* ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ಐಪಿಎಸ್ ಅಧಿಕಾರಿಯ ಶಾಕಿಂಗ್ ಹೇಳಿಕೆ* ಭಾರೀ ಸಂಚಲನ ಮೂಡಿಸಿದೆ ಪೊಲೀಸ್ ಅಧಿಕಾರಿಯ ಈ ಹೇಳಿಕೆ* ಮಗಳು ಓಡಿ ಹೋದ್ರೆ ಅಪ್ಪ-ಅಮ್ಮನನ್ನೇ ಜೈಲಿಗಟ್ಟುತ್ತೇನೆ
ರಾಂಪುರ(ಜೂ.29): ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ಐಪಿಎಸ್ ಅಧಿಕಾರಿಯೊಬ್ಬರು ನೀಡಿರುವ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ. ಮಗಳು ಓಡಿಹೋದರೆ ಪೋಷಕರನ್ನು ಜೈಲಿಗೆ ಕಳುಹಿಸಲು ಬಯಸುವುದಾಗಿ ರಾಂಪುರ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಶುಕ್ಲಾ ಹೇಳಿದ್ದಾರೆ. ಆದರೆ, ಅವರು ತಮ್ಮ ಹೇಳಿಕೆ ವೈರಲ್ ಆದ ಬೆನ್ನಲ್ಲೇ ಅವರು ಈ ವಿಚಾರವನ್ನು ನಿರಾಕರಿಸಿದ್ದಾರೆ, ಅಲ್ಲದೇ ತಮ್ಮ ಈ ಹೇಳಿಕೆಗೆ ಕ್ಷಮೆಯಾಚಿಸಿದರು.
ವಾಸ್ತವವಾಗಿ, ರಾಂಪುರ ಉಪಚುನಾವಣೆ ನಂತರ, ಪೊಲೀಸ್ ಲೈನ್‌ನಲ್ಲಿ ಸದ್ಭಾವನಾ ಸಭೆಯನ್ನು ಆಯೋಜಿಸಲಾಗಿತ್ತು, ಇದರಲ್ಲಿ ಎಸ್ಪಿ ಅಶೋಕ್ ಕುಮಾರ್ ಶುಕ್ಲಾ ಅವರಲ್ಲದೆ ಅನೇಕ ಜನರು ಉಪಸ್ಥಿತರಿದ್ದರು. ಈ ವೇಳೆ ಎಸ್ಪಿ ವೇದಿಕೆಗೆ ತೆರಳಿ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಬಗ್ಗೆ ಮಾತನಾಡಿದರು.
ಸಮಾಜವಾದಿ ಪಕ್ಷವು ಸಹ ಈ ವೀಡಿಯೊವನ್ನು ಹಂಚಿಕೊಂಡಿದೆ, ಇದರಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಶುಕ್ಲಾ ಅವರು, 'ಇತ್ತೀಚೆಗಿನ ಅನೇಕ ಪ್ರಕರಣಗಳಲ್ಲಿ ಹಿಂದೂ ಹುಡುಗನೊಂದಿಗೆ ಮುಸ್ಲಿಂ ಹುಡುಗಿ ಓಡಿ ಹೋಗುತ್ತಾರೆ, ಇಲ್ಲವೇ ಹಿಂದೂ ಹುಡುಗಿ ಮುಸ್ಲಿಂ ಹುಡುಗನ ಜೊತೆ ಹೋಗುತ್ತಾರೆ. ಇದೆಲ್ಲಾ ನಿಮ್ಮ ಕುಟುಂಬದಲ್ಲಿ ಏಕೆ ನಡೆಯುತ್ತಿದೆ ಎಂದು ನೀವು ನೋಡುತ್ತೀರಾ? ಹೀಗಿರುವಾಗ ನನ್ನ ಹುಡುಗಿ ಹೋಗಿದ್ದಾಳೆ ಎಂದು ದೂರಿ ಬರುವ ಪೋಷಕರನ್ನು ಜೈಲಿಗೆ ಕಳುಹಿಸಲು ನಾನು ಬಯಸುತ್ತೇನೆ ಎಂದಿದ್ದಾರೆ.
