Asianet Suvarna News Asianet Suvarna News

ಮದುವೆ ಭರವಸೆ ಮೇಲೆ ದೈಹಿಕ ಸಂಪರ್ಕ, ಇದು ಅತ್ಯಾಚಾರಕ್ಕೆ ಸಮವೇ? ಕೇರಳ ಹೈಕೋರ್ಟ್ ಮಹತ್ವದ ತೀರ್ಪು

  • ಕೇರಳ ಹೈಕೋರ್ಟ್‌ನಿಂದ ಮಹತ್ವದ ತೀರ್ಪು
  • ಭರವಸೆ ಮೇಲೆ ದೈಹಿಕ ಸಂಪರ್ಕ ಅತ್ಯಾಚಾರಕ್ಕೆ ಸಮವೇ?
  • ಕೋರ್ಟ್ ಆದೇಶದಲ್ಲಿ ಏನಿದೆ? ಯಾವುದು ಅತ್ಯಾಚಾರ?
Rape case cannot be presumed merely because a man married another woman after sexual act with the victim Keral High Court ckm
Author
Bengaluru, First Published Apr 5, 2022, 4:49 PM IST

ಕೇರಳ(ಏ.05): ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬಳಿಕ ಮೋಸ ಪ್ರಕರಣಗಳ ಇತ್ತೀಚೆಗೆ ಹೆಚ್ಚಾಗುತ್ತಿದೆ. ಹಲವು ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿದ್ದರೆ, ಮತ್ತೆ ಹಲವು ಪ್ರಕರಣಗಳು ಒತ್ತಡ, ಜೀವಭಯ ಸೇರಿದಂತೆ ಹಲವು ಕಾರಣಗಳಿಂದ ಬೂದಿಯಾಗಿದೆ. ಸಂತ್ರಸ್ತೆಯ ನಿರ್ಧಾರದ ಸ್ವಾಯತ್ತತೆಯನ್ನು ಉಲ್ಲಂಘಿಸಿದರೆ ಮಾತ್ರ  ಮದುವೆಯ ಭರವಸ ಮೇಲೆ ನಡೆಯುವ ದೈಹಿಕ ಸಂಪರ್ಕ ಅತ್ಯಾಚಾರವಾಗಲು ಸಾಧ್ಯ ಎಂದು ಕೇರಳ ಹೈಕೋರ್ಟ್ ಹೇಳಿದೆ.

ಜಸ್ಟೀಸ್ ಎ ಮುಹಮ್ಮದ್ ಮುಷ್ತಾಕ್ ಹಾಗೂ ಡಾ ಕೌಸೀರ್ ಎಡಪ್ಪಗತ್ ಅವರಿದ್ದ ಡಿವಿಶನ್ ಬೆಂಚ್ ಈ ಮಹತ್ವದ ಆದೇಶ ನೀಡಿದೆ. IPC ಸೆಕ್ಷನ್ 90 ಹಾಗೂ ಇಂಡಿಯನ್ ಎವಿಡೆಸನ್ಸ್ ಆ್ಯಕ್ಟ್ 114-A ಅಡಿಯಲ್ಲಿ ಮದುವೆಯ ಭರವಸೆ ಮೇಲಿನ ಲೈಂಗಿಕ ಸಂಬಂಧ ಕುರಿತು ಕೆಲ ಮಹತ್ವದ ಅಂಶಗಳ ಮೇಲೆ ಬೆಳಕು ಚೆಲ್ಲುತ್ತದೆ ಎಂದು ಕೋರ್ಟ್ ಹೇಳಿದೆ. ಕಾನೂನಿನಲ್ಲಿರುವ 3 ಪ್ರತಿಪಾದನೆಯನ್ನು ಕೋರ್ಟ್ ನೀಡಿದೆ.

