ನವದೆಹಲಿ[ಜ.27]: ಗಣರಾಜೋತ್ಸವದಂದೇ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಕಾಂಗ್ರೆಸ್‌ ಸಂವಿಧಾನದ ಪ್ರತಿಯನ್ನು ಕಳುಹಿಸಿ, ದೇಶವನ್ನು ವಿಭಜಿಸುವ ನಿಮ್ಮ ಪ್ರಯತ್ನದ ನಡುವೆ ಸಮಯ ಸಿಕ್ಕರೆ ಇದನ್ನು ಓದಿ ಎಂದು ಟಾಂಗ್‌ ನೀಡಿದೆ.

ಇದನ್ನು ಟ್ವೀಟರ್‌ನಲ್ಲಿ ಹಂಚಿರುವ ಕಾಂಗ್ರೆಸ್‌, ‘ಪ್ರಿಯ ಪ್ರಧಾನಿಯವರೇ, ಸದ್ಯವೇ ಸಂವಿಧಾನದ ಪ್ರತಿ ನಿಮಗೆ ತಲುಪಲಿದೆ. ದೇಶವನ್ನು ವಿಭಜಿಸುವ ನಿಮ್ಮ ಪ್ರಯತ್ನದ ನಡುವೆ ಸಮಯ ಸಿಕ್ಕರೆ ಓದಿ ಎಂದು ಬರೆದು, ಸಂವಿಧಾನದ ಪ್ರತಿಯನ್ನು ಕಳುಹಿಸಿದ ಅಮೆಜಾನ್‌ ರಸೀದಿಯನ್ನು ತನ್ನ ಅಧಿಕೃತ ಟ್ವಿಟರ್‌ ಅಕೌಂಟ್‌ನಲ್ಲಿ ಹಂಚಿದೆ.

ಸಂವಿಧಾನದ ಮೊದಲ ಪ್ರತಿಗಳನ್ನು ಮುದ್ರಿಸಿದ್ದ ಯಂತ್ರಗಳು ಗುಜರಿಗೆ!

ಸರಣಿ ಟ್ವೀಟ್‌ಗಳ ಮೂಲಕ ಪ್ರಧಾನಿ ಮೋದಿ ಹಾಗೂ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್‌, ಕೇಂದ್ರ ಸರ್ಕಾರ ಸಂವಿಧಾನವನ್ನು ಹಾಳುಗೆಡವುತ್ತಿದೆ ಎಂದು ದೂರಿದೆ. ಅಲ್ಲದೇ ಇತ್ತೀಚೆಗೆ ರಾಜ್‌ಘಾಟ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಸಂಸದ ರಾಹುಲ್‌ ಗಾಂಧಿ, ಕಾಂಗ್ರೆಸ್‌ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಸಂವಿಧಾನ ಪೀಠಿಕೆ ಓದುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಾಕಿದೆ

ಪ್ರಾರ್ಥನೆ ಜೊತೆಗೆ ಸಂವಿಧಾನದ ಪೂರ್ವ ಪೀಠಿಕೆ ಪಠಣ ಕಡ್ಡಾಯ: ಸರ್ಕಾರ!