ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ, ಸುಳ್ಳು ಸುದ್ದಿಗೆ NIA ಅಧಿಕೃತ ಪ್ರಕಟಣೆ ಮೂಲಕ ಕಪಾಳ ಮೋಕ್ಷ!
ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ತನಿಖಾ ಸಂಸ್ಥೆ ಎನ್ಐಎ ಬಿಜೆಪಿ ಕಾರ್ಯಕರ್ತನ ಸಾಕ್ಷಿಯಾಗಿ ಪರಿಗಣಿಸಿದ ಬೆನ್ನಲ್ಲೇ ಕೋಲಾಹಲ ಸೃಷ್ಟಿಯಾಗಿದೆ. ಬಿಜೆಪಿ ಬಾಂಬ್ ಪಾರ್ಟಿ, ಕೇಸರಿ ಭಯೋತ್ಪಾದನೆ ಸೇರಿದಂತೆ ಬಗೆ ಬಗೆಯ ಪೋಸ್ಟ್ ಮಾಡಿದೆ. ಇದೀಗ ಎನ್ಐಎ ಸ್ಪಷ್ಟನೆ ನೀಡುವ ಮೂಲಕ ಸುಳ್ಳು ಸುದ್ದಿಗೆ ಕಪಾಳ ಮೋಕ್ಷ ಮಾಡಿದೆ.
ಬೆಂಗಳೂರು(ಏ.05) ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪ್ರಕರಣದ ತನಿಖೆ ಜವಾಬ್ದಾರಿ ಹೊತ್ತುಕೊಂಡಿರುವ ಎನ್ಐಎ ಈಗಾಗಲೇ ಶಂಕಿತರಿಬ್ಬರ ಫೋಟೋ ಪ್ರಕಟಿಸಿ ಸುಳಿವು ನೀಡಿದವರಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ಈ ಪ್ರಕರಣ ಸಂಬಂಧ ಇಂದು ಎನ್‌ಐಎ ಅಧಿಕಾರಿಗಳು ಸಾಕ್ಷಿಯಾಗಿ ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್‌ನನ್ನು ವಿಚಾರಣೆ ನಡೆಸಿದೆ. ಆದರೆ ಕಾಂಗ್ರೆಸ್,ಕೈ ನಾಯಕರು, ಕೆಲ ಮಾಧ್ಯಮಗಳು ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಬಿಜೆಪಿ ಕೈವಾಡ, ಕೇಸರಿ ಭಯೋತ್ಪಾದನೆ, ಭಯೋತ್ಪಾದ ರಾಜಕೀಯ ಪಕ್ಷ, ಭಯೋತ್ಪಾದಕರ ಜೊತೆ ಬಿಜೆಪಿ ಲಿಂಕ್ ಸೇರಿದಂತೆ ಬಗೆ ಬಗೆಯ ಪೋಸ್ಟ್ ಹಾಕಿತ್ತು. ಈ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದಂತೆ ರಾಷ್ಟ್ರೀಯ ತನಿಖಾ ದಳ ಸ್ಪಷ್ಟನೆ ನೀಡಿದೆ. ಬಿಜೆಪಿ ಕಾರ್ಯಕರ್ತನ ಬಂಧಿಸಿಲ್ಲ. ಈತ ಆರೋಪಿಯಲ್ಲ, ಸಾಕ್ಷಿಯಾಗಿ ವಿಚಾರಣೆ ನಡೆಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್, ಮೊಬೈಲ್ ಅಂಗಡಿ ಮಾಲೀಕನ ವಿಚಾರಣೆ ನಡೆಸಲಾಗಿದೆ. ಸಾಯಿ ಪ್ರಸಾದ್ ತನ್ನ ಹಳೆ ಮೊಬೈಲನ್ನು ಮೊಬೈಲ್ ಅಂಗಡಿ ಮಾಲೀಕನಿಗೆ ಮಾರಾಟ ಮಾಡಿದ್ದ. ಇದೇ ಮೊಬೈಲನ್ನು ಅಂಗಡಿ ಮಾಲೀಕ ಚಿಕ್ಕಮಗಳೂರಿನ ಮುಝಮ್ಮಿಲ್ ಷರೀಫನಿಗೆ ಮಾರಾಟ ಮಾಡಲಾಗಿತ್ತು. ಈಗಾಗಲೇ ಎನ್ಐಎ ತಲೆಮರೆಸಿಕೊಂಡಿರುವ ಇಬ್ಬರು ಶಂಕಿತರ ಫೋಟೋ ಬಿಡುಗಡೆ ಮಾಡಿದೆ. ಈ ಶಂಕಿತರಿಗೆ ಮುಝಮ್ಮಿಲ್ ಷರೀಪ್ ಮೊಬೈಲ್ ಅಂಗಡಿ ಮಾಲೀಕನಿಂದ ಖರೀದಿಸಿದ ಮೊಬೈಲ್‌ನಿಂದಲೇ ಸಂಪರ್ಕ ಮಾಡಿದ್ದ.