Cheating Wife: ಮದುವೆ ದಿನವೇ ಮೈದುನನ ಜೊತೆ ಮಲಗಿದ ಹೆಂಡತಿ ..! ಪಶ್ಚಾತ್ತಾಪವೂ ಇಲ್ಲವಂತೆ

  1. ಸಂತ್ರಸ್ತೆ ಮಹಿಳೆ ತನ್ನ ಒಪ್ಪಿಗೆ ಇಲ್ಲದೇ ಆರೋಪಿಯಿಂದ ಲೈಂಗಿಕ ಸಂಪರ್ಕ ಮಾಡಲಾಗಿದೆ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾದರೆ ಹಾಗೂ ಸಾಕ್ಷ್ಯದಲ್ಲಿ ಹೇಳಿದರೆ, ಇಲ್ಲಿ ಸಮ್ಮತಿಯ ಕೊರತೆಯನ್ನ ಕಾನೂನು ಪರಿಗಣಿಸುತ್ತದೆ. 
  2.  IPC ಸೆಕ್ಷನ್ 90 ಅಡಿಯಲ್ಲಿನ ಕಾನೂನಿನಲ್ಲಿ ಮಹತ್ವದ ಅಂಶವನ್ನು ವಿವರಿಸಲಾಗಿದೆ. ಸಂತ್ರಸ್ತೆ ಒಪ್ಪಿಗೆ ಪಡೆಯದೇ ದೈಹಿಕ ಸಂಪರ್ಕ ಬೆಳೆಸಿರುವುದು ನಿಜವಾದರೆ ವಾದ ಪ್ರಾಸಿಕ್ಯೂಶನ್ ಪರ ನಿಲ್ಲಲಿದೆ
  3. ಇಲ್ಲಿ ಸಂತ್ರಸ್ತೆ ಆರೋಪಿ ನೀಡಿರುವ ಸುಳ್ಳು ಭರವಸೆಗಳನ್ನು ಅಥವಾ ಅದಕ್ಕೆ ಸಂಬಂಧ ಪಟ್ಟ ಸಾಕ್ಷ್ಯಗಳನ್ನು ನೀಡಬೇಕು

ಈ ಮೂರು ವಿವರಣೆಗಳ ಜೊತೆಗೆ ಕೋರ್ಟ್ ಉದ್ಭವಿಸುವ ಸವಾಲುಗಳಿಗೂ ಉತ್ತರ ನೀಡಿದೆ. ಇದರಲ್ಲಿ ಸಂತ್ರಸ್ತೆ ಜೊತೆ ಲೈಂಗಿಕ ಸಂಪರ್ಕ ಬೆಳೆಸಿ, ಬಳಿಕ ಬೇರೊಬ್ಬರ ಜೊತೆ ಮದುವೆ ಮಾಡಿಕೊಂಡಿದ್ದಾನೆ ಅನ್ನೋ ಕಾರಣವನ್ನು ಸಂತ್ರಸ್ತೆ ಒಪ್ಪಿಗೆ ಕೊರತೆಯಿಂದ ನಡೆದ ದೈಹಿಕ ಸಂಪರ್ಕ ಎನ್ನಲು ಸಾಧ್ಯವಿಲ್ಲ. ಸಂತ್ರಸ್ತೆಯ ಒಪ್ಪಿಗೆ ಇಲ್ಲದೆ ನಡೆದ ಲೈಂಗಿಕ ಕ್ರಿಯೆ ಅತ್ಯಾಚಾರಕ್ಕೆ ಸಮ ಎಂದು ಕೋರ್ಟ್ ಹೇಳಿದೆ.

ಸಾಲ ಮರುಪಾವತಿಸದ ಯುವತಿಗೆ ಒಂದೇ ದಿನ 17 ಜನರ ಜೊತೆ ಸೆಕ್ಸ್ ಮಾಡೋ ಶಿಕ್ಷೆ !

ಲೈಂಗಿಕ ಸ್ವಾಯತ್ತತೆ ಎರಡು ಅವಶ್ಯಕತೆಗಳನ್ನು ಒಳಗೊಂಡಿದೆ. ಮೊದಲನೆಯದಾಗಿ, ಸಂಬಂಧಿತ ಮಾಹಿತಿಯ ಸ್ವಾಧೀನವಾಗಿದೆ. ಇನ್ನು ಎರಡನೆ ಅವಶ್ಯಕತೆ ಎಂದರೆ ಆ ಮಾಹಿತಿಯ ವೈಯಕ್ತಿಕ ಮೌಲ್ಯಮಾಪನಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ. ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಆರೋಪಿ ಮಹಿಳೆಯೊಂದಿಗೆ ತಿಳಿದಿರುವ ವಸ್ತು ಸಂಗತಿಳನ್ನು ಹಂಚಿಕೊಳ್ಳದಿದ್ದಲ್ಲಿ ಖಂಡಿತವಾಗಿಯೂ ಆಕೆಯ ನಿರ್ಣಯದ ಸ್ವಾಯತ್ತತೆಯನ್ನು ರಕ್ಷಿಸುವ ಹಕ್ಕನ್ನು ಅತಿಕ್ರಮಿಸುತ್ತದೆ. IPC ಯ ಸೆಕ್ಷನ್ 375 ಲೈಂಗಿಕ ನಿರ್ಣಯದ ಸ್ವಾಯತ್ತತೆಯ ಯಾವುದೇ ಉಲ್ಲಂಘನೆಯನ್ನು ಅಪರಾಧ ಎಂದು ಸ್ಪಷ್ಟವಾಗಿ ಪರಿಗಣಿಸುತ್ತದೆ ಎಂದು ತೀರ್ಪು ಹೇಳಿದೆ.