ಪೊಲೀಸ್ ಅಧೀಕ್ಷಕರು ಅಷ್ಟಕ್ಕೇ ಸುಮ್ಮನಾಗಲಿಲ್ಲ, ಮುಂದುವರೆಸಿ ಮಾತನಾಡಿದ ಅವರು ಮಗಳಿಗೆ ಜನ್ಮ ಕೊಟ್ಟು ಸುಮ್ಮನಾಗುತ್ತಾರೆ, ಅರೇ... ಯಾರ ನಂಬಿಕೆ ಮೇಲೆ ನೀವು ಅವರನ್ನು ಬಿಡುತ್ತೀರಿ? ನಿಮಗೆ ಇಷ್ಟವಾಗುತ್ತೋ ಇಲ್ಲವೋ ಗೊತ್ತಿಲ್ಲ, ಆದ್ರೆ ಒಂದು ಅಥವಾ ಎರಡು ಅಷ್ಟೇ ಮಕ್ಕಳು ಸಾಲು ಎಂದಿದ್ದಾರೆ.
ಕಿಡಿ ಕಾರಿದ ಸಮಾಜವಾದಿ ಪಕ್ಷ
ಈ ವಿಡಿಯೋವನ್ನು ಶೇರ್ ಮಾಡಿರುವ ಸಮಾಜವಾದಿ ಪಕ್ಷವು ಈ ಹೇಳಿಕೆಯನ್ನು ಟೀಕಿಸಿದ್ದು, ತನ್ನ ಟ್ವೀಟ್‌ನಲ್ಲಿ, 'ರಾಮ್‌ಪುರ ಪೊಲೀಸ್ ಕ್ಯಾಪ್ಟನ್ ಅಶೋಕ್ ಕುಮಾರ್ ಹೇಳಿಕೆ, ತುಂಬಾ ನಾಚಿಕೆಗೇಡಿನ ಸಂಗತಿಯಾಗಿದೆ, ಯುಪಿ ಪೊಲೀಸರು ತನ್ನ ಕರ್ತವ್ಯವನ್ನು ಸರಿಯಾಗಿ ಮಾಡಲು ಸಾಧ್ಯವಾಗದಿರಬಹುದು ಆದರೆ ಸರ್ಕಾರದ ಮುಖ್ಯಸ್ಥರೇ ಲಲಿತ್‌ಪುರದ ಅತ್ಯಾಚಾರಿ ಮತ್ತು ಯುಪಿಯಾದ್ಯಂತ ಭ್ರಷ್ಟ ಪೊಲೀಸರ ಬಗ್ಗೆ ನೀವು ಏನು ಹೇಳುತ್ತೀರಿ? ಎಂದು ಪ್ರಶ್ನಿಸಿದ್ದಾರೆ.
ಆದಾಗ್ಯೂ, ಈ ಹೇಳಿಕೆ ಮುನ್ನೆಲೆಗೆ ಬಂದ ನಂತರ, ರಾಮ್‌ಪುರ ಪೊಲೀಸರು ಸಹ ಪೊಲೀಸ್ ವರಿಷ್ಠಾಧಿಕಾರಿಯನ್ನು ಉಲ್ಲೇಖಿಸಿ ಈ ಹೇಳಿಕೆಯನ್ನು ತಿಎಸ್ಕರಿಸಿದ್ದಾರೆ. ಇದರಲ್ಲಿ ‘ದೂರು ನೀಡುವ ಪೋಷಕರನ್ನು ಕಳುಹಿಸುತ್ತೇನೆ’ ಎಂಬ ಅವರ ಹೇಳಿಕೆಗೆ ನೀಡುತ್ತಿರುವ ಅರ್ಥ ತಪ್ಪಾಗಿದೆ ಎಂದು ಹೇಳಲಾಗಿದೆ. ಜೊತೆಗೆ ಕ್ಷಮೆಯನ್ನೂ ಕೇಳಿದ್ದಾರೆ. ಇದೇ ವೇಳೆ ಸಂತ್ರಸ್ತ ಕುಟುಂಬಕ್ಕೆ ಸಂಪೂರ್ಣ ನೆರವು ನೀಡುವುದಾಗಿ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
