ರಣಥಂಬೋರ್‌ ರಾಷ್ಟ್ರೀಯ ಸಂರಕ್ಷಿತ ಅರಣ್ಯದಲ್ಲಿದ್ದ ಅಪರೂಪದ ಬಾಣದ ಗುರುತಿನ ಹುಲಿಯ ಅಂತಿಮ ನಡೆಗೆ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಒಂದೊಂದು ಹೆಜ್ಜೆಯನ್ನು ಅತ್ಯಂತ ಭಾರವಾಗಿಟ್ಟ ಆ್ಯರೋಹೆಡ್ ಹುಲಿಯ ಈ ಕೊನೆಯ ಕ್ಷಣದ ದೃಶ್ಯ ಇಲ್ಲಿದೆ. 

ಸವಾಯಿ(ಜೂ.21) ಭಾರತದ ವನ್ಯ ಪ್ರಾಣಿಗಳ ಸರಂಕ್ಷಿತ ಅರಣ್ಯಗಳಲ್ಲಿ ರಾಜಸ್ಥಾನದ ರಣಂಥಬೋರ್ ರಾಷ್ಟ್ರೀಯ ಉದ್ಯಾನವನ ಕೂಡ ಒಂದು. ಈ ರಣಥಂಬೋರ್‌ ಸಂರಕ್ಷಿತ ಅರಣ್ಯದಲ್ಲಿ ಅಪರೂಪದ ಆ್ಯರೋಹೆಡ್( ಬಾಣದ ಗುರುತಿನ) ಹುಲಿ ಅತ್ಯಂತ ಆಕರ್ಷಕಹ ಹಾಗೂ ವಿಶೇಷ. ಇದೀಗ ಇದೇ ರಣಥಂಬೋರ್‌ ಅರಣ್ಯದ ಹೆಣ್ಣು ಹುಲಿ ಅಪರೂಪದ ಆ್ಯರೋಹೆಡ್ ಭಾರವಾಗಿಟ್ಟ ಅಂತಿಮ ಹೆಜ್ಜೆಯ ದಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. 14 ವರ್ಷ ವಯಸ್ಸಿನ ಈ ಹೆಣ್ಣು ಹುಲಿ ಮೃತಪಟ್ಟಿರುವುದಾಗಿ ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದರೆ. ಆದರೆ ಅಂತಿಮ ಕ್ಷಣದಲ್ಲಿ ಗಾಂಭೀರ್ಯದಿಂದ ಭಾರವಾದ ಹೆಜ್ಜೆ ಇಟ್ಟ ದೃಶ್ಯಗಳು ಪ್ರಾಣಿ ಪ್ರಿಯರ ಕಣ್ಣಾಲಿ ತೇವಗೊಳಿಸಿದೆ.

ಮರದ ಕೆಳಗೆ ಪ್ರಾಣಬಿಟ್ಟ ಆ್ಯರೋಹೆಡ್ ಹುಲಿ

ಒಂದೊಂದು ಹೆಜ್ಜೆಯೂ ಅತ್ಯಂತ ಭಾರವಾಗಿತ್ತು. ನಾಲ್ಕೈದು ಹೆಜ್ಜೆ ಇಟ್ಟ ಆ್ಯರೋಹೆಡ್ ಹುಲಿ ಕುಸಿದು ಬಿದ್ದಿತ್ತು. ಮತ್ತೆ ಮೇಲೆದ್ದು ಅದೆ ಗಾಂಭೀರ್ಯದಿಂದ ನಡೆಯುವ ಪ್ರಯತ್ನ ಮಾಡಿದೆ.ತನ್ನ ಪ್ರಜಿ ಹೆಜ್ಜೆಯಲ್ಲೂ ಅಂತಿಮ ಕ್ಷಣದಗಳನ್ನು ಎಣಿಸುತ್ತಿದ್ದ ಆ್ಯರೋಹೆಡ್ ಕಠಿಣ ಪರಿಸ್ಥಿತಿಯಲ್ಲೂ ಭಾರವಾದ ಮನಸ್ಸಿನೊಂದಿಗೆ ಹೆಜ್ಜೆ ಹಾಕಿದೆ. ಕೊನೆಗೆ ನಿಧಾನವಾಗಿ ಹೆಜ್ಜೆ ಇಡುತ್ತಾ ಮರದ ಕೆಳಗೆ ತಲುಪಿದ ಆ್ಯರೋಹೆಡ್ ಹುಲಿ ಕೊನೆಯುಸಿರೆಳಿದಿದೆ.