ಇದನ್ನು ಹೊರತು ಪಡಿಸಿದರೆ ಮದುವೆ ಕುರಿತು ಯಾವುದೇ ಅನಿಶ್ಚಿತತೆಗಳಿದ್ದರೆ ಅದನ್ನು ಮಹಿಳೆ ಜೊತೆ ಬಹಿರಂಗ ಪಡಿಸಲು ಪುರುಷ ಬದ್ಧನಾಗಿರುತ್ತಾನೆ ಎಂದು ಕೋರ್ಟ್ ಹೇಳಿದೆ. ಲೈಂಗಿಕ ಕ್ರಿಯೆ ಮಾಡುವ ಸಂದರ್ಭದಲ್ಲಿ ಮದುವೆಗೆ ಅಡೆತಡೆಗಳಿವೆ ಎಂದು ತಿಳಿದಿದ್ದರೂ, ಅಥವಾ ಲೈಂಗಿಕ ಸಂತ್ರಸ್ತೆಯನ್ನು ಮದುವೆಯಾಗುವು ಯಾವುದೇ ಖಚಿತತೆ ಇಲ್ಲದಿದ್ದರೆ ಈ ಸತ್ಯವನ್ನು ಮಹಿಳೆಗೆ ಬಳಿ ಬಹಿರಂಗ ಪಡಿಸಲು ಆತ ಬದ್ಧನಾಗಿರುತ್ತಾನೆ. ತಾನು ಆಕೆಯನ್ನು ಮದುವೆಯಾಗುವುದಿಲ್ಲ ಎಂಬುದು ಅರಿತಿದ್ದರೂ, ಅದನ್ನು ತಿಳಿಸದೆ ದೈಹಿಕ ಸಂಪರ್ಕ ಬೆಳೆಸಿದರೆ ಅದು ತಪ್ಪು ಕಲ್ಪನೆ ಮೇಲೆ ಮಹಿಳೆಯ ನಿರ್ಧಾರದ ಸ್ವಾಯತ್ತತೆಯ ಉಲ್ಲಂಘನೆಯಾಗಲಿದೆ. ಇದು ಅತ್ಯಾಚಾರಕ್ಕೆ ಸಮವಾಗಲಿದೆ ಎಂದು ಕೋರ್ಟ್ ಹೇಳಿದೆ.

ಸಮ್ಮತಿ ಸೆಕ್ಸ್ ನಡೆಸಿ ಬಳಿಕ ಮತ್ತೊಬ್ಬ ಮಹಿಳೆಯ ವಿವಾಹವಾದ ವ್ಯಕ್ತಿಯ ವಿರುದ್ಧ ಸಂತ್ರಸ್ತೆ ಮಹಿಳೆ ನೀಡಿದ ದೂರಿನ ಮೇಲೆ ವಿಚಾರಾಣಾ ನ್ಯಾಯಾಲ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 50,000 ರೂಪಾಯಿ ದಂಡ ವಿಧಿಸಿತ್ತು. ಈ ನಿಮಮದ ವಿರುದ್ದ ಕೇರಳಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮಹತ್ವದ ಆದೇಶ ನೀಡಿದೆ.

ಅರ್ಜಿದಾರ ಹಾಗೂ ಸಂತ್ರಸ್ತೆ 10 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮೂರು ಬಾರಿ ಲೈಂಗಿಕ ಸಂಪರ್ಕ ಬೆಳೆಸಿದ್ದರು. ಆದರೆ ಪೋಷಕರ ವಿರೋಧದಿಂದ ವ್ಯಕ್ತಿ, ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದರು. 

Follow Us:
Download App:
  • android
  • ios