನು ಇಟ್ಟುಕೊಂಡವರು ತಮ್ಮ ನೋಟುಗಳನ್ನು ಬದಲಾಯಿಸಿಕೊಳ್ಳಲು ಕೆಂಪು ಹಾಸಿನ ಸ್ವಾಗತ ನೀಡಲಾಗ್ತಿದೆ. ಕಪ್ಪುಹಣವನ್ನು ಬೇರುಸಹಿತ ಕಿತ್ತೊಗೆಯುವ ಸರ್ಕಾರದ ಘೋಷಿತ ಉದ್ದೇಶ ಸುಳ್ಳು’’ ಎಂದಿದ್ದಾರೆ. 

ಇನ್ನು, "₹ 2,000 ನೋಟು 2016 ರಲ್ಲಿ ಮೂರ್ಖತನದ ಕ್ರಮವಾಗಿತ್ತು. ಕನಿಷ್ಠ 7 ವರ್ಷಗಳ ನಂತರ ಮೂರ್ಖ ಕ್ರಮವನ್ನು ಹಿಂತೆಗೆದುಕೊಳ್ಳಲಾಗುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ" ಎಂದೂ ಚಿದಂಬರಂ ವ್ಯಂಗ್ಯವಾಡಿದ್ದಾರೆ. 

ಇದನ್ನು ಓದಿ: 2 ಸಾವಿರ ರೂ. ನೋಟನ್ನು ಬ್ಯಾಂಕ್‌ಗೆ ವಾಪಸ್‌ ಮಾಡಲು ಯಾವ ಅರ್ಜಿ, ದಾಖಲೆ ಸಲ್ಲಿಸ್ಬೇಕು? ಇಲ್ಲಿದೆ ಮಾಹಿತಿ..

2 ಸಾವಿರ ರೂ. ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಾಗುವುದು ಎಂದು ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿತ್ತು. ಆದರೆ ಜನರು ಈ ನೋಟುಗಳನ್ನು ತಮ್ಮ ಖಾತೆಗಳಿಗೆ ಜಮಾ ಮಾಡಲು ಅಥವಾ ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30 ರವರೆಗೆ ಸಮಯಾವಕಾಶವನ್ನು ನೀಡಿದೆ.

ಅಲ್ಲದೆ, ಇದಕ್ಕೆ ಯಾವುದೇ ಅರ್ಜಿ ಅಥವಾ ರಿಕ್ವಿಸಿಷನ್ ಸ್ಲಿಪ್ ಇಲ್ಲದೆ ಜನರು ನೋಟುಗಳನ್ನು ಬದಲಾಯಿಸಲು ಅನುಮತಿಸಲಾಗುವುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ. ಹಾಗೆ, ಯಾವುದೇ ಗುರುತಿನ ಪುರಾವೆ ಅಗತ್ಯವಿಲ್ಲ. ಜನರು ₹ 2,000 ರೂಪಾಯಿ ನೋಟುಗಳನ್ನು ₹ 20,000 ವರೆಗಿನ ನೋಟುಗಳನ್ನು ದಿನಕ್ಕೆ ಎಷ್ಟು ಬಾರಿ ಬೇಕಾದರೂ ಬದಲಾಯಿಸಿಕೊಳ್ಳಬಹುದು ಎಂದೂ ಸ್ಪಷ್ಟನೆ ನೀಡಿದೆ. 

Follow Us:
Download App:
  • android
  • ios