ಮರಿ ಹುಲಿಯ ಸ್ಥಳಾಂತರಿಂದ ಭಾವುಕಗೊಂಡಿದ್ದ ಆ್ಯರೋಹೆಡ್

ಫೋಟೋಗ್ರಾಫರ್ ಸಚಿನ್ ರೈ ಆ್ಯರೋಹೆಡ್ ಹುಲಿಯ ಅಂತಿಮ ನಡಿಗೆಯ ದೃಶ್ಯ ಸೆರೆ ಹಿಡಿದ್ದಾರೆ. ಆ್ಯರೋಹೆಡ್ ಹುಲಿಯ ಕೊನೆಯ ಕ್ಷಣಗಳು ಎಂತವರ ಕಣ್ಣಾಲಿಯನ್ನು ತೇವಗೊಳಿಸುತ್ತೆ. ರಣಥಂಬೋರ್‌ನ ಪದಮ ತಲಾಬ್ ನದಿ ತೀರದಲ್ಲಿ ಸ್ವಚ್ಚವಾಗಿ ಓಡಾಡಿ, ಮೊಸಳೆ ಸೇರಿದಂತ ವನ್ಯ ಮೃಗಗಳ ಬೇಟೆಯಾಡುತ್ತಿದ್ದ ಆ್ಯರೋಹೆಡ್ ಹೆಣ್ಣು ಹುಲಿ ಕೊನೆಯ ಕ್ಷಣಗಳನ್ನು ಅತ್ಯಂತ ಭಾವುಕವಾಗಿ ಕಳೆದಿದೆ. ಕಾರಣ ಆ್ಯರೋಹೆಡ್ ಹೆಣ್ಣು ಹುಲಿಯ ಜೊತೆಗೆ ಅದರ ಮರಿ ಹೆಣ್ಣು ಹುಲಿ ಸದಾ ಕಾಲ ಇತ್ತು. ಆದರೆ ಆ್ಯರೋಹೆಡ್ ಹುಲಿಯ ಮರಿ ಹುಲಿಯನ್ನು ಅರಣ್ಯಾಧಿಕಾರಿಗಳು ಬೇರೆ ಸಂರಕ್ಷಿತ ಅರಣ್ಯಕ್ಕೆ ಸ್ಥಳಾಂತರಿಸಿದ್ದರು. ಈ ಸ್ಥಳಾಂತರ ನಡೆದ ಕೆಲವೇ ಗಂಟೆಗಳಲ್ಲಿ ಆ್ಯರೋಹೆಡ್ ಹುಲಿ ಮೃತಪಟ್ಟಿದೆ.

View post on Instagram

ಭಾವುಕರಾದ ಫೋಟೋಗ್ರಾಫರ್

ಪೋಟೋಗ್ರಾಫರ್ ಸಚಿನ್ ರೈ ಆ್ಯರೋಹೆಡ್ ಹುಲಿ ಕುರಿತು ಭಾವುಕರಾಗಿದ್ದರೆ. ಕಾರಣ ಆ್ಯರೋಹೆಡ್ ಹೆಣ್ಣು ಹುಲಿ ಮರಿಯನ್ನು ರಣಥಂಬೋರ್ ಅರಣ್ಯಕ್ಕೆ ತಂದ ಕ್ಷಣದಿಂದ ಇದರ ಫೋಟೋವನ್ನು ಸಚಿನ್ ರೈ ಕ್ಲಿಕ್ಕಿಸಿದ್ದಾರೆ. ಈ ಹುಲಿಯ ಪ್ರತಿ ಚಲನವಲನ, ಬೇಟೆ, ಮಕ್ಕಳೊಂದಿಗೆ ಆಟ ಸೇರಿದಂತೆ ಪ್ರತಿ ಹಂತವನ್ನು ಫೋಟೋಗ್ರಾಫರ್ ಸೆರೆ ಹಿಡಿದಿದ್ದರು. ಇದೇ ಫೋಟೋಗ್ರಾಫರ್ ಹುಲಿಯ ಕೊನೆಯ ಕ್ಷಣವನ್ನು ಅತ್ಯಂತ ಭಾರವಾದ ಮನಸ್ಸಿನೊಂದಿಗೆ ಸೆರೆ ಹಿಡಿದಿರುವುದಾಗಿ ಹೇಳಿದ್ದಾರೆ.

ಕೊನೆಯ ಕ್ಷಣ ಹುಲಿಗೆ ಸ್ಪಷ್ಟವಾಗಿತ್ತು. ಆದರೆ ಹುಲಿ ಮಾತ್ರ ಮತ್ತೆ ಪುಡಿದೇಳಲು ಪ್ರಯತ್ನಿಸಿತ್ತು. ಹೆಜ್ಜೆ ಭಾರವಾಗುತ್ತಿತ್ತು. ಒಂದೊಂದು ಹೆಜ್ಜೆ ಇಡಲು ಹರಸಾಹಸ ಪಡುತ್ತಿತ್ತು. ಮೌನವಾಗಿ, ತಲೆ ತಗ್ಗಿಸಿ ನಡೆಯುತ್ತಿದ್ದ ಆ್ಯರೋಹೆಡ್ ಹುಲಿಯ ಅಂತಿಮ ಕ್ಷಣ ನನ್ನ ಹೃದಯವನ್ನು ಭಾರ ಮಾಡಿತ್ತು. ನಡೆಯಲು ಕಷ್ಟವಾಗುತ್ತಿದ್ದರೂ ಆ್ಯರೋಹೆಡ್ ಮರದ ಕೆಳಗೆ ತಲುಪಿತ್ತು. ಬಳಿಕ ಅಲ್ಲೇ ವಿಶ್ರಾಂತಿಗೆ ಜಾರಿತ್ತು. ಮರದ ಕೆಳಗೆ ಬಂದ ಹುಲಿ ಅಲ್ಲೇ ಪ್ರಾಣ ಬಿಟ್ಟಿದೆ ಎಂದು ಸಚಿನ್ ರೈ ಹೇಳಿದ್ದಾರೆ.

ಈ ಹುಲಿಯ ಮುಖದಲ್ಲಿ ಭಾಣಗ ಕುರಿತಿನ ಆಕಾರವಿದೆ. ಹುಲಿಯ ಕೂದಲಿನಲ್ಲಿ ಈ ಆಕಾರ ಇದೆ. ಇದು ಚಿಕ್ಕ ಮರಿ ಇದ್ದಾಗಲೂ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಹೀಗಾಗಿ ಈ ಹುಲಿಗೆ ಆ್ಯರೋಹೆಡ್ ಎಂದು ನಾಮಕರಣ ಮಾಡಲಾಗಿತ್ತು. ಕಳೆದ 14 ವರ್ಷ ರಣಂಥೋಬರ್ ಅರಣ್ಯದಲ್ಲಿ ಗಾಂಭೀರ್ಯದಿಂದ ಈ ಹುಲಿ ಓಡಾಡಿತ್ತು.