Rameshwaram Cafe Blast Case: ಬಿಜೆಪಿ ಕಾರ್ಯಕರ್ತ ಆರೋಪಿಯಲ್ಲ, ಸಾಕ್ಷಿಯಾಗಿ ವಿಚಾರಣೆ ಎಂದ ಎನ್ಐಎ!
ಹೀಗಾಗಿ ಎನ್‌ಐಎ ಅಧಿಕಾರಿಗಳು ಮುಝಮ್ಮಿಲ್ ಷರೀಫ್ ವಿಚಾರಣೆ ವೇಳೆ ಮೊಬೈಲ್ ಮಾಹಿತಿ ಕಲೆ ಹಾಕಲಾಗಿತ್ತು. ಮೊಬೈಲ್ ಜಾಡು ಹಿಡಿದು ಅಂಗಡಿಗೆ ತೆರಳಿದ ಅಧಿಕಾರಿಗಳು ಮೊಬೈಲ್ ಅಂಗಡಿ ಮಾಲೀಕನ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮೊಬೈಲನ್ನು ಸಾಯಿ ಪ್ರಸಾದ್‌ನಿಂದ ಖರೀದಿಸಿದ್ದಾಗಿ ಹೇಳಿದ್ದ. ಹೀಗಾಗಿ ಸಾಯಿ ಪ್ರಸಾದ್‌ನ ವಿಚಾರಣೆ ನಡೆಸಿದ್ದಾರೆ. ಸಾಯಿ ಪ್ರಸಾದ್ ಈ ಸ್ಫೋಟ ಪ್ರಕರಣದ ಸಾಕ್ಷಿಯಾಗಿದ್ದಾರೆ, ಹೊರತು ಆರೋಪಿಯಲ್ಲ ಎಂದು ಎನ್‌ಐಎ ಸ್ಪಷ್ಟನೆ ನೀಡಿದೆ.
ಕರ್ನಾಟಕ ರಾಜ್ಯ ಕಾಂಗ್ರೆಸ್ ಟ್ವಿಟರ್ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಟ್ವಿಟರ್ ಈ ಕುರಿತು ಪೋಸ್ಟ್ ಮಾಡಿದೆ. ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಬಿಜೆಪಿ ಮುಖಂಡ, ತೀರ್ಥಹಳ್ಳಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯನ್ನು ಬಂಧಿಸಿದೆ. ಬಿಜಿಪಿ ಬಾಂಬ್ ಬೆಂಗಳೂರು ಮಾಡಲು ಹೊರಟಿದೆ. ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಬಿಜೆಪಿ ತನ್ನ ಕಾರ್ಯಕರ್ತರ ಮೂಲಕ ಷಡ್ಯಂತ್ರ ರೂಪಿಸಿದೆ? ಎಂದು ಟ್ವೀಟ್ ಮಾಡಿತ್ತು. ಸಚಿವ ದಿನೇಶ್ ಗುಂಡೂರಾವ್ ಕೇಸರಿ ಭಯೋತ್ಪಾದನೆ ಎಂದು ಪೋಸ್ಟ್ ಮಾಡಿದ್ದಾರೆ. ಧರ್ಮ ರಕ್ಷಣೆ ಹೆಸರಲ್ಲಿ ರಾಜ್ಯದಲ್ಲಿ ಬಿಜೆಪಿ ನಡೆಸುತ್ತೀರೋ ಕೇಸರಿ ಭಯೋತ್ಪಾದನೆ ಎಷ್ಟು ಗಂಭೀರ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದೆ ಅನ್ನೋದಕ್ಕೆ ಇದಕ್ಕಿಂತಾ ಸಾಕ್ಷಿ ಬೇಕಾ? ಆರ್‌ಎಸ್‌ಎಸ್ ಸಿದ್ಧಾಂತಗಳನ್ನು ದೇಶದ ಮೇಲೆ ಹೇರುತ್ತಿರುವ ಕೇಂದ್ರ ಬಿಜೆಪಿಯು ಇದಕ್ಕೇನು ಹೇಳುತ್ತದೆ? ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದರು.
ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ, ಹಿಂದೂಗಳ ಹೆಸರಿಟ್ಟುಕೊಂಡು ಸಂಚು..!
ಇತ್ತ ಕೆಲ ಮಾಧ್ಯಮಗಳು , ವಿಚಾರಣೆಗೊಳಪಟ್ಟಿರುವ ಬಿಜೆಪಿ ಕಾರ್ಯಕರ್ತರ ಶಂಕಿತರೊಂದಿಗೆ ಸಂಬಂಧ ಹೊಂದಿದ್ದ ಎಂದು ವರದಿ ಮಾಡಿದೆ. ಇದೀಗ ಎನ್‌ಐಎ ಅಧಿಕೃತ ಮಾಹಿತಿ ಮೂಲಕ ಸ್ಪಷ್ಟನೆ ನೀಡಿದೆ.